2025ರ ಬಿಲೇನಿಯರ್ ಪೈಕಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ವಿಶ್ವದ ಹಲವು ದಿಗ್ಗಜರ ಸಂಪತ್ತು ಕುಸಿತ ಕಂಡಿದೆ. ಆದರೆ ಈ 94 ವರ್ಷದ ಉದ್ಯಮಿಯ ಸಂಪತ್ತು ಬರೋಬ್ಬರಿ 21.5 ಬಿಲಿಯನ್ ಡಾಲರ್ ಏರಿಕೆ ಕಂಡಿದೆ.
ನವದೆಹಲಿ(ಮಾ.22) ಈ ವರ್ಷ ಶತ ಕೋಟ್ಯಾಧಿಪತಿಗಳಿಗೆ ನಿರೀಕ್ಷಿತ ಯಶಸ್ಸು ಕೊಟ್ಟಿಲ್ಲ. ಒಂದೆಡೆ ಅಮೆರಿ ಅಧ್ಯಕ್ಷರಾಗಿ ಡೋನಾಲ್ಡ್ ಟ್ರಂಪ್ ಆಗಮನ, ಸುಂಕ ಹೆಚ್ಚಳ, ಷೇರು ಮಾರುಕಟ್ಟೆಯಲ್ಲಾದ ತಲ್ಲಣ ಸೇರಿದಂತೆ ಹಲವು ಕಾರಣಗಳಿಂದ ಲಕ್ಷ ಕೋಟಿ ಹೂಡಿಕೆದಾರಿಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಇತ್ತ ಮುಕೇಶ್ ಅಂಬಾನಿ ರಿಲಯನ್ಸ್ ಷೇರುಗಳು ಕುಸಿತ ಕಂಡಿತ್ತು. ಇನ್ನು ಗೌತಮ್ ಅದಾನಿ ಷೇರುಗಳು ಕೂಡ ಹಿನ್ನಡೆ ಕಂಡಿತ್ತು. ಹೀಗಾಗಿ ಬಹುತೇಕ ಎಲ್ಲರೂ ಸಂಪತ್ತಿನಲ್ಲಿ ಕುಸಿತ ಕಂಡಿದ್ದಾರೆ. ಆದರೆ 2025ರ ಬಿಲೇನಿಯರ್ ಪಟ್ಟಿಯಲ್ಲಿ ಬಹುತೇಕರು ಕುಸಿತ ಕಂಡಿದ್ದರೆ, 94 ವರ್ಷದ ಉದ್ಯಮಿ ಮಾತ್ರ ಭರ್ಜರಿ ಯಶಸ್ಸು ಕಂಡಿದ್ದಾರೆ. ಈ ಉದ್ಯಮಿ ಸಂಪತ್ತಿನಲ್ಲಿ 21.5 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಹೌದು, ವಾರೆನ್ ಬಫೆಟ್ ಸಂಪತ್ತು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗಿದೆ.
ಬ್ಲೂಮ್‌ಬರ್ಗ್ ಬಿಲೇನಿಯರ್ ಇಂಡೆಕ್ಸ್ ಪ್ರಕಾರ ವಾರೆನ್ ಬಫೆಟ್ ನೆಟ್ ವರ್ತ್ 21.5 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಏರಿಕೆಯಾಗಿದೆ. ಇದು 2025ರಲ್ಲಿ ಆದ ಏರಿಕೆ. ಅಂದರೆ ಕಳೆದ 3 ತಿಂಗಳಲ್ಲಿ ವಾರೆನ್ ಬಫೆಟ್ ಸಂಪತ್ತಿನಲ್ಲಿ ಗಣನೀಯ ಏರಿಕೆ ಕಂಡಿದೆ. ಆದರೆ ಕಳೆದ ಮೂರು ತಿಂಗಳಲ್ಲಿ ಬ್ಲೂಮ್‌ಬರ್ಗ್ ಇಂಡೆಕ್ಸ್ ಶತಕೋಟ್ಯಾಧಿಪತಿಗಳಲ್ಲಿ ಯಾರ ಸಂಪತ್ತು ಏರಿಕೆಯಾಗಿಲ್ಲ. 2025ರಲ್ಲಿ ಬಿಡುಗಡೆಯಾದ ಬಿಲೇನಿಯರ್ ಪಟ್ಟಿಯಲ್ಲಿ ವಾರೆನ್ ಬಫೆಟ್ 6ನೇ ಸ್ಥಾನದಲ್ಲಿದ್ದಾರೆ. ಒಟ್ಟು ಸಂಪತ್ತು 164 ಬಿಲಿಯನ್ ಅಮೆರಿಕನ್ ಡಾಲರ್.
