*ಫೋರ್ಬ್ಸ್ ವಿಶ್ವದ ಟಾಪ್ 100 ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿ 2022 ಪ್ರಕಟ
*ಮೊದಲ ಸ್ಥಾನ ಗಳಿಸಿದ ಆಪಲ್ ಕಂಪನಿ
*77ನೇ ಸ್ಥಾನದಲ್ಲಿ ಟಾಟಾ ಸಮೂಹ ಸಂಸ್ಥೆ
ನ್ಯೂಯಾರ್ಕ್ (ಅ.28): ವಿಶ್ವದ ಟಾಪ್ 100 ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿ 2022 ಅನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತದ ಟಾಟಾ ಗ್ರೂಪ್ ಸ್ಥಾನ ಪಡೆದಿದೆ. ಈ ಮೂಲಕ ವಿಶ್ವದ ಮೌಲ್ಯಯುತ ಬ್ರ್ಯಾಂಡ್ ಗಳ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದೆ. ಟಾಟಾ ಗ್ರೂಪ್ ಈ ಪಟ್ಟಿಯಲ್ಲಿ 77ನೇ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು ಸ್ಮಾರ್ಟ್‌ಫೋನ್ ಉತ್ಪಾದನೆಯಲ್ಲಿ ಜನಪ್ರಿಯತೆ ಗಳಿಸಿರುವ ಅಮೆರಿಕದ ಆಪಲ್ ಕಂಪನಿ ಅಲಂಕರಿಸಿದೆ. 241.2 ಶತಕೋಟಿ ಡಾಲರ್ ಮೌಲ್ಯವನ್ನುಆಪಲ್ ಹೊಂದಿದೆ. ದ್ವಿತೀಯ ಸ್ಥಾನದಲ್ಲಿ 207.5 ಶತಕೋಟಿ ಡಾಲರ್ ಮೌಲ್ಯ ಹೊಂದಿರುವ ಗೂಗಲ್ ಇದೆ. ತೃತೀಯ ಸ್ಥಾನದಲ್ಲಿ ಮೈಕ್ರೋಸಾಫ್ಟ್ , 4ನೇ ಸ್ಥಾನದಲ್ಲಿ ಅಮೆಜಾನ್ ಹಾಗೂ 5ನೇ ಸ್ಥಾನದಲ್ಲಿ ಫೇಸ್ ಬುಕ್ ಇದೆ. ಉಳಿದಂತೆ ಫೇಸ್ ಬುಕ್, ಕೋಕಾಕೋಲಾ, ಡಿಸ್ನಿ, ಸ್ಯಾಮ್ ಸಂಗ್, ಲೂಯಿಸ್ ವೊಯ್ಟಿನ್ಹಾಗೂ ಮ್ಯಾಕ್ ಡೊನಾಲ್ಡ್ ಕ್ರಮವಾಗಿ 6,7,8,9 ಹಾಗೂ 10ನೇ ಸ್ಥಾನಗಳಲ್ಲಿವೆ.
ಟಾಪ್ 100ರ ಕ್ಲಬ್ ನಲ್ಲಿ ಟಾಟಾ ಗ್ರೂಪ್
ವಿಶ್ವದ ಟಾಪ್ 100 ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಯನ್ನು ಟಾಟಾ ಸಮೂಹ ಸಂಸ್ಥೆ ಪಡೆದಿದೆ. ಟಾಟಾ ಬ್ರ್ಯಾಂಡ್ ಶೇ.12.4ರಷ್ಟು ಬೆಳವಣಿಗೆ ದಾಖಲಿಸಿದೆ. ದಕ್ಷಿಣ ಏಷ್ಯಾದ ಗ್ರೂಪ್ ನಲ್ಲಿ ಟಾಟಾ ಸಮೂಹ ಸಂಸ್ಥೆ ಅತೀದೊಡ್ಡ ಬ್ರ್ಯಾಂಡ್ ಎಂದು ಗುರುತಿಸಿಕೊಂಇದ್ದು, 23.9 ಶತಕೋಟಿ ಡಾಲರ್ ಮೌಲ್ಯ ಹೊಂದಿದೆ.
Elon Musk: ಟ್ವಿಟರ್‌ಗೆ ಎಲಾನ್ ಮಸ್ಕ್ ಬಾಸ್: ಪರಾಗ್ ಅಗರವಾಲ್ ಸೇರಿ ಹಲವು ಉನ್ನತ ಅಧಿಕಾರಿಗಳು ವಜಾ?
ಅತೀ ಹೆಚ್ಚು ಗಳಿಕೆ ಸೋಷಿಯಲ್ ಆ್ಯಪ್ ಟಿಕ್ಟಾಕ್
ಆಂಡ್ರ್ಯಾಯ್ಡ್ ಹಾಗೂ ಐಫೋನ್ ಸಾಧನಗಳಲ್ಲಿ ಆ್ಯಪ್ ಖರೀದಿ ಆಗೂ ಚಂದಾದಾರಿಕೆ ಮೂಲಕ ಟಿಕ್ ಟಾಕ್ ಪ್ರತಿದಿನ ವಿಶ್ವದಾದ್ಯಂತ 25 ಲಕ್ಷ ಡಾಲರ್ ಗಳಿಸುತ್ತಿದೆ. ಒಂದು ತಿಂಗಳ ಅವಧಿಯಲ್ಲಿ ಈ ಆ್ಯಪ್ 75.8 ದಶಲಕ್ಷ ಡಾಲರ್ ಸಂಚಿತ ಆದಾಯ ಗಳಿಸುವ ಮೂಲಕ ದಾಖಲೆ ಬರೆದಿದೆ.
