NSE ಎಮರ್ಜ್ ಪ್ರವೇಶಿಸಿದ ಗ್ರೀನ್‌ಚೆಫ್ SME , 53.62 ಕೋಟಿ ಮೌಲ್ಯದ IPO ಷೇರುಗಳ ಪಟ್ಟಿ!

Published : Jul 08, 2023, 05:46 PM IST
NSE ಎಮರ್ಜ್ ಪ್ರವೇಶಿಸಿದ ಗ್ರೀನ್‌ಚೆಫ್ SME , 53.62 ಕೋಟಿ ಮೌಲ್ಯದ IPO ಷೇರುಗಳ ಪಟ್ಟಿ!

ಸಾರಾಂಶ

ಗ್ರೀನ್‌ಚೆಫ್ ಅಪ್ಲೈಯನ್ಸ್ ಲಿಮಿಟೆಡ್ ಕಂಪನಿ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಎಮರ್ಜ್ ಪಟ್ಟಿಯಲ್ಲಿ ಗ್ರೀನ್‌ಚೆಫ್ SME ಪ್ರಿಮಿಂಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಪ್ರತಿ ಷೇರಿಗೆ 104 ರೂಪಾಯಿಯಂತೆ ಪಟ್ಟಿ ಮಾಡಲಾಗಿದೆ.

ಬೆಂಗಳೂರು(ಜು.08) ಗ್ರೀನ್‌ಚೆಫ್ ಅಪ್ಲೈಯನ್ಸ್ ಲಿಮಿಟೆಡ್  ಸರ್ಕಾರೇತರ ಕಂಪನಿ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಗೃಹಪಯೋಗಿ ಉಪಕರಣ ತಯಾರಕ ಕಂಪನಿಯಾಗಿರುವ ಗ್ರೀನ್‌ಚೆಫ್ ಅಪ್ಲೈಯನ್ಸ್ ಇದೀಗ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(NSE) ಎಮರ್ಜಿ ಪಟ್ಟಿಯಲ್ಲಿ ಸೇರಿಕೊಂಡಿದೆ. ಗ್ರೀನ್‌ಚೆಫ್ ಅಪ್ಲೈಯೆನ್ಸ್ ಷೇರುಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬೆಲೆಗಿಂತ 17 ರೂಪಾಯಿ ಹೆಚ್ಚಿಗೆ ಮೌಲ್ಯದಲ್ಲಿ ಪಟ್ಟಿ ಮಾಡಲಾಗಿದೆ. ಪ್ರತಿ ಷೇರಿಗೆ 87 ರೂಪಾಯಿಯಂತೆ ಷೇರಗಳನ್ನು ಇಶ್ಯು ಮಾಡಲಾಗಿತ್ತು. ಇದೀಗ 17 ರೂಪಾಯಿ ಹೆಚ್ಚಿಗೆ ಅಂದರೆ 104 ರೂಪಾಯಿ ಪ್ರಿಮಿಂಯ ಬೆಲೆಯಂತೆ ಪಟ್ಟಿ ಮಾಡಲಾಗಿದೆ. ಷೇರುಗಳು ಮುದ್ರಣಕ್ಕೂ ಮುನ್ 109.20 ರೂಪಾಯಿ ಬೆಲೆಯಲ್ಲಿ ಅಪ್ಪರ್ ಸರ್ಕ್ಯೂಟ್ ಹಿಟ್ ಮಾಡಿದೆ. 

ಬೆಂಗಳೂರು ಮೂಲದ  ಗ್ರೀನ್‌ಚೆಫ್ ಅಪ್ಲೆಯೈನ್ಸ್ ಕಂಪನಿ ಅತೀ ದೊಡ್ಡ ಗೃಹಪಯೋಗಿ ಉಪಕರಣ ತಯಾರಕ ಕಂಪನಿಯಾಗಿ ಬೆಳೆದಿದೆ. ಅತೀ ಕಡಿಮೆ ಅವಧಿಯಲ್ಲಿ ಅತ್ಯಂತ ಯಶಸ್ವಿ ಕಂಪನಿಯಾಗಿ ಬೆಳೆದಿರುವ ಗ್ರೀನ್‌ಚೆಫ್ ಅಪ್ಲೆಯೈನ್ಸ್ ಕಂಪನಿ ಇನಿಶಿಯಲ್ ಪಬ್ಲಿಕ್ ಆಫರಿಂಗ್ (IPO) 53.62 ಕೋಟಿ ರೂಪಾಯಿ. ಜೂನ್ ಅಂತ್ಯದಲ್ಲಿ ಅಂದರೆ ಜೂನ್ 23 ರಿಂದ ಚಂದಾದಾರಿಕೆ ಆರಂಭಿಸಿದ ಗ್ರೀನ್‌ಚೆಫ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಜೂನ್ 23 ರಿಂದ 27ರ ವರೆಗೆ ಸುಮಾರು 60 ಪಟ್ಟು ಹೆಚ್ಚು ಚಂದಾದಾರಿಕೆಯಾಗಿದೆ. 

