ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಸಾರ್ವಕಾಲಿಕ ಗರಿಷ್ಠ!

Published : Jan 20, 2021, 07:50 AM IST
ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಸಾರ್ವಕಾಲಿಕ ಗರಿಷ್ಠ!

ಸಾರಾಂಶ

ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಸಾರ್ವಕಾಲಿಕ ಗರಿಷ್ಠ| ನಿನ್ನೆ ಮತ್ತೆ 25 ಪೈಸೆ ಹೆಚ್ಚಳ| ಬೆಂಗಳೂರಲ್ಲಿ ಪೆಟ್ರೋಲ್‌ 88.07 ರು.| ಡೀಸೆಲ್‌ ಬೆಲೆ 80 ರು. ಅಂಚಿನಲ್ಲಿ

ನವದೆಹಲಿ(ಜ.20): ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳು ಮಂಗಳವಾರ ಮತ್ತೊಂದು ಸಾರ್ವಕಾಲಿಕ ದಾಖಲೆ ಸ್ಥಾಪಿಸಿವೆ. ಪೆಟ್ರೋಲ್‌ ದರ 25 ಪೈಸೆ ಏರಿದ್ದು, ದಿಲ್ಲಿಯಲ್ಲಿ ಇದೇ ಮೊದಲ ಬಾರಿಗೆ 85 ರು. ದಾಟಿದೆ. ಇನ್ನು ಬೆಂಗಳೂರಿನಲ್ಲೂ ದಾಖಲೆಯ 88.07 ರು.ಗೆ ಪೆಟ್ರೋಲ್‌ ದರ ಏರಿದೆ.

ದಿಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 85 ರು. ದಾಖಲಾಗಿದ್ದರೆ, ಮುಂಬೈನಲ್ಲಿ 91.8 ರು.ಗೆ ಏರಿತು. ಸೋಮವಾರವಷ್ಟೇ 25 ಪೈಸೆ ಹೆಚ್ಚಿಸಲಾಗಿತ್ತು. ಮಂಗಳವಾರದ ದರ ಏರಿಕೆಯೊಂದಿಗೆ 2 ದಿನದಲ್ಲಿ 50 ಪೈಸೆ ಏರಿದಂತಾಗಿದೆ.

ಇನ್ನು ಡೀಸೆಲ್‌ ದರ 27 ಪೈಸೆ ಏರಿದ್ದು, ದಿಲ್ಲಿಯಲ್ಲಿ 75.38 ರು.ಗೆ ಹೆಚ್ಚಿದೆ. ಮುಂಬೈನಲ್ಲಿ ದಾಖಲೆಯ 82.13 ರು.ಗೆ ಏರಿದೆ. ಬೆಂಗಳೂರಿನಲ್ಲಿ ಡೀಸೆಲ್‌ 80 ರು. ಸನಿಹಕ್ಕೆ ಧಾವಿಸಿದ್ದು, ಮಂಗಳವಾರ 27 ಪೈಸೆ ಏರಿ 79.94 ರು.ಗೆ ನೆಗೆದಿದೆ.

ಒಟ್ಟಾರೆ ಜನವರಿ 6ರ ಬಳಿಕ ಪೆಟ್ರೋಲ್‌ 1.49 ರು. ಹಾಗೂ ಡೀಸೆಲ್‌ 1.51 ರು. ಏರಿದೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಮದುವೆ ವ್ಲಾಗ್ ಪೋಸ್ಟ್ ಮಾಡಿ ಕೋಟಿ ಬಾಚಿಕೊಂಡ ವ್ಲಾಗರ್