ನಿರ್ಮಲಾ ಬಜೆಟ್ ಮರ್ಮ: ಪೆಟ್ರೋಲ್ ದರ ಎಂಬ ಕರ್ಮ!

By Web Desk  |  First Published Jul 6, 2019, 6:42 PM IST

ಕೇಂದ್ರ ಬಜೆಟ್ ಪರಿಣಾಮ ತೈಲ ಬೆಲೆಯಲ್ಲಿ ಗಣನೀಯ ಏರಿಕೆ| ನಿರ್ಮಲಾ ಬಜೆಟ್’ಗೆ ವಾಹನ ಸವಾರರ ಕಿಡಿ| ಪೆಟ್ರೋಲ್ ಬೆಲೆಯಲ್ಲಿ 2.40 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 2.36 ರೂ. ಹೆಚ್ಚಳ| ದೇಶದ ಮಹಾನಗರಗಳಲ್ಲಿ ಇಂದಿನ ತೈಲದರ ಎಷ್ಟು?


ನವದೆಹಲಿ(ಜು.06): ನಿನ್ನೆ(ಜು.05)ಯ ಕೇಂದ್ರ ಬಜೆಟ್ ಪರಿಣಾಮವಾಗಿ ತೈಲ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ.

ನಿನ್ನೆ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್, ಡೀಸೆಲ್ ಮೇಲೆ 1 ರೂ. ಸೆಸ್ ವಿಧಿಸಿದ್ದರು. 

Latest Videos

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.

ಬಜೆಟ್ ಪರಿಣಾಮವಾಗಿ ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ 2.40 ರೂ. ಹಾಗೂ ಡೀಸೆಲ್ ಬೆಲೆಯಲ್ಲಿ 2.36 ರೂ. ಹೆಚ್ಚಳವಾಗಿದೆ.

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರದತ್ತ ಗಮನಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ
ಪೆಟ್ರೋಲ್-72.96 ರೂ.
ಡೀಸೆಲ್-66.69 ರೂ.

ವಾಣಿಜ್ಯ ರಾಜಧಾನಿ ಮುಂಬೈ
ಪೆಟ್ರೋಲ್-78.57 ರೂ.
ಡೀಸೆಲ್-69.60 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ
ಪೆಟ್ರೋಲ್-75.15 ರೂ.
ಡೀಸೆಲ್-68.59 ರೂ.

ತಮಿಳುನಾಡು ರಾಜಧಾನಿ ಚೆನ್ನೈ
ಪೆಟ್ರೋಲ್-75.76 ರೂ.
ಡೀಸೆಲ್-70.48 ರೂ.

ರಾಜ್ಯ ರಾಜಧಾನಿ ಬೆಂಗಳೂರು
ಪಟ್ರೋಲ್-75.37 ರೂ.
ಡೀಸೆಲ್- 68.88 ರೂ.

click me!