Long Time Investment: ಈ ವರ್ಷ 1 ಲಕ್ಷ ರೂಪಾಯಿ ಚಿನ್ನ ತೆಗೆದುಕೊಂಡದರೆ 2050ರಲ್ಲಿ ಎಷ್ಟು ಹಣ ಆಗುತ್ತೆ?

Published : Sep 07, 2026, 02:18 PM IST
Gold

ಸಾರಾಂಶ

ಭಾರತದಲ್ಲಿ ಚಿನ್ನವು ದೀರ್ಘಕಾಲದ ಹೂಡಿಕೆಯಾಗಿದ್ದು, 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 14-22 ಲಕ್ಷ ರೂಪಾಯಿ ತಲುಪುವ ನಿರೀಕ್ಷೆಯಿದೆ. ಇಂದಿನ 1 ಲಕ್ಷ ರೂಪಾಯಿ ಹೂಡಿಕೆಯು 2050ರ ಹೊತ್ತಿಗೆ 9.85 ಲಕ್ಷದಿಂದ 15 ಲಕ್ಷದವರೆಗೆ ಮೌಲ್ಯವನ್ನು ಪಡೆಯಬಹುದು, ಆದರೆ ಹೂಡಿಕೆಯಲ್ಲಿ ಅಪಾಯಗಳಿರುತ್ತವೆ ಎಂಬುದನ್ನು ಈ ಲೇಖನ ವಿವರಿಸುತ್ತದೆ.

ಭಾರತದಲ್ಲಿ ಚಿನ್ನದ ಬೆಲೆ ಆರು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದರಂತೆ 2050ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 14-22 ಲಕ್ಷ ರೂಪಾಯಿ ವರೆಗೂ ತಲುಪಬಹುದಾಗಿದೆ. ಜಾತಿಗಿಕವಾಗಿ ನೋಡುವುದಾದರೆ ಒಂದು ಔನ್ಸ್ ಚಿನ್ನದ ಬೆಲೆ 10 ಸಾವಿರ ಡಾಲರ್ಗೆ ಮೀರಬಹುದು ಎಂದು ತಜ್ಞರು ಅಂದಾಜು ಮಾಡಿದ್ದಾರೆ.

ಭಾರತದಲ್ಲಿ ಚಿನ್ನ ಕೇವಲ ಒಂದು ಆಭರಣ ಮಾತ್ರ ಅಲ್ಲ. ಇದು ಒಂದು ದೀರ್ಘದ ಕಾಲದ ಹೂಡಿಕೆಯಾಗಿದೆ. ಐತಿಹಾಸಿಕವಾಗಿಯೂ ಚಿನ್ನದ ದರ ಏರಿಕೆಯಾಗುತ್ತಲೇ ಇರುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೋ ಒಂದು ಸಂದರ್ಭದಲ್ಲಿ ಅಂದರೆ ಹಣದುಬ್ಬರ, ಆರ್ಥಿಕ ಅನಿಶ್ಚತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳಂತಹ ಸಂದರ್ಭದಲ್ಲಿಯೂ ಚಿನ್ನದ ದರ ಹೆಚ್ಚಾಗುತ್ತಲೇ ಇವೆ. 2050ರ ವೇಳೆಗೆ ಚಿನ್ನ ಬೆಲೆಗಳು ಹೇಗಿರಬಹುದು ಎಂಬ ಕುತೂಹಲ ಹಲವರಿಗೆ ಇರುತ್ತದೆ.

2050ರ ಚಿನ್ನದ ದರ: ನಿಮ್ಮ 1 ಲಕ್ಷದ ಭವಿಷ್ಯವೇನು?

