ಸಮಯಕ್ಕೆ ಸರಿಯಾಗಿ ಬಾರದ ಮಳೆ‌, ಈರುಳ್ಳಿ ಬಿತ್ತನೆ ಮಾಡದ ರೈತ, ಬೆಲೆ ಗಗನಕ್ಕೇರುವ ಸಾಧ್ಯತೆ!

By Gowthami K  |  First Published Jul 8, 2023, 8:27 PM IST

  ಈ ವರ್ಷ ಮುಂಗಾರು ವಿಳಂಬದಿಂದಾಗಿ ಈರುಳ್ಳಿ ಬಿತ್ತಲು ರೈತರು ಹಿಂದೇಟು ಹಾಕಿದ್ದಾರೆ. ಹೀಗಾಗಿ, ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಜು.8): ಅದೊಂದು ಬರ ಪೀಡಿತ ಪ್ರದೇಶ ಅಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಈರುಳ್ಳಿ. ಆದ್ರೆ ಕಳೆದ ವರ್ಷ ತೀವ್ರ ಮಳೆಯಿಂದಾಗಿ ನಷ್ಟ ಅನುಭವಿಸಿದ್ದ ರೈತರು ಈ ವರ್ಷ ಮುಂಗಾರು ವಿಳಂಬದಿಂದಾಗಿ ಈರುಳ್ಳಿ ಬಿತ್ತಲು ಹಿಂದೇಟು ಹಾಕಿದ್ದಾರೆ. ಹೀಗಾಗಿ, ಈರುಳ್ಳಿ ಬೆಲೆ ಗಗನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ. 

Tap to resize

Latest Videos

ಈರುಳ್ಳಿ ಬಿತ್ತನೆ ಮಾಡಿರುವ ರೈತ‌.‌‌ ಈರುಳ್ಳಿ ಬಿತ್ತನೆ ಪರಿಶೀಲಿಸ್ತಿರುವ ತೋಟಗಾರಿಕೆ ಅಧಿಕಾರಿಗಳು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ಜಿಲ್ಲೆ‌ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಗ್ರಾಮದಲ್ಲಿ. ಚಿತ್ರದುರ್ಗ ಜಿಲ್ಲೆಯ ರೈತರು, ಪ್ರತಿವರ್ಷ 40 ಸಾವಿರ‌ ಹೆಕ್ಟೇರ್ ಗೂ ಅಧಿಕ ಈರುಳ್ಳಿ  ಬಿತ್ತನೆ ಮಾಡ್ತಿದ್ದರು. ಆದ್ರೆ ಕಳೆದ ವರ್ಷ ಸುರಿದ ಅತಿಯಾದ ಮಳೆಯಿಂದಾಗಿ ನಯಾಪೈಸೆ‌ ಲಾಭ ಸಿಗದೇ ರೈತರು ಸಾಲದ ಸುಳಿಗೆ ಸಿಲುಕಿದ್ದರು.

ಆಕಸ್ಮಿಕವಾಗಿ ದೇಹ ಸೇರಿದ ಅಪಾಯಕಾರಿ ಕಳೆನಾಶಕ, ಅರಣ್ಯಾಧಿಕಾರಿ ಸಾವು!

ಈ ಬಾರಿ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಹಾಗು ಗೊಬ್ಬರವನ್ನು ಸಿದ್ಧಪಡಿಸಿಕೊಂಡಿದ್ದು, ಅಪಾರ ಲಾಭದ ನಿರೀಕ್ಷೆಯಲ್ಲಿದ್ರು.‌ ಆದ್ರೆ ಮುಂಗಾರು ಮಳೆ ವಿಳಂಬವಾದ ಪರಿಣಾಮ  ಕೋಟೆನಾಡಿನ ಬಹುತೇಕ ರೈತರು ಈರುಳ್ಳಿ ಬಿತ್ತನೆ ಮಾಡಿಲ್ಲ. ಹೀಗಾಗಿ ಈ ಬಾರಿ ಈರುಳ್ಳಿ ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು, ಆನಿಯನ್ ಬೆಲೆ ಗಗನಕ್ಕೇರುವ ಸಾಧ್ಯತೆ  ಹೆಚ್ಚಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಲಿದ್ದು, ಅವರ ಕಣ್ಣಲ್ಲಿ ನೀರು ತರಿಸೋದು ಗ್ಯಾರಂಟಿ ಎಂಬಂತಾಗಿದೆ. ಹಾಗೆಯೇ ಕಳೆದ ವರ್ಷ ನಷ್ಟ ಅನುಭವಿಸಿದ್ದ ರೈತ ಈ ಬಾರಿ ಬಿತ್ತನೆ ಮಾಡದೇ, ಕೈ ಸುಟ್ಕೊಂಡಂತಾಗಿದೆ.

ಇನ್ನು ಮುಂಜಾಗ್ರತಾ ಕ್ರಮವಾಗಿ ಚಿತ್ರದುರ್ಗ ಜಿಲ್ಲೆಯ ತೋಟಗಾರಿಕೆ ಅಧಿಕಾರಿಗಳು ಈರುಳ್ಳಿ ಬಿತ್ತನೆಗೆ ಉತ್ತೇಜನ ನೀಡ್ತಿದ್ದಾರೆ.‌ ಮುಂಗಾರು ವಿಳಂಬವಾದರು ಈರುಳ್ಳಿ ಗೆ ಬಹು ಬೇಡಿಕೆ ಬರುವ ಪರಿಣಾಮ ತಡವಾದರು ಸಹ‌ ಈರುಳ್ಳಿ ಬಿತ್ತನೆ ಮಾಡುವಂತೆ ಪ್ರೇರೇಪಿಸ್ತಿದ್ದಾರೆ. ಆದ್ರೆ ಅನ್ನದಾತರು ಮಾತ್ರ ಸಕಾಲಕ್ಕೆ ಕೈಹಿಡಿಯದ ಪ್ರಕೃತಿ ಗೆ ಶಾಪ ಹಾಕುತ್ತಾ ಬದುಕಿನ ಬಂಡಿ ಸಾಗಿಸೋದು ಹೇಗೆಂಬ ಆತಂಕದಲ್ಲಿದ್ದಾರೆ.

ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಶೀಘ್ರವೇ ಮುಟ್ಟಿನ ರಜೆ, ಸಿಎಂ ಪ್ರತಿಕ್ರಿಯೆ

ಒಟ್ಟಾರೆ ಈ ಬಾರಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಈರುಳ್ಳಿ ಬಿತ್ತನೆ ಕುಂಠಿತವಾಗಿದೆ. ಹೀಗಾಗಿ ಆನಿಯನ್ ಬೆಲೆ‌ಗಗನಕ್ಕೇರುವ ಸಾದ್ಯತೆ ಹೆಚ್ಚಾಗಿದ್ದು, ಗ್ರಾಹಕರ ಕಣ್ಣಲ್ಲಿ‌ ನೀರು ತರಿಸೋದು ಗ್ಯಾರಂಟಿ. ಆದ್ರೆ ಈರುಳ್ಳಿ ಬಿತ್ತನೆ ಮಾಡದ ರೈತರು ಸತತ ಎರಡು ವರ್ಷಗಳಿಂದ ಅನುಭವಿಸಿರುವ ನಷ್ಟದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

click me!