
ಹೊಸದಿಲ್ಲಿ (ಮೇ 4, 2023): ಗೋ ಫಸ್ಟ್ ಏರ್‌ಲೈನ್‌ನ ರದ್ದಾದ ವಿಮಾನಗಳಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಿದ ಪ್ರಯಾಣಿಕರಿಗೆ ನಿಯಮಗಳ ಪ್ರಕಾರ ಅನುಮತಿಸಲಾದ ಅವಧಿಯೊಳಗೆ ಮರುಪಾವತಿಯನ್ನು ನೀಡುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಮುಖ್ಯಸ್ಥ ವಿಕ್ರಮ್ ದೇವ್ ದತ್ ಗುರುವಾರ ಆದೇಶಿಸಿದ್ದಾರೆ. ಈ ಮಂಗಳವಾರ ಸ್ವಯಂಪ್ರೇರಿತ ದಿವಾಳಿತನಕ್ಕಾಗಿ ಅರ್ಜಿ ಸಲ್ಲಿಸುವಾಗ, ಏರ್‌ಲೈನ್ ಮೇ 3 ಮತ್ತು 4 ಕ್ಕೆ ರದ್ದುಗೊಳಿಸುವುದಾಗಿ ಘೋಷಿಸಿತ್ತು. ಈ ಹಿನ್ನೆಲೆ ಈ ಸೂಚನೆ ನೀಡಿದೆ.
ಆದರೆ, Go First ಇದೀಗ ತನ್ನ ವಿಮಾನ ಸೇವೆ ರದ್ದತಿಯನ್ನು ಮೇ 9, 2023 ರವರೆಗೆ ವಿಸ್ತರಿಸಿದೆ. ಮೊದಲು ಮೇ 5 ರವರೆಗೆ ವಿಮಾನ ಕ್ಯಾನ್ಸಲ್ ಮಾಡಿತ್ತು ಮತ್ತು ಈಗ ಮುಂದಿನ ಮಂಗಳವಾರದವರೆಗೆ ವಿಸ್ತರಣೆ ಮಾಡಲಾಗಿದೆ. ಇನ್ನು, ಈ ವಿಮಾನಯಾನ ಸಂಸ್ಥೆಯು ಮೇ 15 ರವರೆಗೆ ವಿಮಾನಗಳಿಗಾಗಿ ತಾಜಾ ಟಿಕೆಟ್ ಮಾರಾಟವನ್ನು ಸಹ ನಿಲ್ಲಿಸಿದೆ.
ಇದನ್ನು ಓದಿ: ಸೂಡಾನ್‌ನಲ್ಲಿ ವಾಯುಪಡೆ ರಾತ್ರಿ ಸಾಹಸ: ವಿಮಾನ ಇಳಿಯಲೂ ಕಷ್ಟವಾದ ಸ್ಥಳದಲ್ಲಿ ಲ್ಯಾಂಡಿಂಗ್ ಮಾಡಿ 121 ಜನರ ರಕ್ಷಣೆ
ಈ ಆಳವಾದ ಬಿಕ್ಕಟ್ಟಿನ ಮಧ್ಯೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಮುಖ್ಯಸ್ಥ ವಿಕ್ರಮ್ ದೇವ್ ದತ್ ಅವರು ನಿಯಮಗಳ ಮೂಲಕ ಅನುಮತಿಸಲಾದ ಕಾಲಮಿತಿಯೊಳಗೆ ಏರ್‌ಲೈನ್‌ನ ರದ್ದಾದ ವಿಮಾನಗಳಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಿದ ಪ್ರಯಾಣಿಕರಿಗೆ ಮರುಪಾವತಿಯನ್ನು ನೀಡಲು ಗೋ ಫಸ್ಟ್‌ಗೆ ಗುರುವಾರ ಆದೇಶಿಸಿದ್ದಾರೆ. ಇನ್ನು, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಗೋ ಫಸ್ಟ್ "(ಏರ್‌ಲೈನ್) ತಮ್ಮೊಂದಿಗೆ ಪ್ರಯಾಣಿಸಲು ಈಗಾಗಲೇ ಕಾಯ್ದಿರಿಸಿದ ಪ್ರಯಾಣಿಕರಿಗೆ ಭವಿಷ್ಯದ ದಿನಾಂಕಗಳನ್ನು ಮರುಪಾವತಿಸಲು ಅಥವಾ ಮರುಹೊಂದಿಸಲು ಕೆಲಸ ಮಾಡುತ್ತಿದೆ" ಎಂದು ಹೇಳಿದೆ. ಹಣದ ಕೊರತೆಯ ನಂತರ ಮತ್ತು ಸ್ವಯಂಪ್ರೇರಿತ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದ ನಂತರ ಯಾವುದೇ ಪೂರ್ವ ಸೂಚನೆಯಿಲ್ಲದೆ ವಿಮಾನಗಳನ್ನು ರದ್ದುಗೊಳಿಸಿದ್ದಕ್ಕಾಗಿ ಮೇ 2 ರಂದು ನೀಡಲಾದ ಡಿಜಿಸಿಎ ಶೋಕಾಸ್ ನೋಟಿಸ್‌ಗೆ ಪ್ರತಿಕ್ರಿಯೆಯಾಗಿ ಗೋ ಫಸ್ಟ್ ಈ ಉತ್ತರ ನೀಡಿದೆ.
