ಪಾಕ್‌ನಲ್ಲಿ ಉದ್ಯಮಿಗಳಿಗೆ ಸೇನಾ ಮುಖ್ಯಸ್ಥರಿಂದ ಉದ್ಯಮ ಪಾಠ!

Published : Oct 05, 2019, 09:57 AM IST
ಪಾಕ್‌ನಲ್ಲಿ ಉದ್ಯಮಿಗಳಿಗೆ ಸೇನಾ ಮುಖ್ಯಸ್ಥರಿಂದ ಉದ್ಯಮ ಪಾಠ!

ಸಾರಾಂಶ

ಪಾಕ್‌ನಲ್ಲಿ ಉದ್ಯಮಿಗಳಿಗೆ ಸೇನಾ ಮುಖ್ಯಸ್ಥರಿಂದ ಉದ್ಯಮ ಪಾಠ!| ಸ್ವತಃ ಬಜ್ವಾ ಅವರೇ ಪ್ರಮುಖ ಉದ್ಯಮಿಗಳೊಂದಿಗೆ ಸಭೆ 

ಇಸ್ಲಾಮಾಬಾದ್‌[ಅ.05]: ಆರ್ಥಿಕತೆ ಕುಸಿದಾಗ ಉದ್ಯಮಿಗಳ ಜೊತೆ ವಿತ್ತ ಸಚಿವರು ಸಭೆ ನಡೆಸುವುದು, ಅವರಿಗೆ ಧೈರ್ಯ ಹೇಳುವುದು ಸಾಮಾನ್ಯ. ಅಚ್ಚರಿಯ ವಿಷಯವೆಂದರೆ ಪಾಕಿಸ್ತಾನದಲ್ಲಿ ಈ ವಿಷಯವನ್ನು ಸೇನಾ ಮುಖ್ಯಸ್ಥ ಖ್ವಾಮರ್‌ ಜಾವೇದ್‌ ಬಜ್ವಾ ವಹಿಸಿಕೊಂಡಿದ್ದಾರೆ!

ನಿಜ, ಆರ್ಥಿಕ ಹಿಂಜರಿತ ಸೇರಿದಂತೆ ನಾನಾ ಸಮಸ್ಯೆಗಳಿಂದ ಬಳಲಿರುವ ಉದ್ಯಮ ವಲಯಕ್ಕೆ ನೆರವು ನೀಡಿ ಎಂದು ಹಲವು ಸಮಯದಿಂದ ಉದ್ಯಮಿಗಳು ಪ್ರಧಾನಿ ಇಮ್ರಾನ್‌ಗೆ ಮನವಿ ಮಾಡುತ್ತಲೇ ಇದ್ದಾರೆ. ಆದರೆ ಇದಕ್ಕೆ ಕಿವಿಗೊಟ್ಟಿಲ್ಲ ಎಂದು ಬೇಸತ್ತಿರುವ ಉದ್ಯಮಿಗಳು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದರೆ.

ಹೀಗಾಗಿ ಅವರ ಮನವೊಲಿಸುವ ನಿಟ್ಟಿನಲ್ಲಿ ಸ್ವತಃ ಬಜ್ವಾ ಅವರೇ ಪ್ರಮುಖ ಉದ್ಯಮಿಗಳೊಂದಿಗೆ ಸಭೆ ನಡೆಸಿ ಅವರಿಗೆ ನೆರವಿನ ಭರವಸೆ ನೀಡಿದ್ದಾರೆ. ಬಜ್ವಾ ಅವರು ಪ್ರಧಾನಿ ಇಮ್ರಾನ್‌ ನೇತೃತ್ವದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸದಸ್ಯರು ಕೂಡಾ ಹೌದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!