
ಬೆಂಗಳೂರು (ಸೆ.26): ವರ್ಷದ ಹಬ್ಬದ ತಿಂಗಳು ಆರಂಭವಾಗಿದೆ. ಈ ಬಾರಿ ಅಕ್ಟೋಬರ್‌ನಲ್ಲಿ ದಸರಾ ಹಾಗೂ ದೀಪಾವಳಿ ಎರಡೂ ಬಂದಿರುವುದು ಸಂಭ್ರಮ ಇನ್ನಷ್ಟು ಹೆಚ್ಚು ಮಾಡಿದೆ. ಅದರಲ್ಲೂ ಸರ್ಕಾರಿ ನೌಕರರಿಗಂತೂ ಹಬ್ಬದ ಸೀಸನ್ ಅನ್ನೋದು ರಜೆಯ ಹಬ್ಬ. ಅಕ್ಟೋಬರ್ ತಿಂಗಳಲ್ಲಿ ಅವರಿಗೆ ಈ ಬಾರಿ ಕೆಲಸ ಮಾಡೋದೇ ಬೇಡ ಅನ್ನೋವಷ್ಟು ರಜೆಗಳಿವೆ. ಶನಿವಾರ ಹಾಗೂ ಭಾನುವಾರದ ರಜೆಗಳು ಸೇರಿ ಅಕ್ಟೋಬರ್‌ನಲ್ಲಿ ಒಟ್ಟು 21 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತದೆ. ಕರ್ನಾಟಕದಲ್ಲಿ ಬರೋಬ್ಬರಿ 11 ದಿನಗಳ ಕಾಲ ರಜೆ ಇದೆ.
ಅಕ್ಟೋಬರ್ ತಿಂಗಳಲ್ಲಿ ದಸರಾ, ದೀಪಾವಳಿ ಮಾತ್ರವಲ್ಲದೆ ವಾಲ್ಮೀಕಿ ಜಯಂತಿ, ದುರ್ಗಾ ಪೂಜೆ, ಕರ್ವಾ ಚೌತ್, ಗಾಂಧಿ ಜಯಂತಿ ಕೂಡ ಬಂದಿರುವುದರಿಂದ ಸಾಲು ಸಾಲು ರಜೆಗಳಿವೆ. ಆದರೆ, ವಿಜಯ ದಶಮಿ ಹಾಗೂ ಗಾಂಧಿ ಜಯಂತಿ ಒಂದೇ ದಿನ ಬಂದಿರುವುದು ಸಾರ್ವತ್ರಿಕ ರಜೆಯೊಂದು ತಪ್ಪಿ ಹೋದಂತಾಗಿದೆ.
ಈಗ ಬ್ಯಾಂಕ್‌ಗಳು ಮೊದಲಿನಂತಿಲ್ಲ. ಬ್ಯಾಂಕ್ ಕಚೇರಿ ಕ್ಲೋಸ್ ಆಗಿದ್ದರೂ, ಆನ್‌ಲೈನ್‌ನಲ್ಲಿ ವ್ಯವಹಾರ ಮಾಡಿಕೊಳ್ಳಬಹುದು. ನಗದು ಅಗತ್ಯವಿದ್ದವರು, ಎಟಿಎಂ ಬಳಸಿಕೊಳ್ಳಬಹುದು. ಹಣ ಪಾವತಿಗೆ ನೆಟ್ ಬ್ಯಾಂಕ್, ಫೋನ್ ಬ್ಯಾಂಕ್ ಹಾಗೂ ಯುಪಿಐ ದಿನದ ಎಲ್ಲಾ ಸಮಯದಲ್ಲೂ ಲಭ್ಯವಿದೆ. ಚೆಕ್ ಹಾಗೂ ಆರ್‌ಟಿಜಿಎಸ್ ಮಾಡುವವರು ರಜಾ ದಿನಗಳನ್ನು ನೋಡಿಕೊಂಡು ಬ್ಯಾಂಕ್‌ಗೆ ಹೋಗಬಹುದು.