ಟಾಪ್ 15ರ ಪಟ್ಟಿಯಲ್ಲಿರುವ ಬಿಲೇನಿಯರ್ ಪೈಕಿ ಕೇವಲ ಮೂವರ ಮಾತ್ರ ಸಂಪತ್ತು ವೃದ್ಧಿಸಿದೆ. ಆಧರೆ ವಾರೆನ್ ಬಫೆಟ್ ಸಂಪತ್ತು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಅನ್ನೋದು ವಿಶೇಷ. ಇದಕ್ಕೆ ಮುಖ್ಯ ಕಾರಣ ವಾರೆನ್ ಬಫೆಟ್ ಅರ ಬರ್ಕ್‌ಶೈರ್ ಹಾಥ್‌ವೇ ಷೇರುಗಳು. ಒಂದೆಡೆ ವಾರೆನ್ ಬಫೆಟ್ ಅವರ ಷೇರುಗಳ ಮೌಲ್ಯ ಹೆಚ್ಚಾಗಿದೆ. ಸಂಪತ್ತು ಹೆಚ್ಚಾಗುತ್ತಿದ್ದರೆ, ಇತ್ತ, ಹಲವು ಶಚ ಕೋಟ್ಯಾಧಿಪತಿಗಳ ಸಂಪತ್ತು ಕೆಳಮುಖವಾಗಿದೆ. ಈ ಪೈಕಿ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಕೂಡ ಹೊರತಾಗಿಲ್ಲ.
ಮಾರ್ಚ್ 2ನೇ ವಾರ ಮುಕೇಶ್ ಅಂಬಾನಿ, ಗೌತಮ್ ಅದಾನಿ, ಶಿವ ನಾಡರ್, ಅಜೀಮ್ ಪ್ರೇಮ್‌ಜಿ, ಶಾಪೂರ್ ಮಿಸ್ತ್ರಿ ಸೇರಿದಂತೆ ಭಾರತದ ಕೋಟ್ಯಾಧಿಪತಿಗಳ ಭಾರಿ ನಷ್ಟ ಅನುಭವಿಸಿದ್ದರು. ಬರೋಬ್ಬರಿ 34 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ನಷ್ಟ ಸಂಭವಿಸಿತ್ತು. ಗೌತಮ್ ಅದಾನಿ 10.1 ಬಿಲಿಯನ್ ಅಮೆರಿಕನ್ ಡಾಲರ್, ಮುಕೇಶ್ ಅಂಬಾನಿ 3.13 ಬಿಲಿಯನ್ ಅಮೆರಿಕನ್ ಡಾಲರ್, ಹೆಚ್‌ಸಿಎಲ್ ಶಿವ ನಾಡರ್ 7.13 ಬಿಲಿಯನ್ ಅಮೆರಿಕನ್ ಡಾಲರ್, ವಿಪ್ರೋ ಅಜೀಮ್ ಪ್ರೇಮ್‌ಜಿ 2.70 ಬಿಲಿಯನ್ ಅಮೆರಿಕನ್ ಡಾಲರ್, ಶೂಪೂರ್ಜಿ ಪಲೋಂಜಿ ಗ್ರೂಪ್ ಶಾಪೂರ್ ಮಿಸ್ತ್ರಿ 4.52 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ಸಂಪತ್ತು ಕಳೆದುಕೊಂಡಿದ್ದರು.