Post Office Scheme:ತಿಂಗಳಿಗೆ ರೂ.10,000 ಹೂಡಿಕೆ ಮಾಡಿ, ರೂ.16 ಲಕ್ಷ ಗಳಿಸಿ!

By Suvarna News  |  First Published Apr 16, 2022, 6:57 PM IST

*ಅಂಚೆ ಕಚೇರಿ ಆರ್ ಡಿ ಖಾತೆಯಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿ ಹಾಗೂ ರಿಟರ್ನ್ಸ್
*ಆರ್ ಡಿ ಖಾತೆಯಲ್ಲಿ ಕನಿಷ್ಠ100ರೂ.ನಿಂದ ಹೂಡಿಕೆ ಪ್ರಾರಂಭಿಸಬಹುದು
*ಖಾತೆ ತೆರೆದು ಒಂದು ವರ್ಷದ ಬಳಿಕ ಠೇವಣಿ ಹಣದ ಶೇ.50ರಷ್ಟನ್ನು ವಿತ್ ಡ್ರಾ ಮಾಡಲು ಅವಕಾಶ


Business Desk:ಕಷ್ಟಪಟ್ಟು ದುಡಿದ ಹಣವನ್ನು ಉಳಿಸಲು ಅಂಚೆ ಕಚೇರಿ (Post office) ಯೋಜನೆಗಳಲ್ಲಿ ಹೂಡಿಕೆ (Invest) ಮಾಡೋದು ಅತ್ಯಂತ ನಂಬಿಕಾರ್ಹ ಹಾಗೂ ಸುರಕ್ಷಿತ ಮಾರ್ಗ ಎಂಬ ಭಾವನೆ ಭಾರತೀಯರಲ್ಲಿದೆ. ಅದ್ರಲ್ಲೂ ಮಧ್ಯಮ ವರ್ಗದ (Middle class) ಜನರಿಗೆ ಹೂಡಿಕೆಗೆ ಇಂದಿಗೂ ಅಂಚೆ ಕಚೇರಿಯೇ ನೆಚ್ಚಿನ, ವಿಶ್ವಾಸನೀಯ ತಾಣ. ಷೇರು ಮಾರುಕಟ್ಟೆ (Share Market) ಅಥವಾ ಕ್ರಿಪ್ಟೋ ಕರೆನ್ಸಿಯಲ್ಲಿ(Crypto currency) ಹೂಡಿಕೆ ಮಾಡಿ ಅಪಾಯ ಮೈ ಮೇಲೆ ಎಳೆದುಕೊಳ್ಳಲು ಸಿದ್ಧರಿಲ್ಲದವರು ಅಂಚೆ ಕಚೇರಿಯ ಕೆಲವು ಯೋಜನೆಗಳಲ್ಲಿ ಹೂಡಿಕೆ ಮಾಡಿ ಉತ್ತಮ ಬಡ್ಡಿದರದ (Interest rate) ಜೊತೆಗೆ ಒಳ್ಳೆಯ ರಿಟರ್ನ್ (Return) ಕೂಡ ಗಳಿಸುತ್ತಾರೆ.ಅಂಚೆ ಕಚೇರಿಯ ಇಂಥ ಕೆಲವು ಉತ್ತಮ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಫಾಸಿಟ್ ( RD) ಕೂಡ ಒಂದು. 

ಎಷ್ಟು ಬಡ್ಡಿ ಸಿಗುತ್ತೆ?
ಅಂಚೆ ಕಚೇರಿ ರಿಕರಿಂಗ್ ಡೆಫಾಸಿಟ್ ನಲ್ಲಿ ( RD) ಹೂಡಿಕೆ ಮಾಡಿದ್ರೆ ಉತ್ತಮ ಬಡ್ಡಿ (Interest) ಸಿಗುತ್ತದೆ. ಈ ಯೋಜನೆಯ ಇನ್ನೊಂದು ವಿಶೇಷತೆಯೆಂದ್ರೆ ಕನಿಷ್ಠ 100 ರೂ. ನಿಂದ ಹೂಡಿಕೆ ಪ್ರಾರಂಭಿಸಬಹುದು. ಹಾಗೆಯೇ ಗರಿಷ್ಠ ಇಷ್ಟೇ ಹೂಡಿಕೆ ಮಾಡಬೇಕೆಂಬ ನಿರ್ಬಂಧವಿಲ್ಲ. ಅಂಚೆ ಕಚೇರಿ ಆರ್ ಡಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಶೇ. 5.8 ಬಡ್ಡಿ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪ್ರತಿ ತ್ರೈಮಾಸಿಕಕ್ಕೆ ನಿಗದಿಪಡಿಸುತ್ತದೆ. 

