ಯುದ್ಧ ಭೀತಿ ತಂದ ಫಜೀತಿ: ಪೆಟ್ರೋಲ್ ಬೆಲೆ ದಿಢೀರ್ ಏರಿಕೆ!

Suvarna News   | Asianet News
Published : Jan 07, 2020, 04:38 PM IST
ಯುದ್ಧ ಭೀತಿ ತಂದ ಫಜೀತಿ: ಪೆಟ್ರೋಲ್ ಬೆಲೆ ದಿಢೀರ್ ಏರಿಕೆ!

ಸಾರಾಂಶ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ದಿಢೀರ್ ಏರಿಕೆ| ಇರಾನ್-ಅಮೆರಿಕ ನಡುವೆ ಯುದ್ಧ ಭೀತಿ ಹಿನ್ನೆಲೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆ ಕಂಡ ಕಚ್ಚಾ ತೈಲದ ಬೆಲೆ| ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್'ಗೆ 70 ಡಾಲರ್| ದೇಶದ ಮಹಾ ನಗರಗಳಲ್ಲಿ ಏರಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ|

ನವದೆಹಲಿ(ಜ.05): ಯುದ್ಧದ ಹೊಸ್ತಿಲಲ್ಲಿರುವ ಅಮೆರಿಕ-ಇರಾನ್ ಪರಸ್ಪರ ಬುಸುಗುಡುತ್ತಿರುವುದು ಒಂದೆಡೆ ಇರಲಿ, ಇವೆರಡೂ ರಾಷ್ಟ್ರಗಳ ನಡುವಿನ ವೈಮನಸ್ಸಿಗೆ ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಪರದಾಡುವಂತಾಗಿದೆ.

ಅಮೆರಿಕ-ಇರಾನ್ ವೈಮನಸ್ಸಿನ ಪರಿಣಾಮವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾಗಿದೆ.

ಅಮೆರಿಕ-ಇರಾನ್‌ ಮಧ್ಯೆ ಯುದ್ಧ ನಡೆದರೆ ಭಾರತದಲ್ಲಿ ತೈಲಬೆಲೆ ಗಗನಕ್ಕೆ!

ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 5 ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 12 ಪೈಸೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವ ಇದೆ ಎಂದು ಅಂದಾಜಿಸಲಾಗಿದೆ.

ಈ ಕುರಿತು ಭಾರತೀಯ ತೈಲ ನಿಗಮ ತನ್ನ ವೆಬ್‌ಸೈನ್‌ಲ್ಲಿ ಹೊಸ ದರ ಪಟ್ಟಿ ಪ್ರಕಟಿಸಿದ್ದು, ದೇಶದ ಎಲ್ಲಾ ಮಹಾನಗರಗಳಲ್ಲಿ ತೈಲ ಬೆಲೆ ಏರಿಕೆಯಾಗಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯತ್ತ ಗಮನಹರಿಸುವುದಾದರೆ.

ರಾಷ್ಟ್ರ ರಾಜಧಾನಿ ನವದೆಹಲಿ:

ಪೆಟ್ರೋಲ್-75.74 ರೂ.

ಡೀಸೆಲ್-68.79 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:

ಪೆಟ್ರೋಲ್-78.33 ರೂ.

ಡೀಸೆಲ್-71.15 ರೂ.

ವಾಣಿಜ್ಯ ರಾಜಧಾನಿ ಮುಂಬೈ:
ಪೆಟ್ರೋಲ್- 81.33 ರೂ.

ಡೀಸೆಲ್-72.14 ರೂ.

ತಮಿಳುನಾಡು ರಾಜಧಾನಿ ಚೆನ್ನೈ:

ಪೆಟ್ರೋಲ್-78.69 ರೂ.

ಡೀಸೆಲ್-72. 08 ರೂ.

ರಾಜ್ಯ ರಾಜಧಾನಿ ಬೆಂಗಳೂರು:

ಪೆಟ್ರೋಲ್-78.28 ರೂ.

ಡೀಸೆಲ್-71 ರೂ.

ಇನ್ನು ಹೊಸ ವರ್ಷದ ಮೊದಲ ಏಳು ದಿನದಲ್ಲೇ ಪೆಟ್ರೋಲ್ ಬೆಲೆಯಲ್ಲಿ ಒಟ್ಟು 60 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ ಒಟ್ಟು 83 ಪೈಸೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್'ಗೆ 70 ಡಾಲರ್ ಆಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!