1 ಲಕ್ಷ ಕೋಟಿ ಗಡಿ ದಾಟಿದ ಕಂಪನಿಯ ಮೌಲ್ಯ, ಪ್ಲಾಸ್ಟಿಕ್‌ ಚೀಲ ಹಿಡ್ಕೊಂಡು ಮಾರ್ಕೆಟ್‌ ಸುತ್ತಾಡಿದ ಮಾಲೀಕ!

By Santosh Naik  |  First Published May 27, 2023, 9:25 PM IST

ಬಹುಶಃ ಜೆನ್ಸನ್‌ ಹುವಾಂಗ್‌ ಎನ್ನುವ ಹೆಸರು ಹೇಳಿದರೆ, ಯಾರಿಗೂ ಗೊತ್ತಾಗಲಿಕ್ಕಿಲ್ಲ. ಜೆಫ್‌ ಬೆಜೋಸ್‌, ಬಿಲ್‌ಗೇಟ್ಸ್‌, ಎಲೋನ್‌ ಮಸ್ಕ್‌ ರೀತಿಯಲ್ಲಿ ಪ್ರಚಾರದಲ್ಲಿರುವ ಉದ್ಯಮಿಗಳಲ್ಲ. ಸಾಫ್ಟ್‌ವೇರ್‌, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಕ್ಷೇತ್ರದಲ್ಲಿರುವವರಿಗೆ ಎನ್ವಿಡಿಯಾ ಎನ್ನುವ ಹೆಸರು ಹೊಸದಲ್ಲ. ಈ ಕಂಪನಿಯ ಸಂಸ್ಥಾಪಕ ಜೆನ್ಸನ್‌ ಹುವಾಂಗ್‌.


ನವದೆಹಲಿ (ಮೇ.27): ಒಂದೆರಡು ಕೋಟಿಯಲ್ಲ, ಕಳೆದ ವಾರ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಸಾಫ್ಟ್‌ವೇರ್‌ ಹಾಗೂ ಕಂಪ್ಯೂಟರ್‌ ಗ್ರಾಫಿಕ್ಸ್‌ನ ಪ್ರಖ್ಯಾತ ಕಂಪನಿ ಎನ್ವಿಡಿಯಾ ತನ್ನ ಕಂಪನಿಯ ಮೌಲ್ಯ 1 ಲಕ್ಷ ಕೋಟಿ ರೂಪಾಯಿ ಗಡಿ ದಾಟಿತು. ಆದರೆ, ಈ ಕಂಪನಿಯ ಸಂಸ್ಥಾಪಕ ಇದನ್ನು ಆಚರಣೆ ಮಾಡಿದ್ದು ಹೇಗೆ ಅಂದರೆ ನಿಮಗೆ ಅಚ್ಚರಿಯಾಗದೇ ಇರದು. ಬಹುಶಃ ಒಂದು ಪುಡಿ ರಾಜಕಾರಣಿ, ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಸ್ಥಾನದಲ್ಲಿರುವ ವ್ಯಕ್ತಿ, ಸೆಲಿಬ್ರಿಟಿಗಳು, ಶತಕೋಟ್ಯಧಿಪತಿಗಳು ತಮ್ಮ ಬಳಿ ಏನಿಲ್ಲವಂದರೂ ಹತ್ತಿಪ್ಪತ್ತು ಮಂದಿ ಸೆಕ್ಯುರಿಟಿಗಳನ್ನು ಇರಿಸಿಕೊಂಡಿರುತ್ತಾರೆ. ಇವರ ನಡುವೆ ಎನ್ವಡಿಯಾದ ಸಿಇಒ ಹಾಗೂ ಸಹಸಂಸ್ಥಾಪಕರಾಗಿರುವ ಜೆನ್ಸನ್‌ ಹುವಾಂಗ್‌ ಭಿನ್ನವಾಗಿ ನಿಲ್ಲುವುದು ಅದೇ ಕಾರಣಕ್ಕೆ. ಕಂಪನಿಯ ಮೌಲ್ಸ್‌ ಲಕ್ಷ ಕೋಟಿ ದಾಟಿದರೂ, ಯಾವುದೇ ಹಮ್ಮು ಬಿಮ್ಮು ಇಲ್ಲದೆ ಜೆನ್ಸನ್‌ ಹುವಾಂಗ್‌, ಚೈನೀಸ್‌ ತೈಪೆಯ ಸ್ಥಳೀಯ ಮಾರುಕಟ್ಟೆಯಲ್ಲಿ ಸಣ್ಣ ಪ್ಲಾಸ್ಟಿಕ್‌ ಚೀಲ ಹಿಡಿದು ಏನನ್ನೋ ಖರೀದಿ ಮಾಡಿದ್ದಾರೆ. ದೇಶದ ಅತೀದೊಡ್ಡ ಉದ್ಯಮಿ ಹಾಗೂ ಶತಕೋಟ್ಯಧಿಪತಿಯಾಗಿದ್ದರೂ ಚೀನಾ ತೈಪೆಯ ತೈಪೆ ಮಾರ್ಕೆಟ್‌ನಲ್ಲಿ ಹುವಾಂಗ್‌, ಯಾವ ಹಮ್ಮು ಬಿಮ್ಮು ಇಲ್ಲದೆ ನಡೆಯುತ್ತಿರುವ ಚಿತ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗಿದೆ.