2026ರ ಜನವರಿಗೆ ವೇಳೆಗೆ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ 10 ಗ್ರಾಂ ಚಿನ್ನದ ಬೆಲೆ ಸುಮಾರು 1,42,540 ರೂಪಾಯಿ ಅಥವಾ ಪ್ರತಿ ಗ್ರಾಂಗೆ 14,254 ರೂಪಾಯಿ ಇತ್ತು. ಅದೇ ರೀತಿ 22 ಕ್ಯಾರೆಟ್ ಚಿನ್ನದ ವೇಲೆ 10 ಗ್ರಾಂಗೆ 1,30,660 ರೂಪಾಯಿ, ಪ್ರತಿ ಗ್ರಾಂಗೆ 13,066 ರೂಪಾಯಿ ಇತ್ತು. ಕಳೆದ ಆರು ವರ್ಷಗಳಲ್ಲಿ ಕ್ಯಾರೆಟ್ ಚಿನ್ನದ ಬೆಲೆ ಬಹುತೇಕ ಮೂರು ಪಟ್ಟು ಹೆಚ್ಚಾಗಿದೆ. 2020ರಲ್ಲಿ 50,000 ರೂಪಾಯಿ ಇದ್ದ ಚಿನ್ನದ ಬೆಲೆ ಈಗ 1,42,540 ರೂಪಾಯಿಗೆ ಏರಿಕೆಯಾಗಿದೆ.

ಕಳೆದ 30 ವರ್ಷಗಳ ಹಿಂದಿನ ಅಂಕಿ-ಅಂಶಗಳನ್ನು ಪರಿಶೀಲನೆ ನಡೆಸುವುದಾದರೆ, ಸರಾಸರಿ 10.83 ಪ್ರಮಾಣದಲ್ಲಿ ಬೆಳೆದಿದ್ದು, ಇದು 20 ವರ್ಷಗಳಲ್ಲಿ 14.35 ಶೇಕಡಾ ಹೆಚ್ಚಾಗಿದೆ. ಕಳೆದ 15 ವರ್ಷಗಳಲ್ಲಿ ಸರಾಸರಿ ಆದಾಯ ಸುಮಾರು 12ರಷ್ಟು ಹೆಚ್ಚಾಗಿದೆ. ಇದಕ್ಕೆ ಹಣದುಬ್ಬರ ಹಾಗೂ ರೂಪಾಯಿಯ ಅಪಮೌಲ್ಯ ಪ್ರಮುಖ ಕಾರಣವಾಗಿದೆ. ಯುಎಸ್‌ಡಿಯಲ್ಲಿ ನೋಡುವುದಾದರೆ, ಚಿನ್ನದ ವಾರ್ಷಿಕ ದರ ಹೆಚ್ಚಳ ಶೇಕಡಾ 5-7ರಷ್ಟಿದೆ.

2030ರ ವೇಳೆಗೆ ಚಿನ್ನವೂ ಪ್ರತಿ ಔನ್ಸ್ಗೆ 5-10 ಸಾವಿರ ಯುಸ್ ಡಾಲರ್‌ಗೆ ತಲುಪಬಹುದು ಎಂದು ಅಂದಾಜು ಮಾಡಲಾಗಿದೆ. ಇದೇ ವೇಳೆ 2040-2050ರ ವೇಳೆಗೆ ಎಷ್ಟು ದರ ಹೆಚ್ಚಳ ಆಗಬಹುದು ಎಂದು ತಜ್ಞರು ಊಹೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತರರಾಷ್ಟ್ರಿಯ ಅಂದಾಜಿನ ಪ್ರಕಾರ 2050ರ ವೇಳೆಗೆ ಪ್ರತಿ ಔನ್ಸ್ ಚಿನ್ನ ಬೆಲೆ 10 ಸಾವಿರ ಯುಎಸ್ ಡಾಲರ್‌ ಮೀರಬಹುದು. ಆದರೆ ಕೆಲವರು 15 ರಿಂದ 20 ಸಾವಿರ ಯುಎಸ್ ಡಾಲರ್‌ಗೆ ಮುಟ್ಟಬಹುದು ಎಂದು ಊಹೆ ಮಾಡಿದ್ದಾರೆ. ಭಾರತದಲ್ಲಿ ರೂಪಾಯಿ ಮೌಲ್ಯ ಆಧಾರ ಮೇಲೆ ನೋಡುವುದಾದರೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. 2050ರ ವೇಳೆಗೆ ಚಿನ್ನದ ಪ್ರಸ್ತುತ ಮೌಲ್ಯಕ್ಕಿಂತ 6-8 ಪಟ್ಟು ಹೆಚ್ಚಾಗಬಹುದು ಎಂದು ಅಂದಾಜು ಮಾಡಲಾಗಿದೆ.

