ಸ್ಟೈಸ್ ಜೆಟ್ ಹಾಗೂ ಇಂಡಿಗೋ ಮೇಲೆ ಕಳಪೆ ಸರ್ವೀಸ್ ನ ಗರಿಷ್ಠ ದೂರು!

Published : May 27, 2022, 05:56 PM IST
ಸ್ಟೈಸ್ ಜೆಟ್ ಹಾಗೂ ಇಂಡಿಗೋ ಮೇಲೆ ಕಳಪೆ ಸರ್ವೀಸ್ ನ ಗರಿಷ್ಠ ದೂರು!

ಸಾರಾಂಶ

ಅತ್ಯಂತ ಅತೃಪ್ತಿಯ ಸೇವೆ ನೀಡುವ ಏರ್ ಲೈನ್ ಗಳ ಪಟ್ಟಿಯಲ್ಲಿ ಸ್ಪೈಸ್ ಜೆಟ್ ಲಿಮಿಟೆಡ್ ಅಗ್ರಸ್ಥಾನದಲ್ಲಿದೆ ಎಂದು ಪ್ರಯಾಣಿಕರು ರೇಟಿಂಗ್ ನೀಡಿದ್ದಾರೆ. 55 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ನಂತರದ ಸ್ಥಾನದಲ್ಲಿದೆ.

ಬೆಂಗಳೂರು (ಮೇ. 27): ಭಾರತೀಯ ಪ್ರಯಾಣಿಕರು ದೇಶದ ವಿಮಾನಯಾನ (airlines ) ಸಂಸ್ಥೆಗಳ ಬಗ್ಗೆ ಹೆಚ್ಚು ನಿರಾಸೆಗೊಂಡಿದ್ದಾರೆ. ಸಮೀಕ್ಷೆಯ ಪ್ರಕಾರ, ಕರೋನಾ ಕಾಲದಿಂದಲೂ ಗ್ರಾಹಕ ಸೇವೆ ಮತ್ತು ಏರ್‌ಲೈನ್ ಉದ್ಯೋಗಿಗಳ ನಡವಳಿಕೆಯು ಗರಿಷ್ಠ ಮಟ್ಟದಲ್ಲಿ ಹದಗೆಟ್ಟಿದೆ. ಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದ 15,000 ವಿಮಾನಯಾನ ಪ್ರಯಾಣಿಕರಲ್ಲಿ ಸುಮಾರು 79 ಪ್ರತಿಶತದಷ್ಟು ಜನರು ಕರೋನಾ ಕಾಲದಿಂದಲೂ ಭಾರತದಲ್ಲಿನ ವಿಮಾನ ಪ್ರಯಾಣಿಕರ ಸೌಕರ್ಯ ಮತ್ತು ಕಾಳಜಿಯ ಕೊರತೆಯಲ್ಲಿ ರಾಜಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಅತ್ಯಂತ ಅತೃಪ್ತಿಯ ಸೇವೆ ನೀಡುವ ಏರ್ ಲೈನ್ ಗಳ ಪಟ್ಟಿಯಲ್ಲಿ ಸ್ಪೈಸ್ ಜೆಟ್ (SpiceJet) ಲಿಮಿಟೆಡ್ ಅಗ್ರಸ್ಥಾನದಲ್ಲಿದೆ ಎಂದು ಪ್ರಯಾಣಿಕರು ರೇಟಿಂಗ್ ನೀಡಿದ್ದಾರೆ. 55 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿರುವ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ (Indigo) ನಂತರದ ಸ್ಥಾನದಲ್ಲಿದೆ. ಎಲ್ಲಾ ಏರ್‌ಲೈನ್‌ಗಳಾದ್ಯಂತ ದೂರುಗಳು ಸಾಮಾನ್ಯವಾಗಿದ್ದು, ವಿಮಾನ ವಿಳಂಬಗಳು, ಕಳಪೆ ವಿಮಾನ ಸೇವೆ, ಕಳಪೆ ಬೋರ್ಡಿಂಗ್ ಕಾರ್ಯವಿಧಾನಗಳು ಮತ್ತು ಕಳಪೆ ಒಳಾಂಗಣಗಳು ಇದರಲ್ಲಿ ಸೇರಿವೆ.