ಈ ಹಿನ್ನೆಲೆ ಡಿಜಿಸಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, “ಶೋಕಾಸ್ ನೋಟಿಸ್‌ಗೆ ಅನುಸಾರವಾಗಿ, ಗೋ ಫಸ್ಟ್ ಅವರು ತಮ್ಮ ಪ್ರತಿಕ್ರಿಯೆಯನ್ನು ಕಳುಹಿಸಿದ್ದಾರೆ. ಅದರಲ್ಲಿ ಅವರು ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆಯ (ಐಬಿಸಿ) ಸೆಕ್ಷನ್ 10 ರ ಅಡಿಯಲ್ಲಿ ಅರ್ಜಿಯನ್ನು ಅವರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಮೇ 3 ರಿಂದ ಅನ್ವಯವಾಗುವಂತೆ 3 ದಿನಗಳ ಅವಧಿಗೆ ನಿಗದಿತ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಮತ್ತು ಅವರು ಮೊದಲು (ಎನ್‌ಸಿಎಲ್‌ಟಿ) ಸಲ್ಲಿಸಿದ ಅರ್ಜಿಯ ಫಲಿತಾಂಶದ ಪ್ರಕಾರ ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ಅವರು ತಿಳಿಸಿದ್ದಾರೆ’’ ಎಂದೂ ಹೇಳಿದ್ದಾರೆ.
ಇದನ್ನೂ ಓದಿ: ಗಗನಸಖಿಯರ ಜತೆ ಪೋರ್ಚುಗಲ್‌ನಿಂದ ಐರ್ಲೆಂಡ್‌ಗೆ ವಿಮಾನದಲ್ಲಿ ಏಕಾಂಗಿಯಾಗಿ ಪಯಣಿಸಿದ ವಿಐಪಿ ಗೆಸ್ಟ್..!
ಇನ್ನು, ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಹ ಮಾಹಿತಿ ನೀಡಿದ್ದು, "ಪ್ರಯಾಣಿಕರಿಗೆ ಪರ್ಯಾಯ ಪ್ರಯಾಣದ ವ್ಯವಸ್ಥೆಗಳನ್ನು ಮಾಡುವುದು ಹಾಗೂ ಈ ಮೂಲಕ ಅನಾನುಕೂಲತೆ ಕಡಿಮೆ ಮಾಡುವುದು ವಿಮಾನಯಾನ ಸಂಸ್ಥೆಯ ಕರ್ತವ್ಯವಾಗಿದೆ’’ ಎಂದಿದ್ದಾರೆ. ಈ ಮಧ್ಯೆ, ಎನ್‌ಸಿಎಲ್‌ಟಿ ಮೇ 4 ರಂದು ಗೋ ಫಸ್ಟ್‌ನ ಮನವಿಯನ್ನು ಆಲಿಸುತ್ತಿದೆ.
ಇದನ್ನೂ ಓದಿ: Air India ವಿಮಾನದಲ್ಲಿ ಮುರಿದ ಸೀಟು, ಜಿರಳೆಗಳ ಹಾವಳಿ..! ಟ್ವಿಟ್ಟರ್‌ನಲ್ಲಿ ವಿಶ್ವಸಂಸ್ಥೆ ಅಧಿಕಾರಿ ಕಿಡಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.