Petrol, Diesel Rate: ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಇಳಿಕೆಯಾಗಿದೆಯಾ? ರಾಜ್ಯದ ಪ್ರಮುಖ ನಗರಗಳಲ್ಲಿ ಇಂಧನ ದರ ಎಷ್ಟಿದೆ?

By Suvarna NewsFirst Published Dec 8, 2021, 10:35 AM IST
Highlights

ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಮತ್ತೆ ಲಾಕ್ ಡೌನ್ ಆಗಬಹುದಾ? ಪೆಟ್ರೋಲ್, ಡೀಸೆಲ್ ಬೆಲೆಯೇರಿಕೆಯಾಗಬಹುದಾ ಎಂಬ ಅನುಮಾನ ವಾಹನ ಸವಾರರಲ್ಲಿ ಮೂಡಿದ್ದರೂ ಕಳೆದ ಕೆಲವು ದಿನಗಳಿಂದ ಇಂಧನ ದರ ಸ್ಥಿರತೆ ಕಾಯ್ದುಕೊಂಡಿರೋದು ಕೊಂಚ ನೆಮ್ಮದಿ ಮೂಡಿಸಿದೆ.

ಬೆಂಗಳೂರು (ಡಿ.8): ರಾಜ್ಯದ ಪ್ರಮುಖ ನಗರಗಳಲ್ಲಿ(Major cities) ಪೆಟ್ರೋಲ್ (Petrol) ಹಾಗೂ ಡೀಸೆಲ್(Diesel) ಬೆಲೆಯಲ್ಲಿ ಬುಧವಾರ (ಡಿ.8) ಕೂಡ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ತಿಂಗಳು ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ (Central Government)ಏರಿಕೆಯ ಹಾದಿಯಲ್ಲಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ತಗ್ಗಿಸಲು ಅಬಕಾರಿ ಸುಂಕವನ್ನು (Excise duty) ಕಡಿತಗೊಳಿಸಿತ್ತು. ಪರಿಣಾಮ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಗಮನಾರ್ಹ ಇಳಿಕೆಯಾಯ್ತು. ಸರ್ಕಾರ ಪೆಟ್ರೋಲ್ ದರದಲ್ಲಿ 5ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 10ರೂ. ಕಡಿತಗೊಳಿಸಿತ್ತು. ಇದರ ಬೆನ್ನಲ್ಲೇ ಎನ್ ಡಿಎ (NDA) ಹಾಗೂ ಅದರ ಮಿತ್ರಪಕ್ಷಗಳು ಅಧಿಕಾರದಲ್ಲಿರೋ ರಾಜ್ಯಗಳಲ್ಲಿ  ಕೂಡ  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲಿನ ವ್ಯಾಟ್  (VAT) ಅನ್ನು ಆಯಾ  ಸರ್ಕಾರಗಳು ಕಡಿತಗೊಳಿಸಿದವು. ಪರಿಣಾಮ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಮತ್ತಷ್ಟು ಇಳಿಕೆ ದಾಖಲಿಸಿತು. ಇನ್ನು ದೆಹಲಿ ಸರ್ಕಾರ ಕಳೆದ ವಾರ ಪೆಟ್ರೋಲ್  ಮೇಲಿನ ವ್ಯಾಟ್ (VAT)ಕಡಿತಗೊಳಿಸೋ ಮೂಲಕ ಲೀಟರ್ ಗೆ 8ರೂ.  ಇಳಿಕೆ ಮಾಡಿತ್ತು. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿದ ಬಳಿಕ ದೆಹಲಿ ಹೊರತುಪಡಿಸಿ ದೇಶದ ಎಲ್ಲ ನಗರಗಳಲ್ಲೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ.  ಹಾಗಾದ್ರೆ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ (Cities)ಇಂದು  (ಡಿ.8) ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟಿದೆ?

ರಾಜ್ಯದ ಪ್ರಮುಖ ನಗರಗಳಲ್ಲಿಇಂಧನ ದರ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bengaluru)ಇಂದು ಪೆಟ್ರೋಲ್  ದರ ಲೀಟರ್ ಗೆ 100.58ರೂ. ಹಾಗೂ ಡೀಸೆಲ್  ದರ 85.01 ರೂ.ಇದ್ದು, ಕಳೆದ 15 ದಿನಗಳಿಂದ ಯಥಾಸ್ಥಿತಿ ಕಾಯ್ದುಕೊಂಡಿದೆ. ಹುಬ್ಬಳ್ಳಿಯಲ್ಲಿ (Hubli)ಪೆಟ್ರೋಲ್ ಬೆಲೆ 100.31ರೂ. ಹಾಗೂ ಡೀಸೆಲ್ ಬೆಲೆ 84.79 ರೂ.ಇದೆ. ಮಂಗಳೂರಿನಲ್ಲಿ (Mangalore) ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದ್ದು, ಕಳೆದ ಅನೇಕ ದಿನಗಳಿಂದ ಈ ದರದಲ್ಲಿ ಸ್ವಲ್ಪವೂ ಬದಲಾವಣೆಯಾಗಿಲ್ಲ. ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ(Mysore)ಪೆಟ್ರೋಲ್ ದರ ಲೀಟರ್ ಗೆ 100.08ರೂ. ಹಾಗೂ ಡೀಸೆಲ್ ದರ ಲೀಟರ್ ಗೆ  84.56ರೂ.ಇದೆ.  ಬಿಸಿಲ ನಗರಿ ಕಲಬುರಗಿಯಲ್ಲಿ(Kalburgi)ಪೆಟ್ರೋಲ್ ಗೆ 100.28ರೂ. ಹಾಗೂ ಡೀಸೆಲ್ ಗೆ 84.77ರೂ.ಇದೆ. 

ಕೊರೋನಾ ಪಿಡುಗಿದ್ದರೂ ಧನಿಕರ ಸಂಪತ್ತು ದಾಖಲೆ ಏರಿಕೆ!

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

USD ವಿರುದ್ಧ 30.5% ರಷ್ಟು ಕುಸಿದ ಪಾಕಿಸ್ತಾನಿ ರೂಪಾಯಿ, ಐತಿಹಾಸಿಕ ಪತನ

GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ. 

"

click me!