ಪ್ರಯಾಣಿಕರೊಂದಿಗೆ ವಿಮಾನಯಾನ ಸಂಸ್ಥೆಗಳ ಉದ್ಯೋಗಿಗಳು ದುರ್ವತನೆ ತೋರುತ್ತಿರುವ ಸಮಯದಲ್ಲಿ ಈ ವರದಿಗಳು ಬಂದಿವೆ. ಇತ್ತೀಚಿನ ಹೈ-ಪ್ರೊಫೈಲ್ ಪ್ರಕರಣದಲ್ಲಿ, ಇಂಡಿಗೋ ಅಂಗವಿಕಲ ಹದಿಹರೆಯದವರಿಗೆ ವಿಮಾನ ಹತ್ತುವುದನ್ನು ನಿರ್ಬಂಧಿಸಿತ್ತು. ಹುಡುಗನು ಟ್ಯಾಂಪರಿಂಗ್ ಮಾಡುತ್ತಿದ್ದಾನೆ ಮತ್ತು ಸುರಕ್ಷತೆಯ ಅಪಾಯವನ್ನು ಉಂಟುಮಾಡಬಹುದು ಎಂದು ವಿಮಾನಯಾನ ಸಂಸ್ಥೆ ಹೇಳಿತ್ತು.

ಭಾರತದ ವಿಮಾನಯಾನ ನಿಯಂತ್ರಕವು ಇಂಡಿಗೋ ನಿಯಮಗಳಿಗೆ ಅನುಸಾರವಾಗಿಲ್ಲ ಮತ್ತು ಅದರ ಉದ್ಯೋಗಿಗಳು ಪ್ರಯಾಣಿಕರನ್ನು ಅಸಮರ್ಪಕವಾಗಿ ನಿರ್ವಹಿಸಿದ್ದಾರೆ ಎಂದು ಗಮನಿಸಿ ಈ ಬಗ್ಗೆ ಪ್ರಾಥಮಿಕ ವಿಚಾರಣೆಯನ್ನು ಪ್ರಾರಂಭಿಸಿತು. ಕಠಿಣ ಸಂದರ್ಭಗಳನ್ನು ಎದುರಿಸಿ ಅತ್ಯುತ್ತಮ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಇಂಡಿಗೋ ಆ ಸಮಯದಲ್ಲಿ ಹೇಳಿಕೆಯಲ್ಲಿ ತಿಳಿಸಿತ್ತು.

ದಿವ್ಯಾಂಗ ಮಗುವಿಗೆ ಪ್ರವೇಶ ನಿರಾಕರಿಸಿದ ಇಂಡಿಗೋ ಏರ್‌ಲೈನ್ಸ್

ಇನ್ನೊಂದೆಡ, ಸ್ಟೈಸ್ ಜೆಟ್ ಹಾಗೂ ಇಂಡಿಗೋ ತನ್ನ ಸೇವೆ ಅಥವಾ ನಡವಳಿಕೆಯಲ್ಲಿ ಯಾವುದೇ ರಾಜಿಗಳನ್ನು ನಿರಾಕರಿಸಿದರು. ಸ್ಪೈಸ್‌ಜೆಟ್ ಕ್ಲೈಂಟ್ ಅನುಭವವನ್ನು ಸುಧಾರಿಸಲು ಸ್ವಯಂಚಾಲಿತತೆ, ತಂತ್ರಜ್ಞಾನ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಹೇಳಿದೆ. ಇಂಡಿಗೋ ಗ್ರಾಹಕರಿಗೆ ಸಮಸ್ಯೆಯಿಲ್ಲದ ಪ್ರಯಾಣದ ಅನುಭವವನ್ನು ಒದಗಿಸುವ ಸಲುವಾಗಿ ಡಿಜಿಟಲೀಕರಣದ ಮೇಲೆ ಕೇಂದ್ರೀಕರಿಸುತ್ತಿದೆ ಎಂದು ಹೇಳಿದೆ.

ಇಂಡಿಗೋ ಗಗನಸಖಿ ಕಣ್ಣೀರಿನ ವಿದಾಯ: ವೈರಲ್‌ ವಿಡಿಯೋಗೆ ಮನಸೋತ ನೆಟ್ಟಿಗರು

ಇಂಡಿಗೋ ತಂತ್ರಜ್ಞಾನವು ವಿಮಾನ ನಿಲ್ದಾಣದ ಕಾಯುವ ಸಮಯವನ್ನು ಕಡಿಮೆ ಮಾಡಿದೆ ಮತ್ತು ಪ್ರಯಾಣಿಕರ ತೃಪ್ತಿಯನ್ನು ಸುಧಾರಿಸಿದೆ ಎಂದು ಹೇಳಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!