* ಶುಶೃತಿ ಸಹಕಾರ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ
* ವಿತ್‌ಡ್ರಾಗೆ 5000 ರು. ಮಿತಿ ನಿಗದಿ ಮಾಡಿದ ಆರ್‌ಬಿಐ
* ಸಾಲ, ಮುಂಗಡ, ಹೂಡಿಕೆಗೆ ಆರ್‌ಬಿಐ ಅನುಮತಿ ಕಡ್ಡಾಯ
ಮುಂಬೈ(ಏ. 08) ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಬೆಂಗಳೂರು (Bengaluru) ಮೂಲದ ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್ ನಿಯಮಿತದ ಮೇಲೆ ಆರ್‌ಬಿಐ(RBI) ಗುರುವಾರ ಹಲವು ನಿರ್ಬಂಧಗಳನ್ನು ವಿಧಿಸಿದೆ.
ಸಹಕಾರ ಬ್ಯಾಂಕ್ ಯಾವುದೇ ಸಾಲ ಅಥವಾ ಮುಂಗಡ ನೀಡಲು, ನವೀಕರಿಸಲು ಆರ್‌ಬಿಐ ಪೂರ್ವಾನುಮತಿ ಕಡ್ಡಾಯ. ಹಾಗೆಯೇ ಹೂಡಿಕೆ ಮಾಡಲು, ಹೊಸ ಹೊಣೆಗಾರಿಕೆ ಪಡೆಯಲು ಮತ್ತು ಹೊಸ ಠೇವಣಿಯನ್ನು ಸ್ವೀಕರಿಸಲು ಆರ್‌ಬಿಐ ಅನುಮೋದನೆ ಪಡೆಯಬೇಕಾಗುತ್ತದೆ. ಅಲ್ಲದೆ ಎಲ್ಲಾ ಉಳಿತಾಯ ಬ್ಯಾಂಕ್ ಅಥವಾ ಚಾಲ್ತಿ ಖಾತೆಗಳು ಅಥವಾ ಠೇವಣಿದಾರರ ಯಾವುದೇ ಖಾತೆಯಿಂದ 5000 ರು. ಮಾತ್ರ ವಿತ್ ಡ್ರಾ ಮಾಡಬಹುದು. ಈ ನಿರ್ದೇಶನವು ಏ.7, 2022ರಿಂದ ಮುಂದಿನ 6 ತಿಂಗಳವರೆಗೆ ಅಸ್ತಿತ್ವದಲ್ಲಿರುತ್ತದೆ ಮತ್ತು ಪರಿಶೀಲನೆಗೆ ಒಳಪಟ್ಟಿರುತ್ತದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ನೋಟುಗಳ ಮುದ್ರಣಕ್ಕೆ ಸರ್ಕಾರದಿಂದ 4.5 ಸಾವಿರ ಕೋಟಿ ಖರ್ಚು, ಪ್ರತಿ ಮುಖಬೆಲೆಯ ನೋಟಿಗೆ ಆಗುವ ಖರ್ಚೆಷ್ಟು!
ಆರ್‌ಬಿಐನ ಈ ನಿರ್ದೇಶನವನ್ನು ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸುವ ಉದ್ದೇಶ ಎಂದು ಪರಿಗಣಿಸಬಾರದು. ಬ್ಯಾಂಕ್ ಹಣಕಾಸು ಸ್ಥಿತಿ ಸುಧಾರಿಸುವವರೆಗೆ ನಿರ್ಬಂಧಗಳೊಂದಿಗೆ ವ್ಯವಹಾರವನ್ನು ಮುಂದುವರಿಸುತ್ತದೆ ಎಂದು ಸ್ಪಷ್ಟಪಡಿಸಿದೆ.
ಏಪ್ರಿಲ್ ನಲ್ಲಿ ಬ್ಯಾಂಕ್ ರಜೆಗಳ ಪಟ್ಟಿ: ಏಪ್ರಿಲ್ ನಲ್ಲಿ ಬ್ಯಾಂಕ್ ಗಳಿಗೆ 15 ದಿನಗಳ ಕಾಲ ರಜೆ. ಆರ್ ಬಿಐ ಪ್ರತಿ ತಿಂಗಳು ಬ್ಯಾಂಕುಗಳಿಗೆ ಸಂಬಂಧಿಸಿ ರಜಾಪಟ್ಟಿ ಬಿಡುಗಡೆ ಮಾಡುತ್ತದೆ. ಆದ್ರೆ ಈ ಎಲ್ಲ ರಜೆಗಳು ಎಲ್ಲ ರಾಜ್ಯಗಳಿಗೂ ಅನ್ವಯಿಸೋದಿಲ್ಲ. ಹೀಗಾಗಿ ಆಯಾ ರಾಜ್ಯಕ್ಕೆ ಸಂಬಂಧಿಸಿದ ರಜೆಗಳನ್ನು ಮಾತ್ರ ಪರಿಗಣಿಸಬೇಕಾಗುತ್ತದೆ. ಆದ್ರೆ ಸಾರ್ವಜನಿಕ ಹಾಗೂ ಗೆಜೆಟೆಡ್ ರಜೆಗಳು ಮಾತ್ರ ದೇಶವ್ಯಾಪ್ತಿ ಎಲ್ಲ ಬ್ಯಾಂಕುಗಳಿಗೂ ಅನ್ವಯಿಸುತ್ತವೆ. ಎಲ್ಲ ಭಾನುವಾರ (Sunday),ಎರಡನೇ ಹಾಗೂ ನಾಲ್ಕನೇ ಶನಿವಾರ (Saturday) ದೇಶಾದ್ಯಂತ ಎಲ್ಲ ಬ್ಯಾಂಕುಗಳಿಗೆ ರಜೆಯಿರುತ್ತದೆ.