ಟಾಟಾ ಸಮೂಹ ಸಂಸ್ಥೆ ಸಂಸ್ಥಾಪಕ ಜೆಮ್‌ಶೆಡ್ ಜೀ ಟಾಟಾ ಅವರನ್ನು ಭಾರತೀಯ ಉದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. 1870ರಲ್ಲೇ ಜವಳಿ ಉದ್ಯಮ ಪ್ರಾರಂಭಿಸೋ ಮೂಲಕ ಜೆಮ್‌ಶೆಡ್ ಜೀ ಟಾಟಾ ತಮ್ಮ ಉದ್ಯಮ ಯಾನ ಪ್ರಾರಂಭಿಸುತ್ತಾರೆ. ಆ ಕಾಲದಲ್ಲೇ ಅವರು ಉಕ್ಕು ಹಾಗೂ ಇಂಧನ ಕೈಗಾರಿಕೆಗಳಿಗೆ ಭವಿಷ್ಯದಲ್ಲಿ ಬಹಳ ಬೇಡಿಕೆಯಿದೆ ಎಂಬುದನ್ನು ಅರಿತುಕೊಂಡಿದ್ದರು. ಇವರ ಈ ಮುಂದಾಲೋಚನೆಯೇ ಭಾರತದಲ್ಲಿ ಉಕ್ಕು ಹಾಗೂ ವಿದ್ಯುತ್ ಕೈಗಾರಿಕೆಗಳ ಬೆಳವಣಿಗೆಗೆ ಭದ್ರ ಅಡಿಪಾಯ ಒದಗಿಸಿತು. ಭಾರತದ ಕೈಗಾರಿಕಾ ರಂಗದ ಕುರಿತು ದೂರದೃಷ್ಟಿ ಹೊಂದಿದ ಜೆಮ್‌ಶೆಡ್ ಜೀ ಟಾಟಾ ಅಂದು ಹುಟ್ಟುಹಾಕಿದ ಟಾಟಾ ಸಮೂಹ ಸಂಸ್ಥೆ ಇಂದು ಬೆಳೆದು ಹೆಮ್ಮಾರವಾಗಿದ್ದು, ಒಟ್ಟು 31 ಕಂಪನಿಗಳನ್ನೊಳಗೊಂಡಿದೆ.
1971ರಲ್ಲಿ ಟಾಟಾ ಸಮೂಹ ಸಂಸ್ಥೆಗಳ ಡೈರೆಕ್ಟರ್ ಇನ್ ಚಾರ್ಜ್ ಆಗಿ ಟಾಟಾದಲ್ಲಿ ಹೊಸ ಅಧ್ಯಾಯ ಆರಂಭಿಸಿದ ರತನ್ ಟಾಟಾ, ನಂತರ ಇತಿಹಾಸ ಸೃಷ್ಟಿಸಿದರು. ವಿಶ್ವದಲ್ಲಿ ಗೌರವಿಸಲ್ಪಡುವ ಉದ್ಯಮಿಗಳಲ್ಲಿ ಇವರೂ ಒಬ್ಬರು. ಸರಳ, ಸಜ್ಜನಿಕೆ ಮೂಲಕ ರತನ್ ಟಾಟಾ ಭಾರತೀಯರ ಮನಸ್ಸಿನಲ್ಲಿ ಗೌರವದ ಸ್ಥಾನ ಗಳಿಸಿದ್ದಾರೆ.
ಭಾರತೀಯ ಹೂಡಿಕೆದಾರರ ನಂ.1 ಆಯ್ಕೆ ಎಫ್ ಡಿ ಅಲ್ಲ, ಮ್ಯೂಚ್ಯುವಲ್ ಫಂಡ್ಸ್: ಸಮೀಕ್ಷೆ
ಟಾಟಾ ಸಮೂಹ ಸಂಸ್ಥೆ ಅನೇಕ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದೆ. ಉಪ್ಪಿನಿಂದ ಹಿಡಿದು ಐಟಿ ಜಗತ್ತಿನ ತನಕ, ಅಟೋಮೊಬೈಲ್ ನಿಂದ ಹಿಡಿದು ವಿಮಾನಯಾನದ ತನಕ ಟಾಟಾ ಸಂಸ್ಥೆಯ ಸಾಮ್ರಾಜ್ಯ ವಿಸ್ತರಿಸಿದೆ. ಟಾಟಾ ಬ್ರ್ಯಾಂಡ್ ನ ಪ್ರತಿ ವಸ್ತು ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸವನ್ನು ಗಳಿಸಿದೆ ಎಂದರೆ ತಪ್ಪಿಲ್ಲ.