ಪೆಟ್ರೋಲ್, ಡೀಸೆಲ್ ಮಾಲ್‌ನಲ್ಲೂ ಸಿಗುತ್ತೆ!

Published : Jun 19, 2019, 07:53 AM IST
ಪೆಟ್ರೋಲ್, ಡೀಸೆಲ್ ಮಾಲ್‌ನಲ್ಲೂ ಸಿಗುತ್ತೆ!

ಸಾರಾಂಶ

ಪೆಟ್ರೋಲ್, ಡೀಸೆಲ್ ಮಾಲ್‌ನಲ್ಲೂ ಸಿಗುತ್ತೆ! ಬ್ರಿಟನ್‌ನ ಪ್ರಯೋಗ ಭಾರತದಲ್ಲೂ ಜಾರಿ| ನಿಯಮಾವಳಿಗಳನ್ನು ಮತ್ತಷ್ಟು ಸರಳಗೊಳಿಸುವ ಕುರಿತ ಟಿಪ್ಪಣಿ ರೆಡಿ

ನವದೆಹಲಿ[ಜೂ.19]: ಪೆಟ್ರೋಲ್, ಡೀಸೆಲ್ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸರಗೊಳಿಸುವ ಮೂಲಕ, ಮಾಲ್, ಸೂಪರ್‌ಮಾರ್ಕೆಟ್ ಮತ್ತು ವಾಣಿಜ್ಯ ಕಟ್ಟಡಗಳಲ್ಲೂ ವಿತರಣೆಗೆ ಅವಕಾಶ ಮಾಡಿಕೊಡುವ ಬಗ್ಗೆ ಕೇಂದ್ರ ಸರ್ಕಾರ ಹೆಜ್ಜೆ ಇಟ್ಟಿದೆ ಎನ್ನಲಾಗಿದೆ.

ಹಾಲಿ ಪೆಟ್ರೋಲಿಯಂ ವಿತರಣಾ ವಲಯ ಪ್ರವೇಶಿಸಲು ಕಂಪನಿ ಕನಿಷ್ಠ 2000 ಕೋಟಿ ರು. ಬಂಡವಾಳ ಹೂಡಬೇಕು, 30 ಲಕ್ಷ ಟನ್ ಕಚ್ಚಾತೈಲ ಖರೀದಿಗೆ ಅಗತ್ಯವಿರುವಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಯಾಗಿ ನೀಡಬೇಕು ಎಂಬಿತ್ಯಾದಿ ನಿಯಮಗಳಿವೆ. ಈ ನಿಯಮಾವಳಿಗಳನ್ನು ಮತ್ತಷ್ಟು ಸರಳಗೊಳಿಸಿ ಆ ಕುರಿತ ಸಂಪುಟ ಟಿಪ್ಪಣಿಯನ್ನು ಸಚಿವ ಸಂಪುಟ ಸಭೆ ಮುಂದಿಡಲು ಪೆಟ್ರೋಲಿಯಂ ಸಚಿವಾಲಯ ನಿರ್ಧರಿಸಿದೆ.

ಇದರಿಂದಾಗಿ ದೇಶದ ಚಿಲ್ಲರೆ ಮಾರುಕಟ್ಟೆ ವಲಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಸಂಸ್ಥೆಗಳು ಕೂಡಾ ಪೆಟ್ರೋಲ್, ಡೀಸೆಲ್ ವಿತರಣೆಯ ಹಕ್ಕು ಪಡೆಯಬಹುದಾಗಿದೆ. ಇದು ಜನಸಾಮಾನ್ಯರಿಗೆ ಖರೀದಿ ವ್ಯವಸ್ಥೆ ಯನ್ನು ಮತ್ತಷ್ಟು ಸುಲಭಗೊಳಿಸುತ್ತದೆ ಎಂಬುದು ಸರ್ಕಾರದ ಉದ್ದೇಶ ಎನ್ನಲಾಗಿದೆ. ಬ್ರಿಟನ್‌ನಲ್ಲಿ ಈಗಾಗಲೇ ಈ ಪ್ರಯೋಗ ಭಾರೀ ಯಶಸ್ಸು ಕಂಡಿದೆ. ದೇಶದಲ್ಲಿನ ಒಟ್ಟು ಪೆಟ್ರೋಲ್ ಮಾರಾಟದಲ್ಲಿ ಶೇ.49ರಷ್ಟು , ಡೀಸೆಲ್ ಮಾರಾಟದಲ್ಲಿ ಶೇ.43ರಷ್ಟನ್ನು ಪಾಲನ್ನು, ಸೂಪರ್‌ ಮಾರ್ಕೆಟ್, ಮಾಲ್ ಮತ್ತು ದೊಡ್ಡ ವಾಣಿಜ್ಯ ಕಟ್ಟಡಗಳಲ್ಲಿನ ಪೆಟ್ರೋಲ್ ಬಂಕ್‌ಗಳು ಪಡೆದುಕೊಂಡಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಯೂಟ್ಯೂಬ್ ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!