ಗ್ರೀನ್‌ಚೆಫ್ ಅಪ್ಲೈಯನ್ಸ್ ಲಿಮಿಟೆಡ್ ಕಂಪನಿಯ ಕೇಂದ್ರ ಕಚೇರಿ ಹೊಂದಿರುವ ಬೆಂಗಳೂರಿನಲ್ಲಿ 3 ಘಟಕ ಕಾರ್ಯನಿರ್ವಹಿಸುತ್ತಿದ್ದರೆ,ಹಿಮಾಚಲ ಪ್ರದೇಶದಲ್ಲಿ ಒಂದು ಘಟಕ ಕಾರ್ಯನಿರ್ವಹಿಸುತ್ತಿದೆ. ಇದೀಗ ಉತ್ತರ ಪ್ರದೇಶದಲ್ಲಿ ಹೊಸ ಘಟಕ ಆರಂಭಿಸಲು ತಯಾರಿ ನಡೆಸಿದೆ. ಈ ಮೂಲಕ ಉತ್ತರ ಭಾರತದಲ್ಲಿ ಗ್ರೀನ್‌ಚೆಫ್  ಕಂಪನಿ ವಿಸ್ತರಿಸುವ ಗುರಿ ಹೊಂದಿದೆ. ಮಧ್ಯಪ್ರದೇಶ, ಛತ್ತೀಸಘಡ ಹಾಗೂ ಬಿಹಾರದಲ್ಲೂ ಕಂಪನಿ ಹೊಸ ಘಟಕ ಆರಂಭಿಸಲು ತಯಾರಿ ನಡೆಸಿದೆ. ಸದ್ಯ ಗ್ರೀನ್‌ಚೆಫ್ ಅಪ್ಲೈಯನ್ಸ್ ಗೃಹಪಯೋಗಿ ಉಪಕರಣದಲ್ಲಿ ಮಾರುಕಟ್ಟೆಯ ಶೇಕಡಾ 60 ರಷ್ಟು ಪಾಲು ಹೊಂದಿದೆ. 

IPOದಿಂದ ಬಂದ ಆದಾಯದಿಂದ ತುಮಕೂರಿನಲ್ಲಿ ಹೊಸ ಕಾರ್ಖಾನೆ ನಿರ್ಮಾಣ ಮಾಡಲಾಗುತ್ತದೆ. ನೂತನ ಕಾರ್ಖಾನೆ 2 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದೆ. ಬರೋಬ್ಬರಿ 15 ಏಕರೆ ಪ್ರದೇಶದಲ್ಲಿ ನೂತನ ಕಾರ್ಖಾನೆ ತಲೆ ಎತ್ತಲಿದೆ ಎಂದು ಗ್ರೀನ್‌ಚೆಫ್ ಅಪ್ಲೈಯನ್ಸ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಜೈನ್ ಹೇಳಿದ್ದಾರೆ. ಹೊಸ ಉತ್ಪನ್ನ ಅಭಿವೃದ್ಧಿ, ಪ್ರಚಾರ, ಅತ್ಯಾಧುನಿಕ ಯಂತ್ರೋಪಕರಣ ಸೇರಿದಂತೆ ಕಂಪನಿಯ ಬೆಳವಣಿಗೆಗೆ ಹೆಚ್ಚುವರಿ ಹಣವನ್ನು ಕಾರ್ಯನಿರತ ಬಂಡವಾಳವಾಗಿ ಹಂಚಲಾಗುತ್ತದೆ. 

ಗ್ರೀನ್‌ಚೆಫ್ ಅಪ್ಲೈಯನ್ಸ್ ಲಿಮಿಟೆಡ್
ಗ್ರೀನ್‌ಚೆಫ್ ಅಪ್ಲೈಯನ್ಸ್ ಲಿಮಿಟೆಡ್ ಅತೀ ದೊಡ್ಡ ಗೃಹಪಯೋಗಿ ವಸ್ತುಗಳ ತಯಾರಿಕ ಕಂಪನಿಯಾಗಿದೆ. ಗ್ಯಾಸ್ ಸ್ಟೌ, ಮಿಕ್ಸರ್, ಗ್ರೈಂಡರ್, ಪ್ರೆಶರ್ ಕುಕ್ಕರ್, ಇಂಡಕ್ಷನ್ ಕುಕ್‌ಟಾಪ್, ರೈಸ್ ಕುಕ್ಕರ್, ಕೆಟಲ್, ವೈಟ್ ಗ್ರೈಂಡರ್, ಸ್ಟೈನ್‌ಲೆಸ್ ಸ್ಟೀಲ್ ಪಾತ್ರೆಗಳು ಸೇರಿದಂತೆ ಎಲ್ಲಾ ಮಾದರಿಯ ಗೃಹಪಯೋಗಿ ಉತ್ಪನ್ನಗಳಲ್ಲಿ ಗ್ರೀನ್‌ಚೆಫ್ ಅಪ್ಲೈಯನ್ಸ್ ಮುಂಚೂಣಿಯಲ್ಲಿದೆ. ಗ್ರೀನ್‌ಚೆಫ್ ಅಪ್ಲೈಯನ್ಸ್ ಲಿಮಿಟೆಡ್ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಉಪಕರಣಗಳನ್ನು ನೀಡುವ ಗುರಿ ಹೊಂದಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