ಚಿನ್ನದ ದರ ಇದ್ದಕ್ಕಿದ್ದಂತೆ ಏರಿಕೆ, ಇಳಿಯುತ್ತೆ ಬಿಡಿ ಸಾವಕಾಶ

Published : Jun 18, 2019, 04:03 PM ISTUpdated : Jun 18, 2019, 04:12 PM IST
ಚಿನ್ನದ ದರ ಇದ್ದಕ್ಕಿದ್ದಂತೆ ಏರಿಕೆ, ಇಳಿಯುತ್ತೆ ಬಿಡಿ ಸಾವಕಾಶ

ಸಾರಾಂಶ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಹಾದಿಯಲ್ಲಿದೆ. ಚಿನ್ನದ ಜತೆಗೆ ಬೆಳ್ಳಿಯೂ ಕೊಂಚ ಮೇಲ್ಮುಖವಾಗಿದ್ದು ಇದಕ್ಕೆ ಕಾರಣಗಳು ಇಲ್ಲಿವೆ.

ನವದೆಹಲಿ[ಜೂ. 18] ಚಿನ್ನದ ದರ ಏರಿಕೆ ಮತ್ತು ಇಳಿಕೆ  ಸುದ್ದಿ ಗಮನ ಸೆಳೆಯದೇ ಇರುವುದೇ ಇಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾದ ಕಾರಣ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ.

ಯುಎಸ್ ಫೆಡರಲ್ ಬ್ಯಾಂಕ್ ಪಾಲಿಸಿ ಮೀಟಿಂಗ್ ಹತ್ತಿರದಲ್ಲಿ ಇರುವುದರಿಂದ  ರೂಪಾಯಿ ಎದುರು ಡಾಲರ್ ಮತ್ತಷ್ಟು ಶಕ್ತಿಶಾಲಿಯಾಗಿ ಕಂಗೊಳಿಸಿದ್ದು ಚಿನ್ನದ ದರದ ಮೇಲೆ ಪರಿಣಾಮ ಬೀರಿದೆ.

ಕದ್ದ ಚಿನ್ನ ಕಳ್ಳನ ಹೆಂಡ್ತಿಗೆ ಕೊಡಿಸಿದ ಇನ್ಸ್‌ಪೆಕ್ಟರ್‌ !

ಸಹಜವಾಗಿಯೇ ಡಾಲರ್ ಏರಿಕೆ ಕಂಡಾಗ ಹೂಡಿಕೆದಾರರು ಚಿನ್ನದ ಕಡೆ ಮುಖ ಮಾಡುತ್ತಾರೆ. ಇನ್ನು ಕೈಗಾರಿಕಾ ಘಟಕಗಳು ಬೆಳ್ಳಿ ಖರೀದಿಯನ್ನು ಹೆಚ್ಚಿಗೆ ಮಾಡಿದ್ದರಿಂದ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡುಬಂದಿದೆ. ಎಂಸಿಎಕ್ಸ್[ಮಲ್ಟಿ ಕಾಮಾಡಿಟಿ ಎಕ್ಸ್ ಚೆಂಜ್]  ನಲ್ಲಿ 10 ಗ್ರಾಂ ಚಿನ್ನ 33,134 ರಲ್ಲಿ ಟ್ರೇಡ್ ಆಗುತ್ತ 113 ರೂ. ಏರಿಕೆ ಕಂಡಿದ್ದರೆ ಬೆಳ್ಳಿ ಕೆಜಿಗೆ 37,208 ರೂ. ಅಂದರೆ 116 ರೂ. ಏರಿಕೆಯಲ್ಲಿ ವಹಿವಾಟು ನಡೆಸುತ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಯೂಟ್ಯೂಬ್ ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!