Business Ideas: ಕಡಿಮೆ ಹೂಡಿಕೆ, ಹೆಚ್ಚು ಹಣ ಮಾಡಲು ಇಲ್ಲಿವೆ ಐಡಿಯಾ

Published : May 27, 2022, 05:03 PM IST
Business Ideas: ಕಡಿಮೆ ಹೂಡಿಕೆ, ಹೆಚ್ಚು ಹಣ ಮಾಡಲು ಇಲ್ಲಿವೆ ಐಡಿಯಾ

ಸಾರಾಂಶ

ಒಂದೇ ಬಾರಿ ದೊಡ್ಡ ಮಟ್ಟದಲ್ಲಿ ವ್ಯಾಪಾರ ಶುರು ಮಾಡಲು ಸಾಧ್ಯವಾಗುವುದಿಲ್ಲ. ಹಾಗಂತ ಕೈಕಟ್ಟಿ ಕುಳಿತುಕೊಳ್ಳಲೂ ಆಗುವುದಿಲ್ಲ. ವ್ಯಾಪಾರ ಮಾಡಿ ಗಳಿಕೆ ಶುರು ಮಾಡ್ಬೇಕು ಎನ್ನುವವರು ಸಣ್ಣ ಪ್ರಮಾಣದಲ್ಲಿ ಈ ವ್ಯವಹಾರ ಶುರು ಮಾಡಿ ಕೈತುಂಬ ಗಳಿಸಬಹುದು.   

ಸ್ವಂತ ಉದ್ಯೋಗ ಶುರು ಮಾಡ್ಬೇಕೆಂಬ ಬಯಕೆ ಅನೇಕರಿಗಿರುತ್ತದೆ. ಕೆಲವರು ಪಾರ್ಟ್ ಟೈಂ (Part Time) ವ್ಯಾಪಾರ (Business) ಶುರು ಮಾಡಲು ಬಯಸಿದ್ರೆ ಮನೆ (Home) ಯಲ್ಲಿರುವ ಮಹಿಳೆಯರು, ಮನೆ ಕೆಲಸದ ಜೊತೆ ನಡೆಸಿಕೊಂಡು ಹೋಗಬಹುದಾದ ವ್ಯಾಪಾರ ಹುಡುಕಾಡ್ತಾರೆ. ಇಂದು ನಾವು ಕಡಿಮೆ ಖರ್ಚಿನಲ್ಲಿ ಶುರು ಮಾಡಬಹುದಾದ ಹಾಗೂ ಸದಾ ಬೇಡಿಕೆಯಲ್ಲಿರುವ ವ್ಯಾಪಾರದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡ್ತೇವೆ. ಯಾವ ವ್ಯಾಪಾರ ಶುರು ಮಾಡ್ಬೇಕು ಎಂಬ ಗೊಂದಲದಲ್ಲಿರುವವರು. ಹಸಿರು ಬಟಾಣಿ ವ್ಯವಹಾರ (Green Peas Business) ವನ್ನು ನೀವು ಶುರು ಮಾಡ್ಬಹುದು. ಹಸಿರು ಬಟಾಣಿ ಒಂದೇ ಋತುವಿನಲ್ಲಿ ಸಿಗುತ್ತದೆ. ಆದ್ರೆ ಅದಕ್ಕೆ ಬಹಳ ಬೇಡಿಕೆ (Demand) ಯಿದೆ. ಇದೇ ಕಾರಣಕ್ಕೆ ಅದನ್ನು ಘನೀಕರಿಸಲಾಗುತ್ತದೆ. ಅದನ್ನು ಪ್ರೋಜನ್ ಬಟಾಣಿ ಎಂದು ಕರೆಯಲಾಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುವ ಬಟಾಣಿಯನ್ನು ನಾವು ಅನೇಕ ಆಹಾರದಲ್ಲಿ ನೋಡ್ಬಹುದು. ಇದಕ್ಕೆ ಬಹು ಬೇಡಿಕೆಯಿದೆ. ಇದೇ ಕಾರಣಕ್ಕೆ ಇದನ್ನು ಹೆಪ್ಪುಗಟ್ಟಿಸಲಾಗುತ್ತದೆ. ಘನೀಕೃತ ಹಸಿರು ಬಟಾಣಿ ವ್ಯವಹಾರವನ್ನು ನೀವು ಸುಲಭವಾಗಿ ಮಾಡ್ಬಹುದು. ಇದಕ್ಕಾಗಿ ನೀವು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡ್ಬೇಕೆಂದೇನಿಲ್ಲ. ಕಡಿಮೆ ಖರ್ಚಿನಲ್ಲಿ ಸಣ್ಣ ಪ್ರಮಾಣದಲ್ಲಿಯೇ ವ್ಯವಹಾರ ಶುರು ಮಾಡ್ಬಹುದು. 

ಮನೆಯಲ್ಲಿಯೇ ಇದನ್ನು ಮಾಡ್ತೀರಿ ಅಂದಾದ್ರೆ ಅಥವಾ ಸಣ್ಣ ಪ್ರಮಾಣದಲ್ಲಿ ವ್ಯವಹಾರ ಶುರು ಮಾಡುವ ಪ್ಲಾನ್ ಇದ್ದರೆ ಇದಕ್ಕೆ ಬೇಕಾಗುವ ಸಾಮಾನುಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ. ಈ ವ್ಯವಹಾರ ಶುರು ಮಾಡಲು ನಿಮಗೆ ಆಳವಾದ ಫ್ರೀಜರ್, ಹಸಿರು ಬಟಾಣಿ, ಕುದಿಸಲು ಕುಲುಮೆ ಮತ್ತು ಸಣ್ಣ ಪ್ಯಾಕಿಂಗ್ ಯಂತ್ರ ಬೇಕಾಗುತ್ತದೆ. ಕೂಲಿಕಾರರನ್ನು ಜೊತೆಯಲ್ಲಿಟ್ಟುಕೊಂಡು ಉಳಿದ ಕೆಲಸಗಳನ್ನು ಮಾಡಬಹುದು. ಉದಾಹರಣೆಗೆ ಬಟಾಣಿ ಸಿಪ್ಪೆ ತೆಗೆಯುವುದು, ತೊಳೆಯುವುದು, ಪ್ಯಾಕಿಂಗ್ ಮಾಡುವುದು ಇತ್ಯಾದಿ ಕೆಲಸಕ್ಕೆ ನೀವು ಕೂಲಿಕಾರ್ಮಿಕರನ್ನು ಇಟ್ಟುಕೊಳ್ಳಬಹುದು. 

