11ನೇ ದಿನದಾಟ: ಇನ್ಮೇಲೆ ಇರಲ್ವಾ ಪೆಟ್ರೋಲ್ ದರ ಏರಿಕೆ ಕಾಟ?

By Web DeskFirst Published Oct 28, 2018, 3:37 PM IST
Highlights

11ನೇ ದಿನವೂ ಇಳಿಕೆಯತ್ತ ಮುಖ ಮಾಡಿದ ತೈಲದರ! ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.05 ರೂ.! ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ತೈಲದರ! ಜನತೆಗೆ ನಿರಾಳತೆ ತಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ನವದೆಹಲಿ(ಅ.28): ನಿರಂತರವಾಗಿ ಇಳಿಕೆಯಾಗುತ್ತಿರುವ ಪೆಟ್ರೋಲ್, ಡೀಸೆಲ್ ದರ ಇದೀಗ 11ನೇ ದಿನವೂ ಕೂಡ ಇಳಿದಿದೆ.

ಭಾನುವಾರ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 40 ಪೈಸೆ ಇಳಿಕೆಯಾಗಿದೆ. ಡೀಸೆಲ್ ದರಲ್ಲಿ 33 ಪೈಸೆ ಇಳಿಕೆಯಾಗಿದೆ.  ಇದರಿಂದ ಪೆಟ್ರೋಲ್ ಬೆಲೆ 80.05 ರೂ.ಗಳಾಗಿದ್ದು, ಡೀಸೆಲ್ ಬೆಲೆ 74.05 ರೂ.ನಷ್ಟಾಗಿದೆ.

Petrol&diesel prices in today are Rs 80.05 per litre (decrease by Rs 0.40) & Rs 74.05 per litre (decrease by Rs 0.33), respectively. Petrol&diesel prices in today are Rs 85.54 per litre (decrease by Rs 0.39) & Rs 77.61 per litre (decrease by Rs 0.35), respectively. pic.twitter.com/4LEfw9bTZD

— ANI (@ANI)

ಇನ್ನು ಮುಂಬೈನಲ್ಲಿಯೂ ಕೂಡ  ತೈಲ ದರದಲ್ಲಿ ಇಳಿಕೆಯಾಗಿದ್ದು ಪೆಟ್ರೋಲ್ ಬೆಲೆ  85.54 ರೂ. ಮತ್ತು ಡೀಸೆಲ್ ಬೆಲೆ 77.61 ರೂ.ಗಳಾಗಿದೆ. 

ನಿರಂತರವಾಗಿ ಏರಿಕೆಯಾಗಿ ಜನರ ಜೇಬಿಗೆ ಕತ್ತರಿ ಹಾಕಿದ್ದ ತೈಲ ದರ ಇದೀಗ  ಕಳೆದ 11 ದಿನಗಳಿಂದ ನಿರಂತರವಾಗಿ ಇಳಿಕೆಯಾಗಿದ್ದು, ಇದು ಗ್ರಾಹಕರಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ.

click me!