
ನವದೆಹಲಿ(ಜು.12): Ola Electric ನೂರು ಮಿಲಿಯನ್ ಡಾಲರ್ ಮೊತ್ತ ಒಗ್ಗೂಡಿಸಲು Bank of Baroda ಜೊತೆ ಒಪ್ಪಂದ ಮಾಡಿಕೊಂಡಿದೆ. ಕಂಪನಿ ತನ್ನ ಪ್ರಕಟಣೆಯೊಂದರಲ್ಲಿ ಇದು ಭಾರತದ ಎಲೆಕ್ಟ್ರಿಕ್ ವ್ಹೀಲ್ ಇಂಡಸ್ಟ್ರಿಯಲ್ಲಿ (EV industry) ಅತೀ ದೊಡ್ಡ ಲಾಂಗ್ ಟರ್ಮ್ ಡೇಟ್ ಫೈನಾನ್ಸಿಂಗ್ ಎಗ್ರೀಮೆಂಟ್ ಆಗಿದೆ. ಈ ಹಣವನ್ನು ಓಲಾ ಫ್ಯೂಚರ್‌ಫ್ಯಾಕ್ಟ್ರಿ ಮೊದಲನೇ ಹಂತಕ್ಕೆ ಬಳಕೆ ಮಾಡಲಾಗುತ್ತದೆ. ಹತ್ತು ವರ್ಷದ ಅವಧಿಗೆ ಈ ಸಾಲ ತೆಗೆದುಕೊಳ್ಳಲಾಗಿದೆ. ದ್ವಿಚಕ್ರ ವಾಹನ ಕಾರ್ಖಾನೆಯ ಮೊದಲ ಹಂತಕ್ಕೆ 2,400 ಕೋಟಿ ರೂ. ಹೂಡಿಕೆ ಮಾಡುವುದಾಗಿ ಓಲಾ ಈ ಹಿಂದೆ ಡಿಸೆಂಬರ್‌ನಲ್ಲಿ ಘೋಷಿಸಿತ್ತು.
ಮುಂದಿನ ಫ್ಯಾಕ್ಟರಿ ತಮಿಳುನಾಡಿನಲ್ಲಿ
ಓಲಾ ತನ್ನ ಮುಂದಿನ(ಭವಿಷ್ಯದ) ಕಾರ್ಖಾನೆ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ಆರಂಭಿಸಲಿದೆ. ಇದು ವರ್ಷಕ್ಕೆ 10 ಮಿಲಿಯನ್ ವಾಹನಗಳ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಕಾರ್ಖಾನೆಯಾಗಲಿದೆ. ಓಲಾ ಫ್ಯೂಚರ್‌ಫ್ಯಾಕ್ಟರಿಯ ಮೊದಲ ಹಂತವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಓಲಾ ಭಾರತದ ಅತಿದೊಡ್ಡ ಮೊಬಿಲಿಟಿ ಪ್ಲಾಟ್‌ಫಾರಂ ಆಗಿದೆ ಮತ್ತು ವಿಶ್ವದ ಅತಿದೊಡ್ಡ ರೈಡ್ಹೇಲಿಂಗ್ ಕಂಪನಿಗಳಲ್ಲಿ ಒಂದಾಗಿದೆ.
ಖುಷಿ ವ್ಯಕ್ತಡಿಸಿದ ಓಲಾ ಅಧ್ಯಕ್ಷರು
ಓಲಾ ಅಧ್ಯಕ್ಷ ಮತ್ತು ಸಮೂಹ ಸಿಇಒ ಭಾವೀಶ್ ಅಗರ್‌ವಾಲ್ ಮಾತನಾಡಿ, “ಓಲಾ ಮತ್ತು ಬ್ಯಾಂಕ್ ಆಫ್ ಬರೋಡಾ ನಡುವಿನ ಒಪ್ಪಂದವು ವಿಶ್ವದಲ್ಲಿ ದ್ವಿಚಕ್ರ ವಾಹನ ಕಾರ್ಖಾನೆಯನ್ನು ದಾಖಲೆ ಸಮಯದಲ್ಲಿ ಸ್ಥಾಪಿಸುವ ವಿಶ್ವಾಸವನ್ನು ನೀಡುತ್ತದೆ. ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾ ನಮ್ಮೊಂದಿಗೆ ಇರುವುದು ಬಹಳ: ಖುಷಿ ಕೊಟ್ಟಿದೆ.
ಅತ್ತ ಬ್ಯಾಂಕ್ ಆಫ್ ಬರೋಡಾದ ಎಂಡಿ ಮತ್ತು ಸಿಇಒ ಸಂಜೀವ್ ಚಾಧಾ ಮಾತನಾಡುತ್ತಾ, “ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸಲು ಮತ್ತು ಭಾರತವನ್ನು ವಿಶ್ವದ EV ನಾಯಕರನ್ನಾಗಿ ಮಾಡಲು ಸರ್ಕಾರ ಹಲವಾರು ನೀತಿಗಳನ್ನು ತಂದಿದೆ. ಓಲಾ ಅದನ್ನು ಮುನ್ನಡೆಸುತ್ತಿದೆ. ಇದರಲ್ಲಿ ಓಲಾ ಜೊತೆ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಿದೆ. ಫ್ಯೂಚರ್‌ಫ್ಯಾಕ್ಟರಿ ಭಾರತವನ್ನು ಜಾಗತಿಕ EV ನಕ್ಷೆಯಲ್ಲಿ ಸೇರಿಸುತ್ತದೆ ಮತ್ತು ನಾವು ಹೆಮ್ಮೆ ಪಡುತ್ತೇವೆ ಎಂದಿದ್ದಾರೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.