
ನವದೆಹಲಿ(ಜ.19): ಕೇಂದ್ರ ಸರ್ಕಾರ ಆದ್ಯತಾ ವಲಯಕ್ಕೆ ಕೊರೋನಾ ಲಸಿಕೆ ಪೂರೈಕೆ ಆರಂಭಿಸಿದ ಬೆನ್ನಲ್ಲೇ, ಇತ್ತ ಖಾಸಗಿ ವಲಯದಲ್ಲಿ ದೇಶದ ಬೃಹತ್ ಉದ್ಯಮ ಸಂಸ್ಥೆಗಳು ಸ್ವತಃ ತಾವು ಕೂಡಾ ನೇರವಾಗಿ ಕೊರೋನಾ ಲಸಿಕೆಯನ್ನು ಉತ್ಪಾದನಾ ಕಂಪನಿಗಳಿಂದ ಲಸಿಕೆ ಖರೀದಿಸುವ ಸಂಬಂಧ ಮಾತುಕತೆ ಆರಂಭಿಸಿವೆ.
ಆದ್ಯತಾ ವಲಯಕ್ಕೆ 3 ಕೋಟಿ ಲಸಿಕೆಯನ್ನು ಉಚಿತವಾಗಿ ಪೂರೈಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ನಂತರ 27 ಕೋಟಿ ಜನರಿಗೆ 2ನೇ ಹಂತದಲ್ಲಿ ಮತ್ತು 3ನೇ ಹಂತದಲ್ಲಿ 50 ಕೋಟಿ ಜನರಿಗೆ ಲಸಿಕೆ ನೀಡುವ ಉದ್ದೇಶ ಸರ್ಕಾರದ್ದು. ಅದರೆ ಇವರಿಗೆ ಉಚಿತವಾಗಿ ಲಸಿಕೆ ನೀಡುವ ಸಾಧ್ಯತೆ ತೀರಾ ಕಡಿಮೆ. ಜೊತೆಗೆ 2ನೇ ಹಂತದಲ್ಲಿ ಆರೋಗ್ಯವಂತರಿಗೆ ಲಸಿಕೆ ಸಿಗುವ ಸಾಧ್ಯತೆ ಕಡಿಮೆ. ಆರೋಗ್ಯವಂತರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲೇ ಲಸಿಕೆ ಸಿಗಬೇಕಾದರೆ ಇನ್ನೂ 6-8 ತಿಂಗಳ ಕಾಯಬೇಕು.
ಆದರೆ ದ್ಯತಾ ವಲಯಕ್ಕೆ ಅಗತ್ಯ ಲಸಿಕೆ ಪೂರೈಕೆ ಬಳಿಕ, ಏಪ್ರಿಲ್ - ಮೇ ವೇಳೆಗೆ ಖಾಸಗಿಯಾಗಿ ಲಸಿಕೆ ಮಾರಲು ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಆದಷ್ಟುಶೀಘ್ರ ತಮ್ಮ ಸಿಬ್ಬಂದಿಗೆ ಲಸಿಕೆ ನೀಡಿ, ಅವರನ್ನು ಸೋಂಕಿನಿಂದ ಮುಕ್ತವಾಗಿಡುವ ನಿರ್ಧಾರಕ್ಕೆ ಬಂದಿವೆ. ಹೀಗಾಗಿ ಜಿಂದಾಲ್, ಮಹೀಂದ್ರಾ, ಐಟಿಸಿ ಕಂಪನಿಗಳು ಲಸಿಕೆ ಉತ್ಪಾದನೆಯಲ್ಲಿ ತೊಡಗಿರುವ ಕಂಪನಿಗಳ ಜೊತೆ ಪೂರ್ವಭಾವಿ ಮಾತುಕತೆ ಆರಂಭಿಸಿವೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.