
ದುಡ್ಡು ಟ್ರಾನ್ಸ್‌ಫರ್ ಮಾಡೋದಕ್ಕೆ ಹೆಚ್ಚಿನವರು ಬಳಸೋದು ಸ್ಮಾರ್ಟ್ ಫೋನ್. ಕೆಲವರು ಲ್ಯಾಪ್‌ಟಾಪ್‌ನಿಂದಲೂ ಹಣ ವರ್ಗಾಯಿಸುತ್ತಾರೆ. ನಮ್ಮ ಮುಂದಿರುವ ಪ್ರಶ್ನೆ ಈ ಎರಡು ಡಿವೈಸ್‌ಗಳಲ್ಲಿ ಸುರಕ್ಷಿತ ಹಣದ ವರ್ಗಾವಣೆಗೆ ಯಾವುದು ಸೂಕ್ತ ಅನ್ನೋದು. ಅದರಲ್ಲೇನಿದೆ, ಡಿವೈಸ್ ಯಾವುದಿದ್ದರೆ ಏನು ವ್ಯತ್ಯಾಸ ಆಗುತ್ತೆ ಎಂಬ ಪ್ರಶ್ನೆ ಬರಬಹುದು. ವ್ಯತ್ಯಾಸ ಖಂಡಿತಾ ಇದೆ. ಇತ್ತೀಚಿನ ಸೈಬರ್ ಸೆಕ್ಯೂರಿಟಿ ಟ್ರೆಂಡ್ ಮತ್ತು ಅಧ್ಯಯನಗಳು ಈ ಸಂಗತಿ ಮೇಲೆ ಬೆಳಕು ಚೆಲ್ಲಿವೆ.
ಸ್ಮಾರ್ಟ್ ಫೋನ್‌ಗಳ ಹೈಎಂಡ್ ಮಾಡೆಲ್ ಗಳಲ್ಲಿ ಅಂದರೆ ಗ್ರ್ಯಾಫೀನ್ ಓಎಸ್ ಇರುವ ಐಫೋನ್ 16 ಪ್ರೊ ಮ್ಯಾಕ್ಸ್ ಮತ್ತು ಗೂಗಲ್ ಪಿಕ್ಸೆಲ್ 9 ಫೋನ್ ಗಳು ಹಣದ ವರ್ಗಾವಣೆಗೆ ಸುರಕ್ಷಿತ, ಆ್ಯಪಲ್ ಸ್ಟಾರ್ಟ್ ಫೋನ್‌ನ ಐಓಎಸ್ ಇಕೋ ಸಿಸ್ಟಮ್ ಡಿಜಿಟಲ್ ಹಣಕಾಸಿನ ವಹಿವಾಟಿಗೆ ಉತ್ತಮ ಭದ್ರತೆ ಒದಗಿಸುತ್ತದೆ. ಆ್ಯಪಲ್ ವಿ18 ಬಯೋನಿಕ್ ಚಿಪ್ ಡೇಟಾಗೆ ಅಧಿಕ ಸೆಕ್ಯೂರಿಟಿ ನೀಡುತ್ತದೆ. ಜೊತೆಗೆ ಫೇಸ್ ಐಡಿ, ಎಂಡ್ ಟು ಎಂಡ್ ಎನ್ ಕ್ರಿಪ್ಪನ್ ಬಳಕೆ ಹಾಗೂ ಆಗಾಗ ಐಓಎಸ್ ಅನ್ನು ಅಪ್‌ಡೇಟ್ ಮಾಡುವುದರಿಂದ ಹಣ ವರ್ಗಾವಣೆ ಸಮಯದಲ್ಲಿ ವಂಚನೆಗೊಳಗಾಗುವುದನ್ನು ತಪ್ಪಿಸಬಹುದು. ಗ್ರ್ಯಾಫೀನ್ ಓಎಸ್ ಇರುವ ಗೂಗಲ್ ಪಿಕ್ಸೆಲ್ 9 ಸ್ಮಾರ್ಟ್ ಫೋನ್‌ಗಳಲ್ಲೂ ದುಡ್ಡಿನ ವರ್ಗಾವಣೆ ಸೇಫು, ರಿಸ್ಕ್ ಕಮ್ಮಿ.