ಈ ಹಿಂದಿ ಅಂಕಿ-ಅಂಶಗಳ ಆಧಾರದ ಮೇರೆಗೆ ನೋಡುವುದಾದರೆ, ಚಿನ್ನದ ಬೆಲೆ 2050ರ ವೇಳೆಗೆ ಶೇಕಡಾ 10ರಷ್ಟು ಬೆಳೆವಣಿಗೆ ಕಂಡರೂ, 24 ಕ್ಯಾರೆಟ್ ಚಿನ್ನದ ಬೆಲೆ 14-15 ಲಕ್ಷಗಳಿಗೆ ಏರಿಕೆ ಆಗಬಹುದು. ಶೇಕಡಾ 12ರಷ್ಟು ಸಿಎಜಿಆರ್ ನೊಂದಿಗೆ ಬೆಳವಣಿಗೆ ಆದರೆ 21-22 ಲಕ್ಷಗಳ ವರೆಗೂ ಹೆಚ್ಚಾಗಬಹುದು. ಅದೇ ರೀತಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 12.8 ಲಕ್ಷ ರೂಪಾಯಿಗೆ ಅಥವಾ 19.8 ಲಕ್ಷ ರೂಪಾಯಿಗೆ ತಲುಪಬಹುದು. ಇದು ಕೇಲವ ಸರಾಸರಿ ಅಂದಾಜು ಆಗಿದ್ದು, ನಿಖರ ಬೆಲೆ ಬದಲಾವಣೆಯಾಗಬಹುದು.

ಈಗ ನೀವು 24 ಕ್ಯಾರೆಟ್ ಚಿನ್ನದಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ನಿಮಗೆ ಸುಮಾರು 7.016 ಗ್ರಾಂ ಚಿನ್ನ ಖರೀದಿ ಮಾಡಬಹುದು. ಶೇಕಡಾ 10 ಸಿಎಜಿಆರ್‌ನಲ್ಲಿ 2050ರ ವೇಳೆಗೆ ಸುಮಾರು 9.85 ಲಕ್ಷ ರೂಪಾಯಿ, 11-12 ಸಿಎಜಿಆರ್‌ನಲ್ಲಿ 12-15 ಲಕ್ಷ ರೂಪಾಯಿಗೆ ಹೆಚ್ಚಾಗಬಹುದು. ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ, 2050ರ ವೇಳೆಗೆ 4.17-5.29 ಲಕ್ಷ ರೂಪಾಯಿಗೆ ಹೆಚ್ಚಾಗಬಹುದು. ಆದರೆ ಇಲ್ಲಿ ಚಿನ್ನ ಮೇಲಿನ ಹೂಡಿಕೆ ಅಪಾಯವನ್ನು ಹೊಂದಿರುತ್ತದೆ ಎಂದು ಗ್ರಾಹಕರು ಮರೆಯುವಂತೆ ಇಲ್ಲ. ಹೂಡಿಕೆಯಲ್ಲಿ ದೀರ್ಘಾವಧಿಯ ಯೋಜನೆಯಗಳ ಉತ್ತಮ ಲಾಭ ನೀಡಿದರೂ, ಇದರ ಆಯ್ಕೆ ಸಂಪೂರ್ಣ ವೈಯುಕ್ತಿಕವಾಗಿರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Oil: ದೀಪಾವಳಿಗಾದ್ರು ತೈಲ ಬೆಲೆ ಇಳಿಯುತ್ತಾ? ಇಳಿಯಲ್ವಾ? ರಷ್ಯಾ-ಸೌದಿಯಿಂದ ಬಿಗ್ ಅಪ್ಡೇಟ್!
Business ಶುರು ಮಾಡೋಕೆ ಲೋನ್ ಬೇಕಾ? 16 ಸರ್ಕಾರಿ ಯೋಜನೆಗಳು ಒಂದೇ ಪೋರ್ಟಲ್‌ನಲ್ಲಿ! ಅರ್ಜಿ ಸಲ್ಲಿಸುವುದು ಹೇಗೆ?