ವಾಹನ ಸವಾರರಿಗೊಂದು ಗುಡ್‌ ನ್ಯೂಸ್!

Published : Jul 14, 2021, 03:15 PM ISTUpdated : Jul 14, 2021, 03:18 PM IST
ವಾಹನ ಸವಾರರಿಗೊಂದು ಗುಡ್‌ ನ್ಯೂಸ್!

ಸಾರಾಂಶ

* ಕಚ್ಚಾತೈಲ ಬೆಲೆ ಇಳಿಕೆ ಹಿನ್ನೆಲೆ * ತಿಂಗಳಾಂತ್ಯಕ್ಕೆ ಪೆಟ್ರೋಲ್‌, ಡೀಸೆಲ್‌ ದರ ಕೊಂಚ ಇಳಿಕೆ? * ಈಗಾಗಲೇ ಪ್ರತೀ ನಿತ್ಯದ ದರ ಪರಿಷ್ಕರಣೆಯಿಂದ ಭಾರೀ ಪ್ರಮಾಣದ ಏರಿಕೆ

ನವದೆಹಲಿ(ಜು.14): ಈಗಾಗಲೇ ಪ್ರತೀ ನಿತ್ಯದ ದರ ಪರಿಷ್ಕರಣೆಯಿಂದ ಭಾರೀ ಪ್ರಮಾಣದ ಏರಿಕೆ ಕಂಡು ಶತಕ ದಾಟಿರುವ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಈ ತಿಂಗಳ ಅಂತ್ಯಕ್ಕೆ ಕೊಂಚ ಪ್ರಮಾಣ ಇಳಿಕೆಯಾಗಲಿದೆ ಎಂದು ವರದಿಗಳು ತಿಳಿಸಿವೆ.

ಆದರೆ ಭಾರೀ ಪ್ರಮಾಣದ ದರವೇನು ಕಡಿಮೆಯಾಗಲ್ಲ. ಕೊಂಚವೇ ಕೊಂಚ ಬೆಲೆ ಮಾತ್ರ ಕಡಿಮೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಒಂದು ಹಂತದಲ್ಲಿ ಪ್ರತೀ ಬ್ಯಾರೆಲ್‌ನ ಬ್ರೆಂಟ್‌ ಕಚ್ಚಾತೈಲ ದರವು 77 ಡಾಲರ್‌ಗೆ ಜಿಗಿದಿತ್ತು. ಆದರೆ ಅದೀಗ 75 ಡಾಲರ್‌ಗೆ ಇಳಿಕೆಯಾಗಿದ್ದು, ಈ ದರದಲ್ಲೇ ಸ್ಥಿರತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನಲ್ಲಿ ಹೀಗಿದೆ ಇಂದಿನ ದರ

ಪೆಟ್ರೋಲ್ ಒಂದು ಲೀಟರ್‌ ಬೆಲೆ:  104.58 ರೂ

ಡೀಸೆಲ್ ಒಂದು ಲೀಟರ್‌ ಬೆಲೆ: 95.09 ರೂ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