ಪ್ಯಾನ್ ಕಾರ್ಡ್ ಬಳಕೆದಾರರೇ ಗಮನಿಸಿ, ಈ ತಪ್ಪುಗಳನ್ನು ಮಾಡಿದ್ರೆ 10 ಸಾವಿರ ರೂ. ದಂಡ ಖಚಿತ!

By Suvarna News  |  First Published Dec 20, 2022, 5:09 PM IST

ಇಂದು ಬಹುತೇಕರ ಬಳಿ ಪ್ಯಾನ್ ಕಾರ್ಡ್ ಇದೆ. ಆದಾಯ ತೆರಿಗೆ ಪಾವತಿಸೋರಿಗಂತೂ ಪ್ಯಾನ್ ಕಾರ್ಡ್ ಕಡ್ಡಾಯ. ಆದರೆ, ಪ್ಯಾನ್ ಕಾರ್ಡ್ ಗೆ ಸಂಬಂಧಿಸಿ ಕೆಲವು ಮಾಹಿತಿಗಳನ್ನು ಹೊಂದಿರೋದು ಅಗತ್ಯ. ಇಲ್ಲವಾದ್ರೆ ಸುಮ್ಮನೆ ದಂಡ ಪಾವತಿಸಬೇಕಾದ ಪ್ರಮೇಯ ಎದುರಾಗಬಹುದು. 
 


Business Desk:ಕಾಯಂ ಖಾತೆ ಸಂಖ್ಯೆ ಅಥವಾ ಪ್ಯಾನ್  ಅನ್ನೋದು 10 ಅಂಕೆಗಳ ಇಂಗ್ಲಿಷ್ ಅಕ್ಷರಗಳು ಹಾಗೂ ಸಂಖ್ಯೆಗಳ ಸಮೂಹ. ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಗಳನ್ನು ವಿತರಿಸುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದ್ದು, ಮುಖ್ಯವಾಗಿ ತೆರಿಗೆ ಸಂಬಂಧಿ ಉದ್ದೇಶಗಳಿಗೆ ಬಳಸಲಾಗುತ್ತದೆ. ಪ್ಯಾನ್ ಕಾರ್ಡ್ ಗೆ ಸಂಬಂಧಿಸಿ ಕೆಲವು ಪ್ರಮುಖ ಮಾಹಿತಿಗಳನ್ನು ತಿಳಿದಿರೋದು ಅಗತ್ಯ. ಇಲ್ಲವಾದ್ರೆ  10,000ರೂ. ದಂಡ ಪಾವತಿಸಬೇಕಾಗಬಹುದು. ದಂಡ ಅಥವಾ ಯಾವುದೇ ಕಾನೂನು ತೊಂದರೆ ಎದುರಾಗಬಾರದು ಅಂದ್ರೆ ಪ್ರತಿ ವ್ಯಕ್ತಿಯು 10 ಅಂಕೆಗಳ ಪ್ಯಾನ್ ಸಂಖ್ಯೆಯನ್ನು ಅತ್ಯಂತ ಎಚ್ಚರಿಕೆಯಿಂದ ಭರ್ತಿ ಮಾಡಬೇಕು. ಪ್ಯಾನ್ ಮಾಹಿತಿಗಳನ್ನು ಭರ್ತಿ ಮಾಡುವಾಗ ಯಾವುದೇ ಅಕ್ಷರ ದೋಷಗಳು ಇಲ್ಲವೆ ಅಂಕೆಗಳಲ್ಲಿ ಬದಲಾವಣೆಯಾದರೂ ತೊಂದರೆ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿ ಎರಡು ಪ್ಯಾನ್ ಕಾರ್ಡ್ ಹೊಂದಿದ್ರೆ ದಂಡ ಪಾವತಿಸಬೇಕಾಗುತ್ತದೆ ಕೂಡ. ಹಾಗಾದ್ರೆ ಪ್ಯಾನ್ ಕಾರ್ಡ್ಗೆ ಸಂಬಂಧಿಸಿ ಯಾವೆಲ್ಲ ಮಾಹಿತಿಗಳನ್ನು ಹೊಂದಿರಬೇಕು? 