ಅಕ್ಟೋಬರ್ 1, ಬುಧವಾರ: ಮಹಾನವಮಿ (ಬಹುತೇಕ ಭಾರತದಲ್ಲಿ ರಜೆ)
ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ (ಸಾರ್ವತ್ರಿಕ ರಜೆ)
ಅಕ್ಟೋಬರ್ 3, ಶುಕ್ರವಾರ: ದುರ್ಗಾ ಪೂಜೆ (ಸಿಕ್ಕಿಂ ರಾಜ್ಯಕ್ಕೆ ಮಾತ್ರ)
ಅಕ್ಟೋಬರ್ 4, ಶನಿವಾರ: ದುರ್ಗಾ ಪೂಜೆ (ಸಿಕ್ಕಿಂ ರಾಜ್ಯಕ್ಕೆ ಮಾತ್ರ)
ಅಕ್ಟೋಬರ್ 5: ಭಾನುವಾರದ ರಜೆ
ಅಕ್ಟೋಬರ್ 6, ಸೋಮವಾರ: ಲಕ್ಷ್ಮೀ ಪೂಜೆ (ತ್ರಿಪುರ, ಬಂಗಾಳ)
ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ (ಕೆಲ ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 10, ಶುಕ್ರವಾರ: ಕರ್ವಾ ಚೌತ್ (ಹಿಮಾಚಲ ಪ್ರದೇಶದಲ್ಲಿ ರಜೆ)
ಅಕ್ಟೋಬರ್ 11: ಎರಡನೇ ಶನಿವಾರದ ರಜೆ
ಅಕ್ಟೋಬರ್ 12: ಭಾನುವಾರದ ರಜೆ
ಅಕ್ಟೋಬರ್ 18, ಶನಿವಾರ: ಕಟಿ ಬಿಹು (ಅಸ್ಸಾಮ್ ರಾಜ್ಯದಲ್ಲಿ ರಜೆ)
ಅಕ್ಟೋಬರ್ 19: ಭಾನುವಾರದ ರಜೆ
ಅಕ್ಟೋಬರ್ 20, ಸೋಮವಾರ: ದೀಪಾವಳಿ, ಕಾಳಿ ಪೂಜೆ (ಹೆಚ್ಚಿನ ಕಡೆ ರಜೆ)
ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಅಮಾವಾಸ್ಯೆ, ಗೋವರ್ಧನ ಪೂಜೆ (ಮಹಾರಾಷ್ಟ್ರ, ಒಡಿಶಾ ಸೇರಿದಂತೆ ಮೊದಲಾದ ಕೆಲವೆಡೆ ರಜೆ)
ಅಕ್ಟೋಬರ್ 22, ಬುಧವಾರ: ದೀಪಾವಳಿ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ (ಹಲವು ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 23, ಗುರುವಾರ: ಭಾಯಿ ದೂಜ್, ಲಕ್ಷ್ಮೀ ಪೂಜೆ, ಚಿತ್ರಗುಪ್ತ ಪೂಜೆ (ಕೆಲವು ರಾಜ್ಯಗಳಲ್ಲಿ ರಜೆ)
ಅಕ್ಟೋಬರ್ 25: ನಾಲ್ಕನೇ ಶನಿವಾರದ ರಜೆ
ಅಕ್ಟೋಬರ್ 26: ಭಾನುವಾರದ ರಜೆ
ಅಕ್ಟೋಬರ್ 27, ಸೋಮವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್ ರಾಜ್ಯದಲ್ಲಿ ರಜೆ)
ಅಕ್ಟೋಬರ್ 28, ಮಂಗಳವಾರ: ಛಾತ್ ಪೂಜೆ (ಬಂಗಾಳ, ಬಿಹಾರ, ಜಾರ್ಖಂಡ್ ರಾಜ್ಯದಲ್ಲಿ ರಜೆ)
ಅಕ್ಟೋಬರ್ 31, ಶುಕ್ರವಾರ: ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ (ಗುಜರಾತ್ ರಾಜ್ಯದಲ್ಲಿ ರಜೆ)
ಅಕ್ಟೋಬರ್ 1, ಬುಧವಾರ: ಮಹಾನವಮಿ
ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ, ವಿಜಯದಶಮಿ
ಅಕ್ಟೋಬರ್ 5: ಭಾನುವಾರದ ರಜೆ
ಅಕ್ಟೋಬರ್ 7, ಮಂಗಳವಾರ: ವಾಲ್ಮೀಕಿ ಜಯಂತಿ
ಅಕ್ಟೋಬರ್ 11: ಎರಡನೇ ಶನಿವಾರದ ರಜೆ
ಅಕ್ಟೋಬರ್ 12: ಭಾನುವಾರದ ರಜೆ
ಅಕ್ಟೋಬರ್ 19: ಭಾನುವಾರದ ರಜೆ
ಅಕ್ಟೋಬರ್ 20, ಸೋಮವಾರ: ದೀಪಾವಳಿ
ಅಕ್ಟೋಬರ್ 22, ಬುಧವಾರ: ದೀಪಾವಳಿ ಬಲಿಪಾಡ್ಯಮಿ
ಅಕ್ಟೋಬರ್ 25: ನಾಲ್ಕನೇ ಶನಿವಾರದ ರಜೆ
ಅಕ್ಟೋಬರ್ 26: ಭಾನುವಾರದ ರಜೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.