Petrol Price Hike : ಚುನಾವಣೆ ಬಳಿಕ ಪೆಟ್ರೋಲ್‌ ದರ 9 ರು. ಏರಿಕೆ?

Kannadaprabha News   | Asianet News
Published : Mar 03, 2022, 05:30 AM IST
Petrol Price Hike : ಚುನಾವಣೆ ಬಳಿಕ ಪೆಟ್ರೋಲ್‌ ದರ 9 ರು. ಏರಿಕೆ?

ಸಾರಾಂಶ

* ಮಾರುಕಟ್ಟೆದರಕ್ಕೂ, ಬಂಕ್‌ ದರಕ್ಕೂ ಲೀ.ಗೆ 9 ರು. ವ್ಯತ್ಯಾಸ * 2-3 ಹಂತದಲ್ಲಿ 9 ರು.ವರೆಗೆ ಏರಿಕೆ ಸಾಧ್ಯತೆ * ಜೆಪಿ ಮಾರ್ಗನ್ ಸಂಸ್ಥೆಯ ವರದಿ

ನವದೆಹಲಿ (ಮಾ.2): ಪಂಚರಾಜ್ಯ ಚುನಾವಣೆಗಳ (Five State Elections) ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ಸ್ಥಗಿತಗೊಂಡಿರುವ ದೈನಂದಿನ ಪೆಟ್ರೋಲ್‌ (Petrol) ಮತ್ತು ಡೀಸೆಲ್‌ (Diesel) ದರ ಪರಿಷ್ಕರಣೆ ಮುಂದಿನ ವಾರದಿಂದ ಪುನಾರಂಭವಾಗುವ ಸಾಧ್ಯತೆ ಇದೆ. ಲೀಟರ್‌ಗೆ 9 ರು.ನಷ್ಟುಪೆಟ್ರೋಲ್‌ ದರ ಏರಬಹುದು ಎಂದು ಹೇಳಲಾಗಿದೆ.

ಹಾಲಿ ಉತ್ಪಾದನಾ ವೆಚ್ಚ ಮತ್ತು ಪೆಟ್ರೋಲ್‌ ಬಂಕ್‌ಗಳಲ್ಲಿ ಮಾರಾಟ ಮಾಡುತ್ತಿರುವ ಪ್ರತಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ದರದ ನಡುವೆ 9 ರು. ವ್ಯತ್ಯಾಸವಿದೆ. ಹೀಗಾಗಿ ಸರ್ಕಾರ 2-3 ಹಂತದಲ್ಲಿ ಈ ವ್ಯತ್ಯಾಸವನ್ನು ಸರಿಗಟ್ಟುವ ನಿಟ್ಟಿನಲ್ಲಿ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಜೆಪಿ ಮಾರ್ಗನ್‌ ಸಂಸ್ಥೆ (J.P. Morgan ) ತನ್ನ ವರದಿಯಲ್ಲಿ ತಿಳಿಸಿದೆ.

ರಷ್ಯಾ (Russia) ಮತ್ತು ಉಕ್ರೇನ್‌ (Ukraine) ನಡುವೆ ಯುದ್ಧ ಭೀತಿ ಆರಂಭವಾಗುತ್ತಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ (International crude oil )  100 ಡಾಲರ್‌ ಗಡಿ ದಾಟಿತ್ತು. ಇನ್ನು ಯುದ್ಧ ಶುರುವಾಗುತ್ತಲೇ ದರ 110ರ ಗಡಿ ದಾಟುವ ಮೂಲಕ ಕಳೆದ 8 ವರ್ಷಗಳಲ್ಲೇ ಗರಿಷ್ಠ ಮಟ್ಟಮುಟ್ಟಿತ್ತು. ಆದರೆ ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಳೆದ 2 ತಿಂಗಳಿನಿಂದ ದೈನಂದಿನ ದರ ಪರಿಷ್ಕರಣೆ ನಿಲ್ಲಿಸಿದ ಕಾರಣ, ಉತ್ಪಾದನಾ ವೆಚ್ಚ ಮತ್ತು ಮಾರಾಟ ವೆಚ್ಚದ ನಡುವಿನ ವ್ಯತ್ಯಾಸ ಪ್ರತಿ ಲೀ.ಗೆ 9 ರು. ತಲುಪಿದೆ.

