ಪಾಕಿಸ್ತಾನ ಷೇರುಪೇಟೆ ಶೇ.6ರಷ್ಟು ಕುಸಿತ: ವಹಿವಾಟು ಸ್ತಬ್ಧ

Published : May 09, 2025, 09:48 AM IST
ಪಾಕಿಸ್ತಾನ ಷೇರುಪೇಟೆ ಶೇ.6ರಷ್ಟು ಕುಸಿತ: ವಹಿವಾಟು ಸ್ತಬ್ಧ

ಸಾರಾಂಶ

ಪಾಕಿಸ್ತಾನದ ಕರಾಚಿ ಬಳಿ ಭಾರತವು ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸುತ್ತಿದೆ ಎನ್ನುವ ವದಂತಿಯಿಂದಾಗಿ ಪಾಕ್‌ ಷೇರುಪೇಟೆ ಭಾರೀ ಕುಸಿತ ಕಂಡಿದ್ದು, ಗುರುವಾರ ಒಂದೇ ದಿನ ಶೇ.6ರಷ್ಟು ಇಳಿಕೆಯಾಗಿದೆ. 

ಕರಾಚಿ (ಮೇ.09): ಪಾಕಿಸ್ತಾನದ ಕರಾಚಿ ಬಳಿ ಭಾರತವು ಮಿಲಿಟರಿ ಕಾರ್ಯಾಚರಣೆಯನ್ನು ಹೆಚ್ಚಿಸುತ್ತಿದೆ ಎನ್ನುವ ವದಂತಿಯಿಂದಾಗಿ ಪಾಕ್‌ ಷೇರುಪೇಟೆ ಭಾರೀ ಕುಸಿತ ಕಂಡಿದ್ದು, ಗುರುವಾರ ಒಂದೇ ದಿನ ಶೇ.6ರಷ್ಟು ಇಳಿಕೆಯಾಗಿದೆ. ಈ ನಡುವೆ ಷೇರು ವಹಿವಾಟು ಒಂದು ಗಂಟೆ ಸ್ಥಗಿತಗೊಂಡಿತು. ಭಾರತದ ದಾಳಿ ನಡೆಸಿರುವ ವದಂತಿಗಳು ಆಧಾರ ರಹಿತವಾಗಿದ್ದರೂ, ಪಾಕ್ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಒಂದು ಗಂಟೆ ವಹಿವಾಟು ಸ್ಥಗಿತಕ್ಕೂ ಮುನ್ನ ಕೆಎಸ್‌ಇ100 ಸೂಚ್ಯಂಕವು ಗುರುವಾರ 6948.73 ಅಂಕಗಳಷ್ಟು ಕುಸಿತ ಕಂಡು 1,03,060ರಲ್ಲಿ ಮುಕ್ತಾಯಗೊಂಡಿತು. ಅ ನಂತರ ಷೇರುಪೇಟೆ ಶಾಂತಗೊಂಡ ಬಳಿಕ ಮತ್ತೆ ವಹಿವಾಟು ಪುನಾರಂಭಗೊಂಡಿತು.

ಭಾರತದ ಷೇರುಪೇಟೆ ಕೂಡ 412 ಅಂಕ ಇಳಿಕೆ: ಭಾರತ-ಪಾಕ್‌ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಭಾರತದ ಷೇರುಪೇಟೆಗಳು ಕುಸಿದಿವೆ. ಸೆನ್ಸೆಕ್ಸ್ 412 ಅಂಕ ಇಳಿದು 80,334.81ಕ್ಕೆ ಸ್ಥಿರಗೊಂಡಿದೆ. ನಿಫ್ಟಿ 140.60 ಅಂಕ ಇಳಿದು 24,273.80ಕ್ಕೆ ಸ್ಥಿರವಾಗಿದೆ.

ಪಾಕ್ ಸಂಸತ್ತಲ್ಲಿ ಸಂಸದನ ಕಣ್ಣೀರು: ಭಾರತದ ಆಪರೇಷನ್‌ ಸಿಂದೂರ ದಾಳಿಗೆ ಪಾಕಿಸ್ತಾನ ಥರಗುಟ್ಟಿ ಹೋದಂತಿದೆ. ಸಂಸದರೊಬ್ಬರು ಪಾಕ್‌ ಸಂಸತ್ತಿನಲ್ಲಿ ‘ದೇಶವನ್ನು ರಕ್ಷಿಸಿ’ ಎಂದು ಕಣ್ಣೀರು ಹಾಕಿ ಮನವಿ ಮಾಡಿದ್ದಾರೆ. ಸ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯ (ಸಂಸತ್) ಸದಸ್ಯ ತಹೀರ್ ಇಕ್ಬಾಲ್‌ ಅವರು ಗುರುವಾರ ಭಾರತ ನಡೆಸುತ್ತಿರುವ ಕಾರ್ಯಾಚರಣೆಗಳ ಬಗ್ಗೆ ಮಾತನಾಡುತ್ತ ಕಣ್ಣೀರು ಹಾಕಿದರು.‘ದೇವರೇ, ದಯವಿಟ್ಟು ಈ ದೇಶವನ್ನು ಸುರಕ್ಷಿತವಾಗಿ ಇರಿಸು’ ಎಂದು ಮನವಿ ಮಾಡಿದರು. ಮೋಜಿನ ಸಂಗತಿಯೆಂದರೆ ಅವರು ಪಾಕಿಸ್ತಾನದ ಮಾಜಿ ಸೇನಾ ಅಧಿಕಾರಿ ಆಗಿದ್ದಾರೆ.

ಆಪರೇಶನ್‌ ಸಿಂದೂರ ಭಾಗ-2: ಪಾಕಿಸ್ತಾನದ ಆಕ್ರಮಣಕ್ಕೆ ಭಾರತ ಪ್ರತೀಕಾರ

ಮೌಲಾನಾ ನೆಂಟರ ನಿಧನಕ್ಕೆ ತಾಲಿಬಾನ್ ಸಂತಾಪ: ಜೈಶ್ರೆ ಮುಹಮ್ಮದ್ ಮುಖ್ಯಸ್ಥ ಭಯೋತ್ಪಾದಕ ಮೌಲಾನಾ ಮಸೂದ್ ಅಜರ್ ಹತ್ಯೆಗೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂತಾಪ ಸೂಚಿಸಿದೆ, ಪಾಕಿಸ್ತಾನ ಸೇನೆಯು ಎಲ್ಲಾ 9 ಗುರಿಗಳನ್ನು ಮಾಹಿತಿಯನ್ನು ಭಾರತಕ್ಕೆ ಸೋರಿಕೆ ಮಾಡಿತ್ತು. ಅದಕ್ಕೇ ಈ ದಾಳಿ ನಡೆದಿದೆ ಎಂದು ಆರೋಪಿಸಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!