
ಬೆಂಗಳೂರು(ಆ.17): ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ದಿನಕ್ಕೊಂದು ಹೊಸ ನಿಯಮಾವಳಿಗಳು ಜಾರಿಯಾಗುವುದು ಇಂದು ಸಾಮಾನ್ಯವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಡಿಜಿಟಲೀಕರಣ ಹಾಗೂ ಆಧುನೀಕರಣದ ಪರಿಣಾಮ ಹೊಸ ಹೊಸ ನಿಯಮಾವಳಿಗಳು ಸಾಮಾನ್ಯವಾಗಿವೆ.
ಆದರೆ ಈ ನಿಯಮಾವಳಿಗಳು ಗ್ರಾಹಕರ ಸುರಕ್ಷತೆಗೆ ಅವಶ್ಯಕವೂ ಆಗಿದ್ದು, ಆಧುನೀಕರಣಕ್ಕೆ ತಕ್ಕಂತೆ ಈ ನಿಯಮಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುತ್ತಿವೆ.
ಅದರಂತೆ ಎಟಿಎಂನಿಂದ ಹಣ ವಿತ್'ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ ತಂದಿರುವ ಕೆನರಾ ಬ್ಯಾಂಕ್, 5 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್'ಡ್ರಾ ಮಾಡಲು OTP ವ್ಯವಸ್ಥೆಯನ್ನು ಜಾರಿಗೆ ತಂದಿದೆ.
5 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಹಣ ವಿತ್'ಡ್ರಾ ಮಾಡುವ ಗ್ರಾಹಕನ ಅಧಿಕೃತ ಮೊಬೈಲ್ ನಂಬರ್‌ಗೆ OTP ಬರುತ್ತದೆ. ಆ OTPಯನ್ನು ಎಟಿಎಂ ಯಂತ್ರದಲ್ಲಿ ನಮೂದಿಸಿದಾಗ ಮಾತ್ರ ಹಣ ವಿತ್'ಡ್ರಾ ಆಗುತ್ತದೆ.
ದಿನಕ್ಕೆ 5 ಸಾವಿರ ರೂ. ವಿತ್'ಡ್ರಾ ಮಿತಿಯನ್ನು ಮತ್ತಷ್ಟು ಅಚ್ಚುಕಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎನ್ನಲಾಗಿದೆ.
ಗ್ರಾಹಕರ ಖಾತೆ ಮತ್ತು ಹಣದ ಸುರಕ್ಷತೆಗಾಗಿ ಈ ಹೊಸ ನಿಯಮ ಜಾರಿಗೆ ತಂದಿದ್ದು, ಹೊಸ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.