ಇ-ಶಾಪಿಂಗ್‌ಗೆ ‘ವ್ಯಸನ’ ಹಣೆಪಟ್ಟಿ?

Published : Nov 06, 2019, 07:38 AM IST
ಇ-ಶಾಪಿಂಗ್‌ಗೆ ‘ವ್ಯಸನ’ ಹಣೆಪಟ್ಟಿ?

ಸಾರಾಂಶ

ಆದರೆ ಇ ಕಾಮರ್ಸ್‌ ಕಂಪನಿಗಳು ತಮ್ಮ ಗ್ರಾಹಕರನ್ನು ಹೀಗೆ ಖರೀದಿಗೆ ಉತ್ತೇಜಿಸಲು ವಿವಿಧ ತಂತ್ರ ಮಾಡುತ್ತವೆ.  ಇನ್ನು 4-5 ವರ್ಷಗಳಲ್ಲಿ ಆನ್‌ಲೈನ್‌ ಖರೀದಿ ಎಂಬುದು ಗ್ರಾಹಕರಿಗೆ ವ್ಯಸನ ರೋಗವಾಗುವ ಎಲ್ಲಾ ಲಕ್ಷಣಗಳೂ ಇವೆ ಎಂದು ಸಂಶೋಧನಾ ಸಂಸ್ಥೆಯೊಂದು ಅಂದಾಜಿಸಿದೆ. 

ಬೆಂಗಳೂರು [ನ.06]:  ಮನೆಯಲ್ಲೇ ಕುಳಿತು ಬೇಕಾದ ವಸ್ತುಗಳನ್ನು ಖರೀದಿಸಬಹುದು, ಜೊತೆಗೆ ಭಾರೀ ರಿಯಾಯಿತಿಯೂ ಸಿಗುತ್ತದೆ ಎಂಬ ವಿಷಯಗಳು ಇತ್ತೀಚಿನ ವರ್ಷಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಅನ್ನು ಯುವಸಮುದಾಯ ಅವಿಭಾಜ್ಯ ಅಂಗ ಮಾಡಿವೆ. 

ಆದರೆ ಇ ಕಾಮರ್ಸ್‌ ಕಂಪನಿಗಳು ತಮ್ಮ ಗ್ರಾಹಕರನ್ನು ಹೀಗೆ ಖರೀದಿಗೆ ಉತ್ತೇಜಿಸಲು ಮಾಡುವ ತಂತ್ರಗಳು, ಖರೀದಿದಾರರನ್ನು ಅದ್ಯಾವ ಮಟ್ಟಿಗೆ ಮರುಳು ಮಾಡಿದೆ ಎಂದರೆ, ಇನ್ನು 4-5 ವರ್ಷಗಳಲ್ಲಿ ಆನ್‌ಲೈನ್‌ ಖರೀದಿ ಎಂಬುದು ಗ್ರಾಹಕರಿಗೆ ವ್ಯಸನ ರೋಗವಾಗುವ ಎಲ್ಲಾ ಲಕ್ಷಣಗಳೂ ಇವೆ ಎಂದು ಸಂಶೋಧನಾ ಸಂಸ್ಥೆಯೊಂದು ಅಂದಾಜಿಸಿದೆ. ಅಷ್ಟೇ ಏಕೆ 2024ಕ್ಕೆ ಇದನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ‘ವ್ಯಸನ ರೋಗ’ವಾಗಿ ಎಂದು ಘೋಷಿಸಲಿದೆ ಎಂದು ಅಧ್ಯಯನವೊಂದು ವಿಶ್ಲೇಷಿಸಿದೆ.

