
ಮುಂಬೈ ಜೂನ್ 19: ವಂಚನೆಯಲ್ಲಿ ಮಾಸ್ಟರ್ ಪದವಿ ಪಡೆದಿರುವ ಮಲ್ಯ ವಿರುದ್ಧದ ಒಂದೊಂದೆ ಸತ್ಯಗಳು ಹೊರಬೀಳುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಲ್ಯ ತಮ್ಮ ವಂಚನೆಯ ಜಾಲಕ್ಕೆ ಬಳಸಿಕೊಂಡಿದ್ದರೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಇಡಿ ದಾಖಲೆಗಳು ಇದನ್ನು ಸತ್ಯ ಎಂದು ಬಿಂಬಿಸುತ್ತಿವೆ. ಎಸ್‌ಬಿಐ ಸೇರಿದಂತೆ ಹಲವು ಬ್ಯಾಂಕುಗಳಿಗೆ 9000 ಕೋಟಿ ರೂ. ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ಮೇಲೆ ಜಾರಿ ನಿರ್ದೇಶನಾಲಯ ಮತ್ತೊಂದು ಚಾರ್ಜ್ ಶೀಟ್ ದಾಖಲಿಸಿದೆ.
ವಿಜಯ್ ಮಲ್ಯ, ಯುಬಿ ಹೋಲ್ಡಿಂಗ್ಸ್, ಕಿಂಗ್ ಫಿಶರ್ ಏರ್‌ಲೈನ್ಸ್ ಹಾಗೂ ಹಲವರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿದ್ದು ಫೋರ್ಸ್ ಇಂಡಿಯಾ ಎಫ್ 1 ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಐಪಿಎಲ್ ತಂಡಗಳನ್ನು ಅಕ್ರಮ ಹಣ ವರ್ಗಾವಣೆ ಮಾಡಲು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿರುವುದು ಸದ್ಯದ ಸುದ್ದಿ.
ಮಲ್ಯ ಒಡೆತನದ ಕಿಂಗ್‌ಫಿಶರ್ ಏರ್‌ಲೈನ್ಸ್ ಹೆಸರಿನಲ್ಲಿ 6,027 ಕೋಟಿ ರೂಪಾಯಿ ಸಾಲ ಪಡೆದುಕೊಳ್ಳಲಾಗಿತ್ತು. ಇದಕ್ಕೆ ವಿಜಯ್ ಮಲ್ಯ, ಯುಬಿ ಹೋಲ್ಡಿಂಗ್ಸ್ ಕಂಪನಿ ಹಾಗೂ ಏರ್‌ಲೈನ್ಸ್‌ನ್ನು ಶ್ಯೂರಿಟಿಯಾಗಿ ನೀಡಿದ್ದರು. ಮಲ್ಯ ಈ ಹಣವನ್ನು ಖಾಸಗಿ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಆರೋಪಿಸಲಾಗಿದೆ. 2008ರಲ್ಲಿ 15.9 ಕೋಟಿ ಸಾಲದ ಹಣವನ್ನು ಕಿಂಗ್‌ಫಿಶರ್ ಏರ್‌ಲೈನ್ಸ್ ಅಕೌಂಟ್‌ನಿಂದ ಆರ್‌ಸಿಬಿ ತಂಡಕ್ಕೆ ಬಳಸಿಕೊಳ್ಳಾಗಿತ್ತು ಎಂದು ಇಡಿ ಹೇಳಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.