ಏಪ್ರಿಲ್ 9: ಎರಡನೇ ಶನಿವಾರ
ಏಪ್ರಿಲ್ 10: ಭಾನುವಾರ
ಏಪ್ರಿಲ್ 14: ಅಂಬೇಡ್ಕರ್ ಜಯಂತಿ /ಮಹಾವೀರ್ ಜಯಂತಿ/ಬೈಸಾಕಿ/ವೈಶಾಖಿ/ತಮಿಳು ಹೊಸ ವರ್ಸ/ಬಿಜು ಹಬ್ಬ/ಬೊಹಾಗ್ (ಮೇಘಾಲಯ ಹಾಗೂ ಹಿಮಾಚಲ ಪ್ರದೇಶ ಹೊರತುಪಡಿಸಿ ದೇಶಾದ್ಯಂತ)
ಏಪ್ರಿಲ್ 15: ಗುಡ್ ಫ್ರೈಡೇ/ಬೆಂಗಾಲಿ ಹೊಸ ವರ್ಷ/ಹಿಮಾಚಲ ಡೇ/ವಿಶು/ಬೊಹಗ್ ಬಿಹು (ರಾಜಸ್ಥಾನ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ದೇಶದ ಉಳಿದ ಭಾಗಗಳಲ್ಲಿ)
ಏಪ್ರಿಲ್ 16: ಬೊಹಾಗ್ ಬಿಹು (ಅಸ್ಸಾಂ)
ನಮ್ಮಲ್ಲಿಯೇ ಇಂಕ್: ಭಾರತದಲ್ಲಿ ಮುದ್ರಣ ಆಗುವ ನೋಟುಗಳಿಗೆ ಬೇಕಾದ ಇಂಕ್ ಉತ್ಪಾದನೆಯಲ್ಲಿ ನಮ್ಮ ದೇಶ ಸ್ವಾವಲಂಬನೆ ಕಂಡಿದೆ. ಮೈಸೂರಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಘಟಕಕ್ಕೆ ಭೇಟಿ ನೀಡಿದ ಗವರ್ನರ್ ಶಕ್ತಿಕಾಂತ ದಾಸ್ (Governor Shaktikanta Das ) ಅವರು ಮಾರ್ಚ್ 28ರಂದು ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್‌ನ (ಬಿಆರ್ ಬಿಎನ್ ಎಂಪಿಎಲ್) ವರ್ಣಿಕಾ (Varnika) ಇಂಕ್ ಉತ್ಪಾದನಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದರು.
ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೈವೇಟ್ ಲಿಮಿಟೆಡ್ ಬ್ಯಾಂಕ್ ನೋಟುಗಳ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ "ವರ್ಣಿಕಾ' ಇಂಕ್ ಹೊರ ತಂದಿದೆ. ಈ ಘಟಕ ವಾರ್ಷಿಕವಾಗಿ 1500 ಮೆಟ್ರಿಕ್ ಟನ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಅಷ್ಟು ಮಾತ್ರವಲ್ಲದೆ ಇದು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಸ್ಥಾಪನೆಗೊಂಡಿದೆ. ಬ್ಯಾಂಕ್ ನೋಟುಗಳ ಪ್ರಿಂಟಿಂಗ್‌ಗೆ ಅವಶ್ಯಕತೆ ಇರುವ ಇಂಕ್ ಅನ್ನು ಈ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಈ ಘಟಕವು ಕಲರ್ ಶಿಫ್ಟ್ ಇಂಟಾಗ್ಲಿಯೋ ಇಂಕ್ ಉತ್ಪಾದಿಸುವುದರೊಂದಿಗೆ ಭಾರತದಲ್ಲಿರುವ ಬ್ಯಾಂಕ್ ನೋಟು ಮುದ್ರಣಗಳಿಗೆ ಪೂರ್ಣ ಅವಶ್ಯಕತೆಯಿರುವ ಇಂಕ್ ಅನ್ನು ಪೂರೈಸುವ ಉದ್ದೇಶವನ್ನು ಹೊಂದಿದೆ. ಇದರಿಂದ ಪರಿಣಾಮಕಾರಿ ದಕ್ಷತೆ ಮತ್ತು ಬ್ಯಾಂಕ್ ನೋಟು ಇಂಕ್ ಉತ್ಪಾದನೆಯ ಸ್ವಾವಲಂಬನೆ ಸಾಧಿಸಿದಂತಾಗುತ್ತದೆ.