ಪಾಕಿಸ್ತಾನದ ಸದ್ಯ ಸುದ್ದಿಯಲ್ಲಿದೆ. ಅಲ್ಲಿನ ಚುನಾವಣೆ ಎಲ್ಲರ ಗಮನ ಸೆಳೆಯುತ್ತಿದೆ. ನಾಯಕರು ತಮ್ಮ ಆಸ್ತಿ ವಿವರ ಬಿಚ್ಚಿಡುತ್ತಿದ್ದಾರೆ. ನವಾಜ್ ಷರೀಫ್ ಮಗಳ ಆಸ್ತಿ ಹಾಗೂ ರಾಜಕೀಯದ ವಿವರ ಇಲ್ಲಿದೆ.
ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ಇದೇ ಫೆಬ್ರವರಿ ಎಂಟರಂದು ನಡೆಯಲಿದೆ. ಇದಕ್ಕೆ ತಯಾರಿ ಜೋರಾಗಿ ನಡೆದಿದೆ. ನಾಯಕರ ನಾಮಪತ್ರ ಸಲ್ಲಿಕೆ ನಡೆಯುತ್ತಿದೆ. ನಾಮಪತ್ರದಲ್ಲಿ ನಾಯಕರು ತಮ್ಮ ಆಸ್ತಿ ವಿವರಗಳನ್ನು ನೀಡ್ತಿದ್ದಾರೆ. ಇದ್ರಲ್ಲಿ ನವಾಜ್ ಷರೀಫ್ ಪುತ್ರಿ ಮರ್ಯಮ್ ನವಾಜ್ ಹೆಸರೂ ಇದೆ. ಮರ್ಯಮ್ ನವಾಜ್, ಪಾಕಿಸ್ತಾನದ ರಾಜಕೀಯದಲ್ಲಿ ದೊಡ್ಡ ಹೆಸರು ಪಡೆದಿದ್ದಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಉಪಾಧ್ಯಕ್ಷೆ ಮರ್ಯಮ್ ನವಾಜ್, ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಸೌಂದರ್ಯದ ಜೊತೆ ರಾಜಕೀಯ ವಿಷ್ಯಕ್ಕೆ ಮರ್ಯಮ್ ನವಾಜ್ ಆಗಾಗ ಸುದ್ದಿಯಾಗ್ತಿರುತ್ತಾರೆ. ಈಗ ಮರ್ಯಮ್ ನವಾಜ್, ಆಸ್ತಿ ವಿಷ್ಯದಲ್ಲಿ ಚರ್ಚೆಗೆ ಬಂದಿದ್ದಾರೆ. ಪಾಕಿಸ್ತಾನ ಒಂದು ಕಡೆ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದ್ದೆ. ಅಲ್ಲಿನ ಜನಸಾಮಾನ್ಯರು ನಿತ್ಯದ ವಸ್ತು ಖರೀದಿಗೆ ಕಷ್ಟಪಡ್ತಿದ್ದಾರೆ. ಆದ್ರೆ ಇತ್ತ ರಾಜಕೀಯ ನಾಯಕರ ಬೊಕ್ಕಸ ಮಾತ್ರ ತುಂಬುತ್ತಲೇ ಇದೆ. ಮರ್ಯಮ್ ನವಾಜ್ ಆಸ್ತಿ ಒಂದು ವರ್ಷದಲ್ಲಿ 40 ಲಕ್ಷ ಪಾಕಿಸ್ತಾನಿ ರೂಪಾಯಿಗಳಷ್ಟು ಹೆಚ್ಚಾಗಿದೆ.
ಮರ್ಯಮ್ ನವಾಜ್ (Maryam Nawaz) ಬಳಿ ಇರುವ ಆಸ್ತಿ ಎಷ್ಟು? : ಮರ್ಯಮ್ ನವಾಜ್ ನಾಮನಿರ್ದೇಶನದಲ್ಲಿ ನೀಡಿರುವ ಮಾಹಿತಿ ಪ್ರಕಾರ, ಮರ್ಯಮ್ 84.2 ಕೋಟಿ ಪಾಕಿಸ್ತಾನಿ (Pakistani) ರೂಪಾಯಿ ಅಂದ್ರೆ ಸುಮಾರು 25 ಕೋಟಿ ಭಾರತೀಯ ರೂಪಾಯಿ ಮೌಲ್ಯದ ಆಸ್ತಿ (Property) ಹೊಂದಿದ್ದಾರೆ. 50 ವರ್ಷದ ಮರ್ಯಮ್ ಲಾಹೋರ್‌ನಲ್ಲಿ 188 ಎಕರೆ ಭೂಮಿಯನ್ನು ಹೊಂದಿದ್ದಾರೆ. ಸಹೋದರ ಹಸನ್ ನವಾಜ್‌ರಿಂದ 28.9 ಮಿಲಿಯನ್‌ಗಿಂತಲೂ ಹೆಚ್ಚು ಸಾಲ ಪಡೆದಿದ್ದು, ಅದ್ರ ಹೊರೆ ಮರ್ಯಮ್ ನವಾಜ್ ಮೇಲಿದೆ. ಮರ್ಯಮ್ ನವಾಜ್ ಬಳಿ ಯಾವುದೇ ಕಾರಿಲ್ಲ. ಅವರಿಗೆ ಅವರ ಪತಿ ಕಾರನ್ನು ಉಡುಗೊರೆ (Gift) ಯಾಗಿ ನೀಡಿದ್ದಾರೆ. 2006 ರ ಮಾಡೆಲ್ ಬಿಎಂಡಬ್ಲ್ಯೂ (BMW) ಕಾರನ್ನು ಗಿಫ್ಟ್ ನೀಡಿದ್ದು ಅದರ ಮೌಲ್ಯ 60 ಲಕ್ಷ ರೂಪಾಯಿ ಆಗಿದೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಸಹಾಯಧನ ಪಡೆಯಲು ಇ-ಕೆವೈಸಿ ಕಡ್ಡಾಯ; ಈ ಪ್ರಕ್ರಿಯೆ ಪೂರ್ಣಗೊಳಿಸದ ರೈತರಿಗಿಲ್ಲ ಹಣ
