Cardless Withdrawal:ಎಲ್ಲ ಎಟಿಎಂಗಳಲ್ಲಿ ಕಾರ್ಡ್ ರಹಿತ ವಿತ್ ಡ್ರಾಗೆ ಅವಕಾಶ? RBI ಏನ್ ಹೇಳಿದೆ?

By Suvarna NewsFirst Published Apr 16, 2022, 9:53 PM IST
Highlights

*ಯುಪಿಐ ಆಧಾರಿತ ಕಾರ್ಡ್ ರಹಿತ ವಿತ್ ಡ್ರಾ ಸೌಲಭ್ಯ ಸದ್ಯ ಕೆಲವು ಬ್ಯಾಂಕುಗಳ ಎಟಿಎಂಗಳಲ್ಲಿ ಮಾತ್ರ ಲಭ್ಯ
* ಎಲ್ಲ ಬ್ಯಾಂಕುಗಳ ಗ್ರಾಹಕರಿಗೆ  ಎಲ್ಲ ಎಟಿಎಂಗಳಲ್ಲಿ ಈ ಸೇವೆ ಲಭ್ಯವಾಗಬೇಕೆಂಬುದು ಆರ್ ಬಿಐ ಆಶಯ
*ಕಾರ್ಡ್ ರಹಿತ ವಿತ್ ಡ್ರಾ ನಡೆಸೋ ಕುರಿತು ಎನ್ ಪಿಸಿಐ ಹಾಗೂ ಬ್ಯಾಂಕುಗಳಿಗೆ ಆರ್ ಬಿಐ ಇನ್ನಷ್ಟೇ ನಿಯಮಗಳನ್ನು ಪ್ರಕಟಿಸಬೇಕಿದೆ

ನವದೆಹಲಿ (ಏ.16): ಆರ್ಥಿಕ ವಂಚನೆ ತಡೆಯೋ ಉದ್ದೇಶದಿಂದ ಎಲ್ಲ ಬ್ಯಾಂಕುಗಳ ಎಟಿಎಂ (ATM)ಕೇಂದ್ರಗಳಲ್ಲಿ ಯುನಿಫೈಡ್‌ ಪೇಮೆಂಟ್ ಇಂಟರ್ಫೇಸ್ (UPI) ಮೂಲಕ ಕಾರ್ಡ್ ರಹಿತ (cardless) ವಿತ್ ಡ್ರಾ (withdrawal) ಆಯ್ಕೆ ಒದಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಶಿಫಾರಸ್ಸು ಮಾಡಿದೆ. 
ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಯಂತ್ರಣಕ್ಕೊಳಪಟ್ಟಿರುವ ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಯುಪಿಐ (UPI) ಅಭಿವೃದ್ಧಿಪಡಿಸಿದೆ. ಐಎಂಪಿಎಸ್ (IMPS) ಮೂಲಸೌಕರ್ಯ ಆಧರಿಸಿ ಯುಪಿಐ ಅಭಿವೃದ್ಧಿಪಡಿಸಲಾಗಿದ್ದು,ಇದು ಯಾವುದೇ ಎರಡು ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾಯಿಸಲು  ಅವಕಾಶ ಕಲ್ಪಿಸಿದೆ. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ( SBI),ಐಸಿಐಸಿಐ ಬ್ಯಾಂಕ್ (ICICI Bank),ಕೋಟಕ್ ಮಹೀಂದ್ರ ಬ್ಯಾಂಕ್ (Kotak Mahindra Bank),ಬ್ಯಾಂಕ್ ಆಫ್ ಬರೋಡ (BoB) ಹಾಗೂ ಆರ್ ಬಿಎಲ್ ಬ್ಯಾಂಕ್ (RBL Bank) ಈಗಾಗಲೇ ಕಾರ್ಡ್ ರಹಿತ (cardless) ವಿತ್ ಡ್ರಾಗೆ ಅವಕಾಶ ಕಲ್ಪಿಸಿವೆ. ಆದ್ರೆ ಖಾತೆ ಹೊಂದಿರೋ ಬ್ಯಾಂಕಿನ ಎಟಿಎಂ ನೆಟ್ ವರ್ಕ್ ಬಳಸೋ ಗ್ರಾಹಕರಿಗೆ ಮಾತ್ರ ಈ ಸೌಲಭ್ಯ ನೀಡಲಾಗಿದೆ. ಎಲ್ಲ ಬ್ಯಾಂಕುಗಳ ಗ್ರಾಹಕರಿಗೆ  ಎಲ್ಲ ಎಟಿಎಂಗಳಲ್ಲಿ ಈ ಸೇವೆ ಲಭ್ಯವಾಗಬೇಕೆಂಬುದು ಆರ್ ಬಿಐ (RBI) ಆಶಯವಾಗಿದೆ. ಹೀಗಾಗಿ ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಎಲ್ಲ ಬ್ಯಾಂಕುಗಳ ಎಟಿಎಂಗಳಿಗೆ ವಿಸ್ತರಿಸಲು ಆರ್ ಬಿಐ ನಿರ್ಧರಿಸಿದೆ.  
'ವಹಿವಾಟನ್ನು ಸರಳಗೊಳಿಸುವ ಜೊತೆಗೆ ಅಂಥ ವಹಿವಾಟುಗಳಿಗೆ ಭೌತಿಕ ಕಾರ್ಡ್ ಅಗತ್ಯವನ್ನು ತೆಗೆದು ಹಾಕೋದ್ರಿಂದ ಕಾರ್ಡ್ ನಕಲೀಕರಣ ಸೇರಿದಂತೆ ವಂಚನೆಗಳನ್ನು ತಡೆಯಲು ಸಾಧ್ಯವಾಗುತ್ತದೆ' ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.