ಇದನ್ನು ಅದೇ ದೇಶದ ಸ್ಟಾರ್ಟ್‌ಅಪ್‌ ಸಂಸ್ಥಾಪಕರೊಬ್ಬರು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಯಾವುದೇ ಭದ್ರತೆ ಇಲ್ಲದೆ, ಕಪ್ಪು ಬಣ್ಣದ ಜಾಕೆಟ್‌ ಹಾಗೂ ಪ್ಲಾಸ್ಟಿಕ್‌ ಬ್ಯಾಗ್‌ ಹಿಡಿದುಕೊಂಡು ಜೆನ್ಸನ್‌ ಹುವಾಂಗ್‌ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ನಿರತರಾಗಿರುವ ಪೋಟೋ ಇದಾಗಿದೆ.

ಟ್ವಟರ್‌ನಲ್ಲಿ ಲಿನ್‌ ಎನ್ನುವ ವ್ಯಕ್ತಿ ಇದನ್ನು ಪೋಸ್ಟ್‌ ಮಾಡಿದ್ದು, ಎನ್ವಿಡಿಯಾ ಸಹಸಂಸ್ಥಾಪಕ ಜೆನ್ಸನ್‌ ಹುವಾಂಗ್‌, ತೈಪೆಯ ರಾತ್ರಿ ಮಾರುಕಟ್ಟೆಯಲ್ಲಿ ಹೀಗೆ ಅಲೆದಾಡುತ್ತಿದ್ದರು. ಇವರ ಕಂಪನಿಯ ಮಾರುಕಟ್ಟೆ ಮೌಲ್ಯಈ ವಾರವಷ್ಟೇ 1 ಲಕ್ಷ ಕೋಟಿ ರೂಪಾಯಿ ದಾಟಿದೆ' ಎಂದು ಬರೆದಿರುವ ಅವರು ತೈಪೆ ಹಾಗೂ ತೈವಾನ್‌ ಎನ್ನುವ ಹ್ಯಾಶ್‌ಟ್ಯಾಗ್‌ಅನ್ನೂ ಹಾಕಿದ್ದಾರೆ. ಎಲ್ಲೂ ಕೂಡ ಅವರ ಭದ್ರತಾ ಸಿಬ್ಬಂದಿಗಳು ಅವರ ಸಮೀಪ ಇರುವ ತೀತಿ ಕಾಣಲಿಲ್ಲ.

