
ಬೆಂಗಳೂರು(ಜೂ.20): ತಿಂಗಳಿಗೆ ಸುಮಾರು 120 ಮಿಲಿಯನ್ ಆಕ್ಟಿವ್ ಬಳಕೆದಾರರನ್ನು ಹೊಂದಿರುವ ಪೇಟಿಎಂ, ಇದೀಗ ದೇಶದಲ್ಲಿ ಬಹುಮುಖ ಸೇವೆಗಳನ್ನು ಒದಗಿಸಲು ಸಜ್ಜಾಗಿದೆ. ಇನ್ನು ಮುಂದೆ ಗ್ರಾಹಕರು ಪೇಟಿಎಂ ಮೂಲಕ ಲೈವ್ ಟಿವಿ, ನ್ಯೂಸ್, ಕ್ರೀಡೆ, ಮನರಂಜನಾ ವಿಡಿಯೋಗಳು ಮತ್ತು ಗೇಮ್ಸ್‌ಗಳನ್ನು ಉಚಿತವಾಗಿ ಪಡೆಯಬಹುದಾಗಿದೆ.
ಅಷ್ಟೇ ಅಲ್ಲದೇ ಮಿತ್ರರು ಮತ್ತು ಕುಟುಂಬದ ಸದಸ್ಯರೊಂದಿಗೆ ಚಾಟ್ ಕೂಡ ಮಾಡಬಹುದಾಗಿದೆ. ಪೇಟಿಎಂ ಈ ಸೇವೆಗಳಿಗಾಗಿ ಈಗಾಗಲೇ ಬೀಟಾ ಟೆಸ್ಟಿಂಗ್ ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಅಲ್ಲದೇ ಮನರಂಜನಾ ಕಾರ್ಯಕ್ರಮಗಳನ್ನು ಒದಗಿಸುವ ಹಲವಾರು ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದಿ, ಗ್ರಾಹಕರಿಗೆ ಅತ್ಯುತ್ತಮ ಮನರಂಜನಾ ಮತ್ತು ಮಾಹಿತಿ ಭರಿತ ಕಾರ್ಯಕ್ರಮಗಳನ್ನು ಒದಗಿಸಲು ನಿರ್ಧರಿಸಿದೆ.
ಈಗಾಗಲೇ ಪ್ರಸಿದ್ಧವಾಗಿರುವ ಈ ಆ್ಯಪ್ ನೂತನ ಸೇವೆಗಳಿಂದ ಸೂಪರ್ ಆ್ಯಪ್ ಆಗಿ ತನ್ನ ಸ್ಥಾನವನ್ನು ಭದ್ರಗೊಳಿಸಿಕೊಳ್ಳುವತ್ತ ಚಿತ್ತ ಹರಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.