Latest Videos

Homebuyers Alert: ಗೃಹ ಸಾಲ ಪಡೆದವರಿಗೆ ಶಾಕ್; ಶೀಘ್ರದಲ್ಲೇ ಇಎಂಐ ಮೇಲಿನ ಬಡ್ಡಿದರ ಹೆಚ್ಚಳ!

ಯುಪಿಐ ಕಾರ್ಡ್ ರಹಿತ ವಿತ್ ಡ್ರಾ ಅಂದ್ರೇನು?
ಕಾರ್ಡ್ ರಹಿತ ವಹಿವಾಟು ಅಂದ್ರೆ ಹಣವನ್ನು ಒಂದು ಖಾತೆಯಿಂದ ಭಾರತದಲ್ಲಿರೋ ಯಾವುದೇ ವ್ಯಕ್ತಿಗೆ ಮಾನ್ಯತೆ ಹೊಂದಿರೋ ಮೊಬೈಲ್ ಸಂಖ್ಯೆ ಮೂಲಕ ಕಳುಹಿಸೋದು. ಈ ಸೌಲಭ್ಯ ಹೊಂದಿರೋ ಗ್ರಾಹಕ ಡೆಬಿಟ್ ಅಥವಾ ಎಟಿಎಂ ಕಾರ್ಡ್ ಬಳಸದೆ ಎಟಿಎಂನಿಂದ ನಗದು ವಿತ್ ಡ್ರಾ ಮಾಡಬಹುದಾಗಿದೆ. ಈ ಸೌಲಭ್ಯವನ್ನು ಯಾವುದೇ ಬ್ಯಾಂಕಿನ ಎಟಿಎಂ, ಮೂರನೇ ವ್ಯಕ್ತಿ ಹಾಗೂ ವೈಟ್ ಲೇಬಲ್ ಎಟಿಎಂಗಳಲ್ಲಿ ಬಳಸಬಹುದಾಗಿದೆ.

