ಒಂದು ಸಣ್ಣ ಬದಲಾವಣೆ, ಮುಳುಗುತ್ತಿದ್ದ ಈ ಡಿಟರ್ಜೆಂಟ್ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿದ್ದು ಹೇಗೆ?

Published : Sep 08, 2026, 07:32 PM IST
Dying Detergent Brand Into a Billion Dollar Success

ಸಾರಾಂಶ

ಸರ್ಫ್ ಡಿಟರ್ಜೆಂಟ್ ಮಕಾಡೆ ಮಲಗಿತ್ತು. ಕಂಪನಿ ಮುಳುಗುವ ಹಂತಕ್ಕೆ ತಲುಪಿತ್ತು. ಈ ವೇಳೆ ಮಾಡಿದ ಒಂದು ಬದಲಾವಣೆ ಕಂಪನಿ ಹಣೆಬರಹ ಬದಲಾಯಿಸಿತು. ಪರಿಣಾಮ ಸರ್ಫ್ ಇದೀಗ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

ಮುಂಬೈ (ಸೆ.08) ಭಾರತದ ಮನೆ ಮನೆಗಳಲ್ಲಿ ಡಿಟರ್ಜೆಂಟ್ ಪೌಡರ್ ಎಂದರೆ ಹಲವರು ಸರ್ಫ್ ಎಂದು ಹೇಳುತ್ತಾರೆ. ಅವರು ಬಳಸುತ್ತಿರುವ ಬ್ರ್ಯಾಂಡ್ ಯಾವುದೇ ಆದರೂ ಹೇಳುವಾಗ ಸರ್ಫ್ ಎಂದೇ ಹೇಳುತ್ತಾರೆ. ಅಷ್ಟರ ಮಟ್ಟಿಗೆ ಸರ್ಫ್ ಮನೆಮಾತಾಗಿದೆ. ಆದರೆ ನಿರ್ಮಾ, ಏರಿಯಲ್ ಸೇರಿದಂತೆ ಹಲವು ಡಿಟರ್ಜೆಂಟ್ ಪೌಡರ್‌ಗಳ ತೀವ್ರ ಪೈಪೋಟಿಯಿಂದ ಸರ್ಫ್ ಮುಳುಗುವ ಹಂತಕ್ಕೆ ತಲುಪಿತ್ತು. ಕಂಪನಿ ಮಾಡಿದ ಕೆಲ ಬದಲಾವಣೆಗಳಿಂದ ಇಂದು ಸರ್ಫ್ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

ಡಿಟರ್ಜೆಂಟ್ ಪೌಡರ್ ಕ್ರಾಂತಿ

ಭಾರತದಲ್ಲಿ ಬಟ್ಟೆ ಸೋಪ್, ಬಾರ್ ಸೋಪ್ ಸೇರಿದಂತೆ ಸೋಪ್ ಬಳಸುತ್ತಿದ್ದ ಸಮಯದಲ್ಲಿ ಹಿಂದೂಸ್ತಾನ್ ಯುನಿಲಿವರ್ ಕಂಪನಿ ಡಿಟರ್ಜೆಂಟ್ ಪೌಡರ್ ಬಿಡುಗಡೆ ಮಾಡಿತ್ತು. ಸರ್ಫ್ ಹೆಸರಿನಲ್ಲಿ ಬಂದ ಈ ಪೌಡರ್ ಮನೆ ಮನೆಯಲ್ಲಿ ಬಳಕೆ ಹೆಚ್ಚಾಯಿತು. ಎಷ್ಟರ ಮಟ್ಟಿಗೆ ಎಂದರೆ ಸರ್ಫ್ ಎಂದರೆ ಡಿಟರ್ಜೆಂಟ್ ಪೌಡರ್ ಅನ್ನೋ ಮಟ್ಟಕ್ಕೆ ಬ್ರ್ಯಾಂಡ್ ಬೆಳದು ಬಿಟ್ಟಿತು.

ನಿರ್ಮಾ ಪೈಪೋಟಿ

ಸರ್ಫ್ ತನ್ನ ಮಾರ್ಕೆಟಿಂಗ್ ತಂತ್ರವನ್ನು ಪರಿಣಾಮಕಾರಿಯಾಗಿ ಬಳಸಿತ್ತು. ಟಿವಿ ಸೇರಿದಂತೆ ಮಾಧ್ಯಮ ಜಾಹೀರಾತು ಮೂಲಕ ಸರ್ಫ್ ಜನರ ಮನಸ್ಸು ತಲುಪಿತ್ತು. ಲಲಿತಾ ಜಿ ಜಾಹೀರಾತು ಸಾಮಾನ್ಯ ವರ್ಗಕ್ಕೂ ಮುಟ್ಟಿತ್ತು. ದುಬಾರಿ ಅಲ್ಲ, ನಮ್ಮ ಬಟ್ಟೆ ಶುಭ್ರವಾಗಿ ಕಾಣಲು ಸರ್ಫ್ ಬೇಕೇ ಬೇಕು ಅನ್ನೋ ಮಟ್ಟಕ್ಕೆ ತಲುಪಿತು. ಬಳಿಕ ಸರ್ಫ್ ಜಾಹೀರಾತುಗಳು ಜನರ ಆತ್ಮವಿಶ್ವಾಸ, ಭಾವನೆ ಸೇರಿದಂತೆ ಹಲವು ರೀತಿಯಲ್ಲಿ ಬೆಸೆದುಕೊಂಡಿತು. ಆದರೆ ಡಿಟರ್ಜೆಂಟ್ ಕ್ಷೇತ್ರಕ್ಕೆ ನಿರ್ಮಾ, ಏರಿಯಲ್ ಸೇರಿದಂತೆ ಹಲವು ಬ್ರ್ಯಾಂಡ್ ಎಂಟ್ರಿಕೊಟ್ಟಿತು. ಲೋಕಲ್ ಬ್ರ್ಯಾಂಡ್‌ಗಳು ಅತೀ ಕಡಿಮೆ ಬೆಲೆಗೆ ಪೌಡರ್ ನೀಡಲು ಆರಂಭಿಸಿತು. ಸರ್ಫ್ ಪ್ರಾಮುಖ್ಯತೆ ಕಳೆದುಕೊಳ್ಳಲು ಆರಂಭಿಸಿತು.

