Petrol Diesel Price in Karnataka Today: ಉಕ್ರೇನ್ ಮತ್ತು ರಷ್ಯಾ ಯುದ್ಧದಿಂದ ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆ ಏರಿಕೆಯಾದ ಬೆನ್ನಲ್ಲೇ ಭಾರತದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ. ಪ್ರತಿದಿನ ಕನಿಷ್ಠ 80 ಪೈಸೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಬೆಲೆ ಕಳೆದ ಎರಡು ದಿನಗಳಿಂದ ತಟಸ್ಥವಾಗಿದೆ. ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಎಂಬ ಪಟ್ಟಿ ಇಲ್ಲಿದೆ.
ಒಂದೆಡೆ ಅಂತಾರಾಷ್ಟ್ರೀಯ ಕಚ್ಚಾತೈಲ (International Crude Oil Price Today) ಬೆಲೆ ಬ್ಯಾರೆಲ್‌ಗೆ 105 ಡಾಲರ್ ಮುಟ್ಟಿದೆ. ಇತ್ತ ಭಾರತದಲ್ಲಿ ಮಧ್ಯಮವರ್ಗದ ಜನರಿಗೆ ಪೆಟ್ರೋಲ್ - ಡೀಸೆಲ್ (Petrol – Diesel) ಖರೀದಿ ಮಾಡುವುದೂ ಕಷ್ಟ ಎನ್ನುವ ಕಾಲ ಸನ್ನಿಹಿತವಾಗಿದೆ. ಪೆಟ್ರೋಲ್ ಬೆಲೆ 100ರ ಗಡಿದಾಟಿ 110 ರೂಪಾಯಿಗಳನ್ನೂ ಮುಟ್ಟಿದೆ. ಡೀಸೆಲ್ ದರ ಕೂಡ ಇನ್ನೇನು ರೂ. 100 ಮುಟ್ಟಲು ಸಿದ್ಧವಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಿದಂತೆಲ್ಲಾ ಎಲ್ಲಾ ವಸ್ತುಗಳ ಬೆಲೆಯೂ ಏರಿಕೆಯಾಗುತ್ತವೆ. ಇದರಿಂದ ಸಾಮಾನ್ಯ ಬಡ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ಥರವಾಗುತ್ತದೆ. ಪ್ರತಿನಿತ್ಯ 80 ಪೈಸೆಯಷ್ಟು ಏರಿಕೆಯಾಗುತ್ತಲೇ ಇದ್ದ ಬೆಲೆ ಕಳೆದ ಎರಡು ದಿನಗಳಿಂದ ತಟಸ್ಥವಾಗಿದೆ. ಬೆಲೆ ಏರಿಕೆ ಹೀಗೇ ಮುಂದುವರೆದರೆ ಜನ ಇಂಧನ ಖರೀದಿ ಮಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಬೆಲೆ ಏರಿಕೆಗೆ ಕಡಿವಾಣ ಹಾಕಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹೇಳಿದರೆ, ರಾಜ್ಯ ಸರ್ಕಾರ ಇಂಧನದ ಮೇಲಿನ ತೆರಿಗೆ (State Government Tax on Fuel) ಕಡಿತಗೊಳಿಸುತ್ತಿಲ್ಲ. ಕೋವಿಡ್ ಹೊಡೆತದಿಂದ ಇನ್ನೂ ಎದ್ದೇಳಲು ಒದ್ದಾಡುತ್ತಿರುವ ಜನರಿಗೆ ಬೆಲೆಯೇರಿಕೆಯ ಬಿಸಿ ಇನ್ನಷ್ಟು ಪೆಟ್ಟು ನೀಡಿದೆ. ನಮ್ಮ ರಾಜ್ಯದ ಪ್ರತೀ ಜಿಲ್ಲೆಯ ಪೆಟ್ರೋಲ್ - ಡೀಸೆಲ್ ಇಂದಿನ ದರ ಈ ಕೆಳಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.