ಹಿರಿಯ ನಾಗರಿಕರಿಗೆ ಗುಡ್‌ ನ್ಯೂಸ್‌..! ರೈಲ್ವೆ ಟಿಕೆಟ್‌ ರಿಯಾಯ್ತಿ ಶೀಘ್ರದಲ್ಲೇ ಪುನಾರಂಭ..?

By Kannadaprabha NewsFirst Published Mar 14, 2023, 9:13 AM IST
Highlights

ಕೋವಿಡ್‌ಗೂ ಮುನ್ನ 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಶೇ. 50 ರಷ್ಟು ಹಾಗೂ 60 ವರ್ಷ ಮೇಲ್ಪಟ್ಟ ಪುರುಷರಿಗೆ ಶೇ. 40 ರಷ್ಟು ರಿಯಾಯಿತಿ ನೀಡಲಾಗುತ್ತಿತ್ತು. ರಾಜಧಾನಿ, ಎಕ್ಸ್‌ಪ್ರೆಸ್‌, ಮೇಲ್‌ ಎಲ್ಲಾ ರೀತಿಯ ರೈಲುಗಳಿಗೆ ರಿಯಾಯಿತಿ ಅನ್ವಯವಾಗುತ್ತಿತ್ತು.

ನವದೆಹಲಿ (ಮಾರ್ಚ್‌ 14, 2023): ಕೋವಿಡ್‌ - 19 ಆರಂಭವಾದ ಬಳಿಕ ರೈಲು ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ವಿನಾಯಿತಿ ನೀಡುವುದನ್ನು ನಿಲ್ಲಿಸಲಾಗಿತ್ತು. ಅಂದಿನಿಂದ ಈವರೆಗೆ ರೈಲ್ವೆ ಪ್ರಯಾಣದಲ್ಲಿ ಹಿರಿಯ ನಾಗರಿಕರಿಗೆ ಯಾವುದೇ ವಿನಾಯಿತಿಯೇ ದೊರೆತಿಲ್ಲ. ಆದರೆ, ಶೀಘ್ರದಲ್ಲೇ ಇಂತಹವರಿಗೆ ಗುಡ್‌ ನ್ಯೂಸ್‌ ಕಾದಿದೆ. ಕೋವಿಡ್ -19 ಪರಿಸ್ಥಿತಿ ಸಾಮಾನ್ಯವಾಗಿದೆ ಎಂದು ಪರಿಗಣಿಸಿ ಸ್ಲೀಪರ್ ಮತ್ತು ಎಸಿ -3 ತರಗತಿಗಳಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ರೈಲು ಪ್ರಯಾಣ ದರದಲ್ಲಿ ರಿಯಾಯಿತಿಯನ್ನು ಪುನರಾರಂಭಿಸುವಂತೆ ಸಂಸದೀಯ ಸ್ಥಾಯಿ ಸಮಿತಿಯು ರೈಲ್ವೆ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇದು ದುರ್ಬಲ ಮತ್ತು ನಿಜವಾದ ಅಗತ್ಯವಿರುವ ನಾಗರಿಕರಿಗೆ ಸಹಾಯ ಮಾಡುತ್ತದೆ ಎಂದು ಸಮಿತಿ ಹೇಳಿದೆ. ರಾಧಾ ಮೋಹನ್ ಸಿಂಗ್ ನೇತೃತ್ವದ ರೈಲ್ವೆಯಲ್ಲಿನ ಸಮಿತಿಯು ಹಿರಿಯ ನಾಗರಿಕರಿಗೆ, ವಿಶೇಷವಾಗಿ ಸ್ಲೀಪರ್ ಕ್ಲಾಸ್ ಮತ್ತು 3ಎ ವರ್ಗದವರಿಗೆ ಪ್ರಯಾಣ ದರದಲ್ಲಿ ರಿಯಾಯಿತಿಗಳನ್ನು ಪುನರಾರಂಭಿಸುವುದನ್ನು "ಅನುಭೂತಿಯಿಂದ" ಪರಿಗಣಿಸಲು ಈ ಶಿಫಾರಸನ್ನು ಮಾಡಿದ್ದು ಇದು ಎರಡನೇ ಬಾರಿ. 