ಸರ್ಫ್ ತನ್ನ ಬೆಲೆ ಹಾಗೂ ಗುಣಮಟ್ಟದಲ್ಲಿ ರಾಜೀಮಾಡಲಿಲ್ಲ. ಆದರೆ ಜನಸಾಮಾನ್ಯರನ್ನು ಹಿಡಿದಿಟ್ಟುಕೊಳ್ಳಲು ವೀಲ್ ಬ್ರ್ಯಾಂಡ್ ಪರಿಚಯಿಸಿತು. ಇಷ್ಟೇ ಅಲ್ಲ ತನ್ನ ಜಾಹೀರಾತಿನಲ್ಲಿ ಬದಲಾವಣೆ ಮಾಡಿತು. ಬಟ್ಟೆಯ ಯಾವುದೇ ಕಲೆಯನ್ನು ಪರಿಣಾಮಕಾರಿಯಾಗಿ ತೆಗೆಯು ಪರಿಕಲ್ಪನೆಯಲ್ಲಿ ಸರ್ಫ್ ಮತ್ತೆ ಮಾರುಕಟ್ಟೆಯಲ್ಲಿ ಬದಲಾವಣೆ ತರಲು ಮುಂದಾಯಿತು. ಮಕ್ಕಳು ಆಟವಾಡುವಾಗ ಆಗುವ ಕಲೆ, ಹೋಳಿ ಸೇರಿದಂತೆ ಹಬ್ಬದ ದಿನಗಳಲ್ಲಿ ಆಗುವ ಕಲೆಗಳಿಗೆ ಸರ್ಫ್ ಒಂದೇ ಪರಿಹಾರ ಅನ್ನೋ ರೀತಿಯಲ್ಲಿ ಜಾಹೀರಾತು ನೀಡಿತು. ಬಳಿಕ ಮಕ್ಕಳು, ಕುಟುಂಬ, ಸಂಬಂಧ, ಭಾವನೆಗಳೊಂದಿಗೂ ಸರ್ಫ್ ಬೆಸೆದುಕೊಂಡಿತು. ಮಾನವೀಯ ಮೌಲ್ಯಗಳ ಜೊತೆಗೆ ಹೊರಬಂದ ಜಾಹೀರಾತುಗಳು ಸರ್ಫ್ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಯನ್ನು ತೀವ್ರಗೊಳಿಸಿತು.

ಪ್ರೀಮಿಯಂ ಬ್ರ್ಯಾಂಡ್‌ನಲ್ಲಿ ಸರ್ಫ್ ಕಾಣಿಸಿಕೊಂಡರೆ ಮಧ್ಯ ವರ್ಗಕ್ಕೆ ರಿನ್ ಹಾಗೂ ಜನಸಾಮಾನ್ಯರು, ಕಡಿಮೆ ಬೆಲೆಗೆ ವೀಲ್ ಬ್ರ್ಯಾಂಡ್ ಹೊರತಂದು ಎಲ್ಲಾ ಗ್ರಾಹಕರನ್ನು ತನ್ನಲ್ಲೇ ಉಳಿಯುವಂತೆ ಮಾಡಿತು. ಇದೀಗ ಸರ್ಫ್ ಬಿಲಿಯನ್ ಡಾಲರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಪ್ರತಿಷ್ಠಿತ ಕಂಪನಿ ಯಜಮಾನನ ದೊಡ್ಡ ಮನಸ್ಸು; ತನ್ನ ಉದ್ಯೋಗಿಗಳಿಗೆ 20 ಕೋಟಿ ರೂ ಮೌಲ್ಯದ ಷೇರು ಗಿಫ್ಟ್
ಕೈಯಲ್ಲಿದ್ದುದ್ದು ಕೇವಲ ಅರ್ಧ ಎಕರೆ ಮಾತ್ರ! 80 ಲಕ್ಷ ಗಳಿಸುವ ಮಟ್ಟಿಗೆ ಬೆಳೆದ ಈ ರೈತ ಮಹಿಳೆಯ ರೋಚಕ ಕಥೆ!