ಈ ಪೋಸ್ಟ್‌ಗೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. 'ಬಹಳ ಜನರು ಇದು ಫೇಕ್‌ ಇರಬಹುದು ಎನ್ನಬಹುದು. ಆದರೆ, ಚೀನಾ ತೈಪೆಯಲ್ಲಿ ಈಗಾಗಲೇ ಇದು ದೊಡ್ಡ ಸುದ್ದಿಯಾಗಿದೆ. ಜೆನ್ಸನ್‌ ಹುವಾಂಗ್‌ ಮೂಲತಃ ಇದೇ ದೇಶದವರು ' ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಕೆಲದವೇ ಗಂಟೆಗಳ ಹಿಂದೆ ಇದೇ ವ್ಯಕ್ತಿ ರಾಷ್ಟ್ರೀಯ ತೈವಾನ್‌ ವಿವಿಯ ಸ್ನಾತಕೋತ್ತರ ಸಮಾರಂಭದಲ್ಲಿ ಭಾಗವಹಿಸಿದ್ದರು ಎಂದು ಬರೆದಿದ್ದಾರೆ. ಬಹುಶಃ ಅವರಿಗೆ ಆಹಾರ ಖರೀದಿಸಲು ಬೇಕಾದಷ್ಟು ಹಣ ಇರುವಂತೆ ಕಾಣುತ್ತಿದೆ ಎಂದು ಇನ್ನೊಬ್ಬರು ತಮಾಷೆಯಾಗಿ ಬರೆದಿದ್ದಾರೆ.

Nvidia co-founder Jensen Huang (黃仁勳) walking through Taipei's night market last night as Nvidia's market cap reaches 1T. pic.twitter.com/8WZSv1k2p8

— CW Lin (@_cw_lin)

Tap to resize

Latest Videos

undefined

ಮಾಜಿ ಮಿಸ್‌ ಇಂಡಿಯಾ ಆದಿತಿ ಆರ್ಯಾ ಜೊತೆ ಬಿಲಿಯನೇರ್‌ ಉದಯ್‌ ಕೋಟಕ್‌ ಪುತ್ರನ ನಿಶ್ಚಿತಾರ್ಥ!

ಕಳೆದ ವರ್ಷ ಅವರು ತೈವಾನ್‌ಗೆ ಬಂದಿದ್ದಾಗ, ರಸ್ತೆ ಬದಿಯಲ್ಲಿ ಹಾಡು ಹೇಳುತ್ತಿದ್ದ ವಿದ್ಯಾರ್ಥಿಗಳೊಂದಿಗೆ, ಲೇಡಿ ಗಾಗಾ ಅವರ ಹೋಲ್ಡ್‌ ಮೈ ಹ್ಯಾಂಡ್‌ಅನ್ನು ನಿಮ್ಮೊಂದಿಗೆ ಹಾಡಬಹುದೇ ಎಂದು ಕೇಳಿದ್ದರು. ಅದೀಗ ನೆನಪಾಗುತ್ತಿದೆ. ತುಂಬಾ ಸರಳ ಜೀವಿ ಎಂದು ಇನ್ನೊಬ್ಬರು ಬೆದಿದ್ದಾರೆ. ಬಹುಶಃ ಈ ವ್ಯಕ್ತಿಯ ಮೌಲ್ಯವೇ 40 ಬಿಲಿಯುನ್‌ ಯುಎಸ್‌ ಡಾಲರ್‌ ಇರಬಹುದು. ವಿಶ್ವದ ಆರನೇ ಶ್ರೀಮಂತ ಕಂಪನಿಯ ಸಿಇಒ, ಆದರೆ, ಭದ್ರತೆಗೆ ಒಬ್ಬನೇ ಒಬ್ಬ ಬಾಡಿಗಾರ್ಡ್‌ಗಳನ್ನೂ ಇರಿಸಿಕೊಂಡಿಲ್ಲ ಎಂದರೆ ಅಚ್ಚರಿಯಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಇದು ತೈವಾನ್‌ ಎಷ್ಟು ಸೇಫ್‌ ಆಗಿದೆ ಎನ್ನುವುದನ್ನೂ ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಒಂದೇ ದಿನದಲ್ಲಿ 92,620 ಕೋಟಿ ಕಳೆದುಕೊಂಡ ವಿಶ್ವದ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್!

click me!