ಕೋವಿಡ್‌ಗೂ (COVID) ಮುನ್ನ 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ (Women) ಶೇ. 50 ರಷ್ಟು ಹಾಗೂ 60 ವರ್ಷ ಮೇಲ್ಪಟ್ಟ ಪುರುಷರಿಗೆ ಶೇ. 40 ರಷ್ಟು ರಿಯಾಯಿತಿ (Concession) ನೀಡಲಾಗುತ್ತಿತ್ತು. ರಾಜಧಾನಿ, ಎಕ್ಸ್‌ಪ್ರೆಸ್‌, ಮೇಲ್‌ ಎಲ್ಲಾ ರೀತಿಯ ರೈಲುಗಳಿಗೆ (Train) ರಿಯಾಯಿತಿ ಅನ್ವಯವಾಗುತ್ತಿತ್ತು. ಆದರೆ 2020 ಮಾರ್ಚ್‌ 20 ರಂದು ಹಿಂದೆ ಪಡೆಯಲಾಯಿತು. ಕೋವಿಡ್‌ ಬಳಿಕ ಈಗ ಮತ್ತೆ ರೈಲ್ವೇ ಆದಾಯ ಹೆಚ್ಚಾಗುತ್ತಿದ್ದು, ಮೊದಲಿನಂತೆ ರಿಯಾಯಿತಿ ನೀಡಲು ಶಿಫಾರಸು ಮಾಡಲಾಗಿದೆ. ಮೇಲ್, ಎಕ್ಸ್‌ಪ್ರೆಸ್, ರಾಜಧಾನಿ, ಶತಾಬ್ದಿ ಮತ್ತು ದುರಂತೋ ಗುಂಪಿನ ರೈಲುಗಳ ಎಲ್ಲಾ ವರ್ಗಗಳ ದರಗಳಲ್ಲಿ ಈ ರಿಯಾಯಿತಿಗಳನ್ನು ಅನುಮತಿಸಲಾಗಿತ್ತು.

ಇದನ್ನು ಓದಿ: ನೀವು ರಾತ್ರಿ ವೇಳೆ ರೈಲಿನಲ್ಲಿ ಪ್ರಯಾಣಿಸ್ತೀರಾ..? ಹಾಗಿದ್ರೆ ಈ ರೂಲ್ಸ್ ಪಾಲಿಸ್ಲೇಬೇಕು..!

ರೈಲ್ವೆ ಒದಗಿಸಿದ ಮಾಹಿತಿಯಿಂದ ಕೋವಿಡ್ ಪರಿಸ್ಥಿತಿಯನ್ನು ಈಗ ಸಾಮಾನ್ಯಗೊಳಿಸಲಾಗಿದೆ ಮತ್ತು ರೈಲ್ವೆ ಸಾಮಾನ್ಯ ಬೆಳವಣಿಗೆಯನ್ನು ಸಾಧಿಸಿದೆ ಎಂದು ಸಮಿತಿಯು ಗಮನಿಸಿದೆ. ಈ ಮಧ್ಯೆ, ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಸಚಿವಾಲಯ (Railway Ministry), "ಕೋವಿಡ್-19 (COVID - 19) ಸಾಂಕ್ರಾಮಿಕವು  ರೈಲ್ವೆಯ ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸರ್ಕಾರವು 2019-20 ರಲ್ಲಿ ಪ್ರಯಾಣಿಕರ ಟಿಕೆಟ್‌ಗಳ ಮೇಲೆ 59,837 ಕೋಟಿ ರೂಪಾಯಿಗಳ ಸಬ್ಸಿಡಿಯನ್ನು ನೀಡಿದೆ. ಇದು 53% ರಷ್ಟು ರಿಯಾಯಿತಿಯಾಗಿದೆ. ಸರಾಸರಿಯಾಗಿ, ರೈಲ್ವೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ವ್ಯಕ್ತಿಗೆ. ಈ ಸಬ್ಸಿಡಿ ಎಲ್ಲಾ ಪ್ರಯಾಣಿಕರಿಗೆ ಮುಂದುವರಿದಿದೆ. ಈ ಸಬ್ಸಿಡಿ ಮೊತ್ತವನ್ನು ಮೀರಿದ ಹೆಚ್ಚಿನ ರಿಯಾಯಿತಿಗಳು ದಿವ್ಯಾಂಗರು, ವಿದ್ಯಾರ್ಥಿಗಳು ಮತ್ತು ರೋಗಿಗಳಂತಹ ಅನೇಕ ವರ್ಗಗಳಿಗೆ ಮುಂದುವರಿಯುತ್ತಿವೆ’’ ಎಂದು ಉತ್ತರಿಸಿದೆ.

ಈ ಹಿನ್ನೆಲೆ, ಹಿರಿಯ ನಾಗರಿಕರಿಗೆ (Senior Citizen) ರಿಯಾಯಿತಿ ನೀಡುವ ಬಗ್ಗೆ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೂ,  ಸಂಸದೀಯ ಸ್ಥಾಯಿ ಸಮಿತಿಯ ಶಿಫಾರಸಿನಂತೆ ಶೀಘ್ರದಲ್ಲೇ ರಿಯಾಯಿತಿ ದೊರೆಯುವ ಸಾಧ್ಯತೆ ಇದೆ. 

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಬೆಂಗಳೂರು - ಹುಬ್ಬಳ್ಳಿ ನಡುವೆ ಮತ್ತೆರಡು ಹೊಸ ರೈಲು ಸಂಚಾರ

click me!