Petrol Diesel price: ಇತರ ಎಲ್ಲಾ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಇಂಧನ ಅಗ್ಗ!

By Suvarna NewsFirst Published Nov 7, 2021, 4:14 PM IST
Highlights
  • ಸತತ ಏರಿಕೆ ಕಾಣುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆ ತಟಸ್ಥ
  • ಇತರ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆ
  • ಬೆಂಗಳೂರು ಸೇರಿ ಇತರ ಮಹಾನಗರಗಳಲ್ಲಿ ಇಂಧನ ದರ ವಿವರ ಇಲ್ಲಿದೆ

ಬೆಂಗಳೂರು(ನ.07): ಸತತ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಹಾಗೂ ಡೀಸೆಲ್(Petrol Diesel Price0 ಬೆಲೆ ಅಬಕಾರಿ ಸುಂಕ(VAT) ಕಡಿತದ ಬಳಿಕ ತಟಸ್ಥಗೊಂಡಿದೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆಗೆ ಸುಂಕ ಕಡಿತಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿತ್ತು. ಇದರ ಬೆನ್ನಲ್ಲೇ ಬಿಜೆಪಿ(BJP) ಆಡಳಿತ ರಾಜ್ಯಗಳು ರಾಜ್ಯ ಸರ್ಕಾರ ಹಾಕಿದ್ದ ಸುಂಕ ಕಡಿತಗೊಳಿಸಿದೆ. ಪರಿಣಾಮ ದೇಶದಲ್ಲಿ ಇದೀಗ ಕರ್ನಾಟಕದಲ್ಲಿ(Karnataka) ಪೆಟ್ರೋಲ್ ಡೀಸೆಲ್ ಅಗ್ಗವಾಗಿದೆ.

Fuel Price Drop: ಪೆಟ್ರೋಲ್ ಡೀಸೆಲ್ ಬಳಿಕ ಇದೀಗ LPG ಸಿಲಿಂಡರ್ ಬೆಲೆ ಇಳಿಕೆಗೆ ಒತ್ತಾಯ!

ಸತತ 3ನೇ ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆಯಾಗಿಲ್ಲ. ಹೀಗಾಗಿ ಭಾರತದಲ್ಲಿ ಏರಿಕೆಯಾಗುತ್ತಿದ್ದ ತೈಲ ದರ ಇದೀಗ ತಟಸ್ಥವಾಗಿದೆ. ದರ ಕಡಿತದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ತಟಸ್ಥಗೊಂಡಿರುವುದು ಮತ್ತಷ್ಟು ಸಮಾಧಾನ ತಂದಿದೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ಸುಂಕ 5 ರೂಪಾಯಿ ಕಡಿತಗೊಳಿಸಿದ್ದರೆ, ಡೀಸೆಲ್ ಮೇಲಿನ ಸುಂಕವನ್ನು 10 ರೂಪಾಯಿ ಕಡಿತಗೊಳಿಸಿದೆ. ಇತ್ತ ಬಸವರಾಜ್ ಬೊಮ್ಮಾಯಿ(Basavaraj Bommai) ನೇತೃತ್ವದ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ಸುಂಕವನ್ನು 7 ರೂಪಾಯಿ ವರೆಗೆ ಕಡಿತಗೊಳಿಸಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಪೆಟ್ರೋಲ್ ಬೆಲೆ ಒಟ್ಟು 13 ರೂಪಾಯಿ ಕಡಿತಗೊಂಡಿದೆ. ಡೀಸೆಲ್ ಬೆಲೆ 17 ರೂಪಾಯಿ ಕಡಿತಗೊಳಿಸಿದೆ.

22 ರಾಜ್ಯಗಳಲ್ಲಿ ಇಳಿದ ಪೆಟ್ರೋಲ್, ಡೀಸೆಲ್ ದರ - ಎಲ್ಲಿ ಹೆಚ್ಚು..?