ವ್ಯವಹಾರವನ್ನು ಹೀಗೆ ಶುರು ಮಾಡಿ : 
ಹಸಿರು ಬಟಾಣಿ ವ್ಯಾಪಾರ ಶುರು ಮಾಡಲು ಬಯಸಿದ್ದರೆ ಮೊದಲು ನೀವು ರೈತರಿಂದ ಬಟಾಣಿ ಖರೀದಿ ಮಾಡ್ಬೇಕು. ಫೆಬ್ರವರಿ 15ರವೆರೆಗ ನಿಮಗೆ ಬಟಾಣಿ ಸಿಗುತ್ತದೆ. ಚಳಿಗಾಲದಲ್ಲಿ ಹೆಚ್ಚಾಗಿ ಸಿಗುವ ಈ ಬಟಾಣಿಯನ್ನು ಮನೆಗೆ ತಂದು ಅದರ ಸಿಪ್ಪೆ ಸುಲಿದು, ತೊಳೆದು, ಕುದಿಸಿ ಪ್ಯಾಕಿಂಗ್ ಮಾಡ್ಬೇಕು. ಅದಕ್ಕೆ ಜನರ ಅವಶ್ಯಕತೆಯಿರುತ್ತದೆ. ಒಂದೇ ಬಾರಿ ನೀವು ದೊಡ್ಡ ಪ್ರಮಾಣದಲ್ಲಿ ಬಟಾಣಿ ಖರೀದಿ ಮಾಡ್ಬೇಕಾಗಿಲ್ಲ. ಸ್ವಲ್ಪ ಸ್ವಲ್ಪ ಖರೀದಿ ಮಾಡಿ ಅದನ್ನು ಸಂಗ್ರಹಿಸಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು, ನೀವು ಸರ್ಕಾರದಿಂದ ಪರವಾನಗಿಯನ್ನು ಸಹ ಪಡೆಯಬೇಕಾಗುತ್ತದೆ. ಪರವಾನಗಿ ಹೊಂದುವ ಮೂಲಕ ನೀವು ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

PETROL-DIESEL PRICE TODAY: ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ ? ಇಲ್ಲಿದೆ ಪಟ್ಟಿ

ಸಣ್ಣ ಪ್ರಮಾಣದಲ್ಲಿ ವ್ಯಾಪಾರವನ್ನು ಪ್ರಾರಂಭಿಸುವಾಗ ಹಸಿರು ಬಟಾಣಿಗಳ ಸಿಪ್ಪೆ ತೆಗೆಯಲು ಕೆಲವು ಕಾರ್ಮಿಕರು ಬೇಕಾಗುತ್ತಾರೆ. ದೊಡ್ಡ ಪ್ರಮಾಣದಲ್ಲಿ ವ್ಯಾಪಾರ ಮಾಡಲು ಬಯಸಿದರೆ  ಬಟಾಣಿ ಸಿಪ್ಪೆಸುಲಿಯುವ ಯಂತ್ರದ ಅಗತ್ಯವಿದೆ. ಸಿಪ್ಪೆ ಸುಲಿಯುವ ಯಂತ್ರವು ಒಂದು ಲಕ್ಷದಿಂದ 1.25 ಲಕ್ಷ ರೂಪಾಯಿ ಒಳಗೆ ನಿಮಗೆ ಸಿಗುತ್ತದೆ. ಇಷ್ಟೇ ಅಲ್ಲ, ಬೇಯಿಸಲು ಹಾಗೂ ಪ್ಯಾಕಿಂಗ್ ಮಾಡಲು ಯಂತ್ರ ಖರೀದಿಸಬೇಕಾಗುತ್ತದೆ.

ಡಿಜಿಲಾಕರ್‌ನೊಂದಿಗೆ ಪಾಸ್‌ಪೋರ್ಟ್‌ಗಳಿಗೆ ಅರ್ಜಿ ಸಲ್ಲಿಸುವುದು ಇನ್ನಷ್ಟು ಸುಲಭ!

ಈ ವ್ಯವಹಾರದಲ್ಲಿ ಎಷ್ಟು ಲಾಭ ? : ಹೆಪ್ಪುಗಟ್ಟಿದ ಹಸಿರು ಬಟಾಣಿ ವ್ಯವಹಾರದಲ್ಲಿ ನೀವು 50-80 ಪ್ರತಿಶತದಷ್ಟು ಲಾಭವನ್ನು ಪಡೆಯಬಹುದು. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 20 ರೂಪಾಯಿಯಂತೆ ಹಸಿರು ಬಟಾಣಿ ಸಿಗುತ್ತದೆ. ಅದನ್ನು ನೀವು ಸಂಸ್ಕರಿಸಿ ಕೆಜಿಗೆ 120 ರೂಪಾಯಿಗೆ ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡಬಹುದು. ಚಿಲ್ಲರೆ ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!