ಯುಪಿಐ ನೆಟ್ ವರ್ಕ್ ಮೂಲಕ ಕಾರ್ಡ್ ರಹಿತ ವಿತ್ ಡ್ರಾ ಗಳನ್ನು ನಡೆಸೋ ಕುರಿತು ಎನ್ ಪಿಸಿಐ (NPCI) ಹಾಗೂ ಬ್ಯಾಂಕುಗಳಿಗೆ ಆರ್ ಬಿಐ ಇನ್ನಷ್ಟೇ ನಿಯಮಗಳನ್ನು ಪ್ರಕಟಿಸಬೇಕಿದೆ. ಅದು ಗ್ರಾಹಕರಿಗೆ ಎಟಿಎಂ ಸ್ಕ್ರೀನ್ ಮೇಲಿನ ಕ್ಯೂ ಆರ್ ಕೋಡ್  (QR code) ಸ್ಕ್ಯಾನ್  ಮಾಡಲು ಬ್ಯಾಂಕ್ ಸ್ಮಾರ್ಟ್ ಫೋನ್ ಮೂಲಕ ಅವಕಾಶ ಕಲ್ಪಿಸುವ ಯುಪಿಐ ಆಧಾರಿತ ಕಾರ್ಡ್ ರಹಿತ ವಿತ್ ಡ್ರಾ ವ್ಯವಸ್ಥೆಯನ್ನು ಎಟಿಎಂ ಮಾರಾಟ ಸಂಸ್ಥೆ ಎಜಿಎಸ್ ಟ್ರಾನ್ಸ್ ಆಕ್ಟ್ (AGS Transact) ಪರೀಕ್ಷಿಸುತ್ತಿದೆ. ಇದು ಒಂದು ಮಾದರಿಯಾದ್ರೆ ಇನ್ನೊಂದು ಮಾದರಿ ಪ್ರಸ್ತುತ ಎಸ್ ಬಿಐ ಬಳಕೆ ಮಾಡುತ್ತಿರುವ ಯೋನೋ ಅಪ್ಲಿಕೇಷನ್ (YONO app) ರೀತಿಯದು. ಈ ವಿಧಾನದಲ್ಲಿ ಗ್ರಾಹಕ ಬ್ಯಾಂಕಿನ ಅಪ್ಲಿಕೇಷನ್ ಗೆ ಲಾಗಿ ಇನ್ ಆಗಿ ಅಲ್ಲಿ ವಿತ್ ಡ್ರಾ ಮಾಡಲು ಬಯಸೋ ಮೊತ್ತವನ್ನು ನಮೂದಿಸಬೇಕು. ಆ ಬಳಿಕ ಅಪ್ಲಿಕೇಷನ್ ವಹಿವಾಟಿನ ಸಂಖ್ಯೆಯನ್ನು ಸೃಷ್ಟಿಸುತ್ತದೆ. ಈ ಆರು ಅಂಕೆಯ ಪಿನ್ ಮೂಲಕ ಎಟಿಎಂನಿಂದ ನಗದು ವಿತ್ ಡ್ರಾ ಮಾಡಬಹುದು.

Post Office Scheme:ತಿಂಗಳಿಗೆ ರೂ.10,000 ಹೂಡಿಕೆ ಮಾಡಿ, ರೂ.16 ಲಕ್ಷ ಗಳಿಸಿ!

ಈ ನಡುವೆ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಭವಿಷ್ಯದ ಕುರಿತ ಗೊಂದಲಗಳಿಗೆ ತೆರೆ ಎಳೆದಿರೋ ಆರ್ ಬಿಐ, ಈ ಕಾರ್ಡ್ ಗಳ ವಿತರಣೆ ಜೊತೆಗೆ ಇತರ ಅನೇಕ ಸೇವೆಗಳು ಮುಂದುವರಿಯಲಿವೆ. ವಿದೇಶಗಳಲ್ಲಿ ಕೂಡ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಬಹುದು ಎಂದು ಆರ್ ಬಿಐ ತಿಳಿಸಿದೆ. ಹೀಗಾಗಿ ಕಾರ್ಡ್ ರಹಿತ ವಿತ್ ಡ್ರಾ ಆಯ್ಕೆ ಬಂದ ಮೇಲೂ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆ ಮುಂದುವರಿಯಲಿದೆ. 


 

click me!