ಪ್ಯಾನ್  ಸಂಖ್ಯೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ
ಪ್ಯಾನ್ ಕಾರ್ಡ್ (PAN CARD) 10 ಅಂಕೆಗಳನ್ನು ಭರ್ತಿ ಮಾಡುವಾಗ ಎಚ್ಚರಿಕೆ ವಹಿಸಿ. ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್  272ಬಿ ಅಡಿಯಲ್ಲಿ ಪ್ಯಾನ್ ಕಾರ್ಡ್  ತಪ್ಪು ಮಾಹಿತಿಗಳನ್ನು ಒದಗಿಸಿದ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ 10,000 ರೂ. ದಂಡ ವಿಧಿಸಲು ಅವಕಾಶವಿದೆ. ಹಾಗೆಯೇ ಒಬ್ಬ ವ್ಯಕ್ತಿ ಒಂದೇ ಪ್ಯಾನ್ ಕಾರ್ಡ್ ಹೊಂದಿರೋದು ಅಗತ್ಯ. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ರೆ ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ರದ್ದುಗೊಳಿಸುವ ಜೊತೆಗೆ ದಂಡ ಕೂಡ ವಿಧಿಸುತ್ತದೆ. ಹಾಗೆಯೇ ಪ್ಯಾನ್ ಕಾರ್ಡ್ ಗೆ ಸಂಬಂಧಿಸಿ ಯಾವುದೇ ಸಮಸ್ಯೆಯಾದ್ರೂ ನಿಮ್ಮ ಬ್ಯಾಂಕ್ ಖಾತೆ ಕೂಡ ನಿಷ್ಕ್ರಿಯಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದ್ರೆ, ಎರಡನೇ ಕಾರ್ಡ್ ಅನ್ನು ತಕ್ಷಣ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿ. 

Tap to resize

Latest Videos

ಸಾಲದ ಬಡ್ಡಿದರ ಹೆಚ್ಚಿಸಿದ HDFC: ಗೃಹಸಾಲದ ಪ್ರಾರಂಭಿಕ ಬಡ್ಡಿದರ ಶೇ. 8.6

ಎರಡನೇ ಪ್ಯಾನ್ ಕಾರ್ಡ್ ಒಪ್ಪಿಸೋದು ಹೇಗೆ?
ಕೆಲವೊಮ್ಮೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿರುತ್ತಾರೆ. ಆದರೆ, ಪ್ಯಾನ್ ಕಾರ್ಡ್ ಬಂದಿರೋದಿಲ್ಲ. ಆಗ ಇನ್ನೊಂದು ಪ್ಯಾನ್ ಕಾರ್ಡ್ ಗೆ ಮರು ಅರ್ಜಿ ಸಲ್ಲಿಸುತ್ತಾರೆ. ಇಂಥ ಸಂದರ್ಭಗಳಲ್ಲಿ ಕೆಲವೊಮ್ಮೆ ಎರಡು ಪ್ಯಾನ್ ಕಾರ್ಡ್ ಗಳು ಬರುವ ಸಾಧ್ಯತೆಯಿರುತ್ತದೆ. ಅಂಥ ಸಂದರ್ಭಗಳಲ್ಲಿ ಎರಡನೇ ಪ್ಯಾನ್ ಕಾರ್ಡ್ ಅನ್ನು ತಕ್ಷಣ ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಬೇಕು. ಎರಡೂ ಕಾರ್ಡ್ ಗಳ ಸಂಖ್ಯೆ ಬೇರೆ ಇದ್ದರೂ ನಿಯಮಗಳ ಪ್ರಕಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಪ್ಯಾನ್ ಕಾರ್ಡ್ ಹೊಂದುವಂತಿಲ್ಲ. ಪ್ಯಾನ್ ಕಾರ್ಡ್ ಅನ್ನು ಕಚೇರಿಗೆ ತೆರಳಿ ಅಥವಾ ಆನ್ ಲೈನ್ ಮೂಲಕ ಒಪ್ಪಿಸಲು ಅವಕಾಶವಿದೆ. ಪ್ಯಾನ್ ಕಾರ್ಡ್ ಒಪ್ಪಿಸಲು ನಿರ್ದಿಷ್ಟ ಅರ್ಜಿಗಳಿವೆ. ಈ ಅರ್ಜಿಗಳನ್ನು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ಹೊಸ ಪ್ಯಾನ್ ಕಾರ್ಡ್ ಗೆ ಮನವಿ/ಪ್ಯಾನ್ ಡೇಟಾ ಬದಲಾವಣೆ ಅಥವಾ ತಿದ್ದುಪಡಿ ಮನವಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಆ ಬಳಿಕ ಈ ಅರ್ಜಿಯನ್ನು ಭರ್ತಿ ಮಾಡಿ ನ್ಯಾಷನಲ್ ಸೆಕ್ಯುರಿಟೀಸ್ ಡೆಫೋಸಿಟರಿ ಲಿ. (NSDL) ಕಚೇರಿಗೆ ಸಲ್ಲಿಕೆ ಮಾಡಬೇಕು. ಅರ್ಜಿ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಕೂಡ ಒಪ್ಪಿಸಿ. ಆನ್ ಲೈನ್ ಮೂಲಕ ಕೂಡ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ.

ಕೂಲಿ ಕಾರ್ಮಿಕನಿಗೆ 14 ಕೋಟಿ ರೂ ತೆರಿಗೆ ಪಾವತಿಸುವಂತೆ ನೋಟಿಸ್, ಕಂಗಾಲದ ಕುಟುಂಬ ನಾಪತ್ತೆ!

 

click me!