ಲ್ಯಾಪ್‌ಟಾಪ್‌ಗಳಿಗೆ ಹೋಲಿಸಿದರೆ ಸ್ಟಾರ್ಟ್ ಫೋನ್‌ಗಳ ಬಳಕೆಯಲ್ಲಿ ಮಾಲ್‌ವೇರ್ ಅಟ್ಯಾಕ್ ಸಾಧ್ಯತೆ ಕಡಿಮೆ. ಕಳೆದ ವರ್ಷದ ಸೈಬರ್ ಸೆಕ್ಯೂರಿಟಿ ವರದಿಗಳ ಪ್ರಕಾರ ಡಿಜಿಟಲ್ ಹಣಕಾಸಿನ ವರ್ಗಾವಣೆ ವಿಚಾರದಲ್ಲಿ ಲ್ಯಾಪ್‌ಟಾಪ್‌ಗಳಿಗಿಂತ ಐಓಎಸ್ ಡಿವೈಸ್ ಗಳು ಹೆಚ್ಚು ಸುರಕ್ಷಿತ.
ಡಿಜಿಟಲ್ ಮನಿ ಸೆಕ್ಯುರಿಟಿ ವಿಚಾರದಲ್ಲಿ ಲ್ಯಾಪ್‌ಟಾಪ್‌ಗಳಿಗೆ ಅವುಗಳ ಓಪನ್ ಇಕೋ ಸಿಸ್ಟಮ್‌ಗಳಿಂದಲೇ ಸಮಸ್ಯೆ. ವಿಂಡೋಸ್ ಮತ್ತು ಮ್ಯಾಕ್ ಓಎಸ್ ಸಿಸ್ಟಮ್‌ಗಳು ಹ್ಯಾಕರ್‌ಗಳಿಗೆ ಅಂಗೈ ಮೇಲಿನ ನೆಲ್ಲಿಕಾಯಿಯಂತೆ. 2021ರ ಸರ್ವೆ ಪ್ರಕಾರ ಲ್ಯಾಪ್ಟಾಪ್‌ಗಳಲ್ಲಿನ ಶೇ.77 ರಷ್ಟು ಹಣಕಾಸಿಗೆ ಸಂಬಂಧಿಸಿದ ಆ್ಯಪ್‌ಗಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು. ಎನ್‌ಐಎಸ್‌ಟಿ (ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟಾಂಡರ್ಡ್ಸ್ ಆಂಡ್ ಟೆಕ್ನಾಲಜಿ) 2024ರಲ್ಲಿ ಹೊರತಂದ ರಿಪೋರ್ಟ್, ಅನೇಕ ಲ್ಯಾಪ್ಟಾಪ್ ಪ್ರೊಸೆಸರ್‌ಗಳಲ್ಲಿನ ಸರಿಪಡಿಸಲಾಗದ ದೋಷಗಳನ್ನು ಎತ್ತಿ ತೋರಿಸಿದೆ. ಇದರಿಂದ ಹೆಚ್ಚಿನ ಅಪಾಯ ಸಂಭವಿಸುವ ಎಚ್ಚರಿಕೆ ನೀಡಿದೆ.
ಲ್ಯಾಪ್‌ಟಾಪ್‌ಗಳಲ್ಲಿ ಅಯಾಚಿತವಾಗಿ ಆಗುವ ಡೌನ್ ಲೋಡ್ ಗಳು. ಕೆಲವೊಂದು ಇಮೇಲ್ ಅಟ್ಯಾಚ್ ಮೆಂಟ್ ಗಳಿಂದ ಅಪಾಯ ಹೆಚ್ಚು, ಆಗಾಗ ಲ್ಯಾಪ್‌ಟಾಪ್ ಅನ್ನು ಅಪ್ ಡೇಟ್ ಮಾಡದಿದ್ದರೆ, ಆ್ಯಂಟಿ ವೈರಸ್ ಸಾಫ್ಟ್‌ವೇರ್‌ಗಳನ್ನು ಕ್ರಾಸ್ ಮಾಡಿಕೊಂಡು ಇವು ಅಪಾಯ ತಂದೊಡ್ಡಬಹುದು. ಇದೆಲ್ಲದರ ನಡುವೆಯೂ ವ್ಯಕ್ತಿ ತನ್ನ ಡಿವೈಸ್‌ಗಳನ್ನು ಹೇಗೆ ಬಳಸುತ್ತಾನೆ ಅನ್ನೋದು ಬಹಳ ಮುಖ್ಯವಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.