ಭಾನುವಾರ ಬೆಂಗಳೂರಿನಲ್ಲಿ(Bengaluru) ಪೆಟ್ರೋಲ್ ಬೆಲೆ 100.58 ರೂಪಾಯಿ ಇದ್ದರೆ, ಡೀಸೆಲ್ ಬೆಲೆ 85.01 ರೂಪಾಯಿ ಇದೆ. ಇತರ ರಾಜ್ಯ ಹಾಗೂ ಮಹಾನಗರಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅತೀ ಕಡಿಮೆ ಬೆಲೆಗೆ ಪೆಟ್ರೋಲ್ ಹಾಗೂ ಡೀಸೆಲ್ ಲಭ್ಯವಿದೆ.  

ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 103.97 ರೂಪಾಯಿ. ಡೀಸೆಲ್ ಬೆಲೆ 86.67 ರೂಪಾಯಿ. ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 109.98  ರೂಪಾಯಿ. ಡೀಸೆಲ್ ಬೆಲೆ  94.14 ರೂಪಾಯಿ. ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ 104.67  ರೂಪಾಯಿ. ಡೀಸೆಲ್ ಬೆಲೆ  89.79 ರೂಪಾಯಿ. ಹೈದರಾಬಾದ್‌ನಲ್ಲಿ ಪೆಟ್ರೋಲ್ ಬೆಲೆ 108.20 ರೂಪಾಯಿ ಹಾಗೂ ಡೀಸೆಲ್ ಬೆಲೆ 94.62 ರೂಪಾಯಿ. ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 101.40 ರೂಪಾಯಿ ಹಾಗೂ  ಡೀಸೆಲ್ ಬೆಲೆ  91.43  ರೂಪಾಯಿ.

Fuel Price Drop:'ದೀಪಾವಳಿ ಕೊಡುಗೆ ಅಲ್ಲ, ದೇಶದಾದ್ಯಂತ ನಡೆದ ಉಪಚುನಾವಣೆಗಳ ಕೊಡುಗೆ'

ಬಿಜೆಪಿ ಆಡಳಿತ ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯದಲ್ಲಿ ಇಂದನ ದರ ಇಳಿಕೆ ಮಾಡಿಲ್ಲ. ಇದೀಗ ಬಿಜೆಪಿ ನಾಯಕರು, ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳನ್ನು ಪ್ರಶ್ನಿಸಿದೆ.

ಈ ಬೆಳವಣಿಗೆ ನಡುವೆ ಪಂಜಾಬ್‌ನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಇಳಿಕೆಗೆ ನಿರ್ಧರಿಸಿದೆ. ಪಂಜಾಬ್ ಸರ್ಕಾರ ಪೆಟ್ರೋಲ್ ಮೇಲೆ 10 ರೂಪಾಯಿ ಸುಂಕ ಕಡಿತ ಮಾಡಿದ್ದರೆ ಡೀಸೆಲ್ ಮೇಲೆ 5 ರೂಪಾಯಿ ಸುಂಕ ಕಡಿತ ಮಾಡಿದೆ. ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಂಜಾಬ್ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ತಲ ದರ ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ ಎಂದು ಸಿಎಂ ಚರಣಜಿತ್ ಸಿಂಗ್ ಚನಿ ಹೇಳಿದ್ದಾರೆ.

ಇಂದು(ನ.07) ಪಂಜಾಬ್‌ನಲ್ಲಿ ಸುಂಕ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ನಾಳೆಯಿಂದ ಪಂಜಾಬ್‌ನಲ್ಲಿ ದೇಶದಲ್ಲೇ ಅತೀ ಕಡಿಮೆ ಬೆಲೆ ಪೆಟ್ರೋಲ್ ಹಾಗೂ ಡೀಸೆಲ್ ಲಭ್ಯವಿದೆ. ಪಂಜಾಬ್ ಸರ್ಕಾರದ ಕಡಿತದ ಬಳಿಕ ಪೆಟ್ರೋಲ್ ಬೆಲೆ 96.16 ರೂಪಾಯಿ ಆಗಲಿದೆ. ಇನ್ನು ಡೀಸೆಲ್ ಬೆಲೆ 84.80 ರೂಪಾಯಿಗೆ ಇಳಿಕೆ ಆಗಲಿದೆ.

click me!