80 ದಿನ ಬಳಿಕ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ!

By Kannadaprabha News  |  First Published Jun 8, 2020, 8:46 AM IST

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ: 80 ದಿನ ಬಳಿಕ ಹೆಚ್ಚಳ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ


ನವದೆಹಲಿ(ಜೂ.08): ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು ಭಾನುವಾರ ಲೀಟರ್‌ಗೆ ತಲಾ 60 ಪೈಸೆಯಷ್ಟುಏರಿಕೆಯಾಗಿದೆ.

ಮಾ.14ರಂದು ತೈಲ ಕಂಪನಿಗಳು ದರ ಏರಿಸಿದ್ದ ಬಳಿಕ ದರ ಏರಿಕೆಯಾಗಿರಲಿಲ್ಲ. ಕಾರಣ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರೀ ಪ್ರಮಾಣದಲ್ಲಿ ಇಳಿದಿತ್ತು. ಈ ವೇಳೆ ಸರ್ಕಾರ ದರ ಇಳಿಕೆ ಬದಲು, ಸುಂಕ ಏರಿಸುವ ಮೂಲಕ ಖಜಾನೆ ಭರ್ತಿ ಮಾಡಿಕೊಂಡಿತ್ತು. ಇದೀಗ ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲೂ ದರ ಹೆಚ್ಚಿಸಲಾಗಿದೆ.

Latest Videos

undefined

ಗುಡ್‌ ನ್ಯೂಸ್: ಚಿನ್ನ, ಬೆಳ್ಳಿ ಬೆಲೆಯಲ್ಲಿ ದಾಖಲೆಯ ಇಳಿಕೆ!

ಏರಿಕೆ ಬಳಿಕ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀ.ಗೆ 74.18 ರು. ಮತ್ತು ಡೀಸೆಲ್‌ ದರ 66.54 ರು.ಗೆ ತಲುಪಿದೆ.

click me!