ಪೆಪ್ಸಿಕೋ ಸಿಇಒ ಹುದ್ದೆ ತೊರೆದ ಇಂದಿರಾ ನೂಯಿ

By Web DeskFirst Published Aug 6, 2018, 5:27 PM IST
Highlights

ಪೆಪ್ಸಿಕೋ ಸಿಇಒ ಸ್ಥಾನಕ್ಕೆ ಇಂದಿರಾ ನೂಯಿ ರಾಜೀನಾಮೆ ನೀಡಿದ್ದಾರೆ.  ರಾಜೀನಾಮೆಗೆ ನಿರ್ದಿಷ್ಟ ಕಾರಣ ತಿಳಿಸದಿದ್ದರೂ  ಔದ್ಯಮಿಕ ವಲಯದಲ್ಲಿ ಇದು ಹೊಸ ಬದಲಾವಣೆಗೆ ತೆರೆದುಕೊಳ್ಳುವ ಸಾಧ್ಯತೆ ಇದೆ.

ನವದೆಹಲಿ[ಆ.6]   ಪೆಪ್ಸಿಕೋ ಸಿಇಒ ಕರ್ನಾಟಕ ಮೂಲದ ಇಂದಿರಾ ನೂಯಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಈ ಬಗ್ಗೆ ಸೋಮವಾರ ಅಧಿಕೃತ ಪ್ರಕಟಣೆ ಮಾಡಿದ್ದಾರೆ. ಈ ಮೂಲಕ ಕಂಪನಿಯೊಂದಿಗೆ 12 ವರ್ಷಗಳ ಬಾಂಧವ್ಯ ಸದ್ಯಕ್ಕೆ ಅಂತ್ಯವಾಗಿದ್ದರೂ 2019ರ ವರೆಗೆ ಅಧ್ಯಕ್ಷೆಯಾಗಿ ಮುಂದುವರಿಯಲಿದ್ದಾರೆ.

ಭಾರತದಲ್ಲಿ ಬೆಳೆದು ಬಂದವಳು ನಾನು, ಇಂಥ ಒಂದು ಕಂಪನಿಯಲ್ಲಿ ಕೆಲಸ ಮಾಡಲಿ ಅವಕಾಶ ಸಿಕ್ಕಿದ್ದು ಧನ್ಯತಾ ಭಾವ ಮೂಡಿಸಿದೆ ಪೌಷ್ಟಿಕಾಂಶದ ಆಹಾರವನ್ನು ಕೊಡಮಾಡುವತ್ತ ನಾವು ಹೆಜ್ಜೆ ಇಟ್ಟಿದ್ದೇವೆ. ಪರಿಸರ ಸಂರಕ್ಷಣೆಗೂ ಆದ್ಯತೆ ನೀಡಿಕೊಂಡು ಬಂದಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ಹೇಳಿ ಹೋಗು ಕಾರಣ..’ ಇನ್ಫೊಸಿಸ್ ತೊರೆದ ಸಿಇಒ ಸಂಗೀತಾ ಸಿಂಗ್!

ಪೆಪ್ಸಿಕೋ ಅಧ್ಯಕ್ಷೆ ಹಾಗೂ ಸಿಇಒ ಕರ್ನಾಟಕ ಮೂಲದ ಇಂದಿರಾ ನೂಯಿ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯಲ್ಲಿಯೂ ಇತ್ತಿಚೇಗೆ ಪ್ರಮುಖ ಸ್ಥಾನ ನೀಡಲಾಗಿತ್ಗಿತು. ಮಂಡಳಿಯ ನಿರ್ದೇಶಕಿ ಸ್ಥಾನ ನೀಡಲಾಗಿತ್ತು. 

ಇಂದಿರಾ ನೂಯಿ ಅವರು ಫಾರ್ಚೂನ್ ನಿಯತಕಾಲಿಕೆಯಲ್ಲಿ ವಿಶ್ವದ ಅತ್ಯಂತ ಪ್ರಭಾವಿ ಮಹಿಳೆಯಾಗಿ ಸ್ಥಾನ ಪಡೆದುಕೊಂಡಿದ್ದರು. ಇದೀಗ ದೊಡ್ಡ ಕಂಪನಿಯೊಂದರ ಪ್ರಮುಖ ಸ್ಥಾನದಿಂದ ಕೆಳಕ್ಕೆ  ಇಳಿದಿದ್ದಾರೆ.

 

click me!