‘ಗಾಟ್ರ್ನರ್‌’ ಎಂಬ ಸಂಶೋಧನಾ ಸಂಸ್ಥೆಯ ವರದಿ ಅನ್ವಯ, ದಿನೇ ದಿನೇ ಆನ್‌ಲೈನ್‌ ಖರೀದಿ ಹೆಚ್ಚುತ್ತಿದೆ. ಮತ್ತೊಂದೆಡೆ ಆನ್‌ಲೈನ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಮಾರಾಟಗಾರರು ಕೃತಕ ಬುದ್ಧಿಮತ್ತೆ ಬಳಸಿ ಗ್ರಾಹಕರಿಗೆ ‘ಆಮಿಷ’ ಒಡ್ಡಲು ಆರಂಭಿಸುತ್ತಾರೆ. ಗ್ರಾಹಕರ ಆದ್ಯತೆಯ ವಸ್ತುಗಳನ್ನೇ ಪಟ್ಟಿಮಾಡಿ, ಅವರಿಗೆ ನಾನಾ ರೀತಿಯ ಆಮಿಷಗಳ ಮೂಲಕ ಖರೀದಿ ಕಡೆಗೆ ಮನಸ್ಸು ತಿರುಗುವಂತೆ ಕಂಪನಿಗಳು ಮಾಡುತ್ತವೆ.

ಪರಿಣಾಮ ಗ್ರಾಹಕರಿಗೆ ವಸ್ತುಗಳನ್ನು ಖರೀದಿಸಬೇಕು ಎಂಬ ಮನಸ್ಸಾಗುತ್ತದೆ. ಖರೀದಿಸುವಷ್ಟುಆದಾಯವಿಲ್ಲದೇ ಹೋದರೂ ಸಾಲ ಮಾಡಿ ಖರೀದಿ ಮಾಡುತ್ತಾರೆ. ಇದರಿಂದ ಸಾಲದ ಪ್ರಮಾಣ ಹೆಚ್ಚುತ್ತದೆ ಹಾಗೂ ಖರೀದಿದಾರರು ದಿವಾಳಿ ಆಗುತ್ತಾರೆ. ಆಗ ಒತ್ತಡದಿಂದ ಖಿನ್ನತೆ ಹಾಗೂ ಇತರ ಆರೋಗ್ಯ ಸಮಸ್ಯೆಗಳು ಗ್ರಾಹಕರಿಗೆ ಉಂಟಾಗುತ್ತವೆ ಎಂದು ‘ಗಾಟ್ರ್ನರ್‌’ ಎಂಬ ಸಂಶೋಧನಾ ಸಂಸ್ಥೆ ಎಚ್ಚರಿಕೆ ನೀಡಿದೆ.

ಏನಿದೆ ವರದಿಯಲ್ಲಿ?

1. ರಿಯಾಯ್ತಿ ಮತ್ತಿತರ ತಂತ್ರ ಬಳಸಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಇ-ಕಾಮರ್ಸ್‌ ಕಂಪನಿಗಳು

2. ಆಮಿಷಗಳಿಗೆ ಆಕರ್ಷಿತರಾಗಿ ಸಾಲ ಮಾಡಿಯಾದರೂ ವಸ್ತುಗಳನ್ನು ಖರೀದಿಸುತ್ತಿರುವ ಜನರು

3. ಇನ್ನು 4ರಿಂದ 5 ವರ್ಷಗಳಲ್ಲಿ ಇದೊಂದು ವ್ಯಸನ ರೋಗವಾಗುವ ಎಲ್ಲಾ ಸಾಧ್ಯತೆಗಳೂ ಉಂಟು

4. ಸಾಲ ತೀರಿಸಲು ಆಗದೆ ಗ್ರಾಹಕರು ಖಿನ್ನತೆ ಮತ್ತಿತರ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ

5. ಕೊಳ್ಳುಬಾಕತನ ಹೆಚ್ಚಳ ಬಗ್ಗೆ ‘ಗಾಟ್ರ್ನರ್‌’ ಎಂಬ ಸಂಶೋಧನಾ ಸಂಸ್ಥೆಯಿಂದ ಅಧ್ಯಯನ ವರದಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!