ಇಷ್ಟೇ ಅಲ್ಲ ಮರ್ಯಮ್ ನವಾಜ್ ಬಳಿ 17.5 ಲಕ್ಷ ಪಾಕಿಸ್ತಾನಿ ರೂಪಾಯಿ ಮೌಲ್ಯದ ಚಿನ್ನವಿದೆ. ವಿವಿಧ ಬ್ಯಾಂಕ್ ಖಾತೆಗಳಲ್ಲಿ 1 ಕೋಟಿಗೂ ಹೆಚ್ಚು ಪಾಕಿಸ್ತಾನಿ ರೂಪಾಯಿಗಳನ್ನು ಠೇವಣಿ ಮಾಡಿದ್ದಾರೆ. ಮೇರಿಯಮ್ ಹಲವಾರು ಕಂಪನಿಗಳಲ್ಲಿ 12.2 ಮಿಲಿಯನ್ ಪಾಕಿಸ್ತಾನಿ ರೂಪಾಯಿ ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ.
ಮರ್ಯಮ್ ನವಾಜ್ ಅವರ ತಂದೆಗೆ ತುಂಬಾ ಹತ್ತಿರವಾಗಿದ್ದು, ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಸಂಕಷ್ಟದ ಸಮಯದಲ್ಲಿ ಪಾಕಿಸ್ತಾನದಲ್ಲೇ ಇದ್ದು ತಂದೆ ಬೆಂಬಲಕ್ಕೆ ಅವರು ನಿಂತಿದ್ದರು. ರಾಜಕೀಯಕ್ಕೆ ಮರ್ಯಮ್ ಎಂಟ್ರಿಯಾಗಿದ್ದು ಯಾವಾಗ? : ನವಾಜ್ ಶರೀಫ್ ಮಗಳು ಮರ್ಯಮ್ ತುಂಬಾ ತಡವಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟರು ಅಂದ್ರೆ ತಪ್ಪಾಗೋದಿಲ್ಲ. 2012ರಲ್ಲಿ ಅವರು ರಾಜಕೀಯಕ್ಕೆ ಅಧಿಕೃತವಾಗಿ ಪ್ರವೇಶ ಮಾಡಿದ್ರು. ಇದಕ್ಕೆ ಮುನ್ನ ಅವರು ಷರೀಫ್ ಕುಟುಂಬದ ಫೌಂಡೇಷನ್ ನಲ್ಲಿ ಕೆಲಸ ಮಾಡ್ತಿದ್ದರು. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ರಾಜಕೀಯಕ್ಕೆ ಸೇರಿದ ಆರಂಭದಲ್ಲೂ ಕೇವಲ ಮಹಿಳಾ ಸಮಾರಂಭದಲ್ಲಿ ಮಾತ್ರ ಪಾಲ್ಗೊಳ್ಳುತ್ತಿದ್ದರು. ಅಪ್ಪನ ಜೊತೆ ತಾವೂ ಜೈಲಿಗೆ ಹೋಗಿದ್ದ ಮರ್ಯಮ್, ಜಾಮೀನಿನ ಮೇಲೆ ಹೊರಗೆ ಬಂದ್ಮೇಲೆ ಪಕ್ಷದ ಜವಾಬ್ದಾರಿ ಹೊತ್ತಿದ್ದರು.
ಸೀರೆ ಮಾರಿ ಹಣ ಗಳಿಸ್ತಿದ್ದಾಕೆ ಈಗ ಬೃಹತ್ ಫ್ಯಾಷನ್ ಬ್ರ್ಯಾಂಡ್ ಒಡತಿ, ತಿಂಗಳ ಆದಾಯವೇ ಕೋಟಿ ಮೀರುತ್ತೆ!
ಮರ್ಯಮ್ ಮದುವೆ – ಮಕ್ಕಳು : ಮರ್ಯಮ್ ನಿವೃತ್ತ ಸೇನಾ ಅಧಿಕಾರಿಯನ್ನು ವಿವಾಹವಾಗಿದ್ದಾರೆ. ಅವರ ಪತಿ ಹೆಸರು ಮುಹಮ್ಮದ್ ಸಫ್ದರ್ ಅವನ್. ಅವರಿಗೆ 59 ವರ್ಷ. ಮುಹಮ್ಮದ್ ಸಫ್ದರ್ ಅವನ್ ಸಫ್ದರ್ ಪಾಕಿಸ್ತಾನದ ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಮರ್ಯಮ್ ನವಾಜ್ ಮತ್ತು ಸಫ್ದರ್ ಅವರಿಗೆ ಒಟ್ಟು 3 ಮಕ್ಕಳು.