ಅಂದರೆ ತೈಲ ಉತ್ಪಾದನಾ ಕಂಪನಿಗಳು ಪ್ರತಿ ಲೀಗೆ. 5-6 ರು.ನಷ್ಟಅನುಭವಿಸುತ್ತಿದೆ. ಇದು ಅವುಗಳ ಪ್ರತಿ ಲೀಗೆ ಇಟ್ಟುಕೊಳ್ಳುವ 2.5 ಲಾಭ ಹೊರತುಪಡಿಸಿ. ಹೀಗಾಗಿ ಎರಡೂ ಸೇರಿದರೆ ಅವು ಈಗಿನ ಲೆಕ್ಕಾಚಾರದಲ್ಲಿ ಪ್ರತಿ ಲೀ.ಗೆ 9 ರು.ವರೆಗೆ ದರ ಹೆಚ್ಚಿಸಬೇಕಾಗಿ ಬರಬಹುದು. ಫೆ.7ರಂದು ಕಡೆಯ ಹಂತದ ಮತದಾನ ನಡೆಯಲಿದ್ದು, ಮಾ.10ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಫೆ.8ರ ಬಳಿಕ ಯಾವುದೇ ಕ್ಷಣದಲ್ಲಿ ದರ ಏರಿಕೆ ಘೋಷಣೆಯಾಗಬಹುದು ಎಂದು ವರದಿ ಹೇಳಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ವೆಚ್ಚ ಮಾಡುತ್ತಿದೆ. ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ರೂ 5.7 ನಷ್ಟವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಸಾಮಾನ್ಯ ಮಾರುಕಟ್ಟೆ ಲಾಭವನ್ನು ಸಾಧಿಸಲು ಚಿಲ್ಲರೆ ಬೆಲೆಗಳನ್ನು ಲೀಟರ್‌ಗೆ 9 ಅಥವಾ 10 ಪ್ರತಿಶತದಷ್ಟು ಹೆಚ್ಚಿಸಬೇಕಾಗಿದೆ. ಸತತ 118 ದಿನಗಳಿಂದ ದೇಶೀಯ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

Ultra Rich People ದೇಶದ ಅತೀ ಹೆಚ್ಚು ಶ್ರೀಮಂತರನ್ನು ಹೊಂದಿದ 3ನೇ ನಗರ ಬೆಂಗಳೂರು, ಮೊದಲ ಸ್ಥಾನ ಯಾರಿಗೆ?
ಇಂದು ಉ.ಪ್ರ 6ನೇ ಹಂತದ ಚುನಾವಣೆ
ಲಖನೌ:
ತೀವ್ರ ಕುತೂಹಲ ಮೂಡಿಸಿರುವ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಕಣದಲ್ಲಿರುವ ಗೋರಖ್‌ಪುರ ಸೇರಿದಂತೆ ಉತ್ತರಪ್ರದೇಶದ 57 ವಿಧಾನಸಭಾ ಕ್ಷೇತ್ರಗಳಿಗೆ ಆರನೇ ಹಂತದ ಚುನಾವಣೆ ಗುರುವಾರ ನಡೆಯಲಿದೆ.

ಗೋರಖ್‌ಪುರ, ಅಂಬೇಡ್ಕರ್‌ ನಗರ, ಬಲರಾಮ್‌ಪುರ, ಸಿದ್ಧಾರ್ಥ ನಗರ, ಬಸ್ತಿ, ಸಂತ ಕಬೀರ್‌ ನಗರ, ಮಹಾರಾಜಾ ಗಂಜ್‌, ಕುಶಿ ನಗರ, ದಿಯೋರಿಯಾ ಹಾಗೂ ಬಲ್ಲಿಯಾ ಈ 10 ಜಿಲ್ಲೆಗಳಲ್ಲಿ ಮುಂಜಾನೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಅಜಯ ಕುಮಾರ್‌ ಲಾಲು, ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ ಮೌರ್ಯ ಸೇರಿ ಒಟ್ಟು 676 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

GST Collection: ಶೇ. 18 ರಷ್ಟು ಏರಿಕೆ ಕಂಡ ಜಿಎಸ್‌ಟಿ ಸಂಗ್ರಹ
6ನೇ ಹಂತದ ಚುನಾವಣೆಗೆ ಒಳಪಟ್ಟಈ 57 ಕ್ಷೇತ್ರಗಳ ಪೈಕಿ 2017ರಲ್ಲಿ 46 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ರಾಜ್ಯ 403 ವಿಧಾನಸಭಾ ಕ್ಷೇತ್ರಗಳ ಪೈಕಿ ಈಗಾಗಲೇ 292 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಏಳನೇ ಮತ್ತು ಅಂತಿಮ ಹಂತದ ಮತದಾನ ಮಾರ್ಚ್ 7 ರಂದು ನಡೆಯಲಿದೆ ಮತ್ತು ಉತ್ತರ ಪ್ರದೇಶ ಸೇರಿದಂತೆ ಎಲ್ಲಾ ಐದು ರಾಜ್ಯಗಳ ಮತಗಳ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!