Tap to resize

Latest Videos

Post Office: ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಶೀಘ್ರದಲ್ಲಿ ನೆಟ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ!

16 ಲಕ್ಷ ಗಳಿಸೋದು ಹೇಗೆ?
ಆರ್ ಡಿಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಗಳಿಸಲು ಸಾಧ್ಯವಿದೆ. ಆದ್ರೆ ಅದಕ್ಕೆ ಸರಿಯಾದ ಪ್ಲ್ಯಾನ್, ಲೆಕ್ಕಾಚಾರ ಅಗತ್ಯ. ಉದಾಹರಣೆಗೆ ತಿಂಗಳಿಗೆ 10,000ರೂ. ನಂತೆ 10 ವರ್ಷಗಳ ಅವಧಿಗೆ ಆರ್ ಡಿಯಲ್ಲಿ ಹೂಡಿಕೆ ಮಾಡಿದರೆ ಪ್ರಸಕ್ತವಿರೋ ಶೇ.5.8 ಬಡ್ಡಿದರದ ಆಧಾರದಲ್ಲಿ ನಿಮಗೆ 16 ಲಕ್ಷ ರೂ. ರಿಟರ್ನ್ಸ್ ಸಿಗುತ್ತದೆ. 

ತಿಂಗಳ ಕಂತು ಮಿಸ್ ಆದ್ರೆ?
ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ ತೆರೆದ ಮೇಲೆ ನೀವು ಪ್ರತಿ ತಿಂಗಳು ನಿರ್ದಿಷ್ಟ ಮೊತ್ತ ಹೂಡಿಕೆ ಮಾಡಬೇಕು. ಒಂದು ವೇಳೆ ನೀವು ಒಂದು ತಿಂಗಳ ಪಾವತಿಯನ್ನು ಮಿಸ್ ಮಾಡಿದ್ರೆ ಆಗ ಪ್ರತಿ ತಿಂಗಳು ಶೇ.1ರಷ್ಟು ಹೆಚ್ಚುವರಿ ಮೊತ್ತವನ್ನು ದಂಡವಾಗಿ ಪಾವತಿಸಬೇಕು. ಒಂದು ವೇಳೆ ನೀವು ನಿರಂತರ 4 ತಿಂಗಳ ಪಾವತಿ ಕಂತುಗಳನ್ನು ಮಿಸ್ ಮಾಡಿದ್ರೆ ನಿಮ್ಮ ಆರ್ ಡಿ ಖಾತೆ ಮುಚ್ಚಲ್ಪಡುತ್ತದೆ. ಇಲ್ಲೂ ಕೂಡ ಖಾತೆಯನ್ನು ಮತ್ತೆ ಕ್ರಿಯಾಶೀಲಗೊಳಿಸಲು 2 ತಿಂಗಳ ಕಾಲಾವಕಾಶವಿರುತ್ತದೆ. ಆದ್ರೆ ಈ ಸಮಯಾವಕಾಶದಲ್ಲೂ ಸುಮ್ಮನಿದ್ರೆ ಆರ್ ಡಿ ಖಾತೆ ಕಾಯಂ ಆಗಿ ಮುಚ್ಚಲ್ಪಡುತ್ತದೆ. ಈ ಯೋಜನೆಯ ಇನ್ನೊಂದು ವಿಶೇಷ ಏನಂದ್ರೆ ಖಾತೆ ತೆರೆದ ಒಂದು ವರ್ಷದ ಬಳಿಕ ಅದರಲ್ಲಿರೋ ಒಟ್ಟು ಹಣದ ಶೇ.50ರಷ್ಟನ್ನು ವಿತ್ ಡ್ರಾ ಮಾಡಲು ಖಾತೆದಾರನಿಗೆ ಅವಕಾಶ ನೀಡಲಾಗಿದೆ. 

Post Office Scheme : ನಿವೃತ್ತಿಗೂ ಮುನ್ನ ಕೋಟ್ಯಧಿಪತಿ ಮಾಡುತ್ತೆ ಈ ಯೋಜನೆ!

ಸುರಕ್ಷಿತ ಹೂಡಿಕೆಗೆ ಬ್ಯಾಂಕುಗಳ ಸ್ಥಿರ ಠೇವಣಿ ಅಥವಾ ಉಳಿತಾಯ ಖಾತೆ ಒಂದು ಆಯ್ಕೆಯಾದ್ರೆ ಇನ್ನೊಂದು ಆಯ್ಕೆ ಅಂಚೆ ಕಚೇರಿ ಉಳಿತಾಯ ಯೋಜನೆ. ಅದ್ರಲ್ಲೂ ಅಂಚೆ ಕಚೇರಿ ಆರ್ ಡಿ ಖಾತೆ ಮಧ್ಯಮ ವರ್ಗದ ಜನರಿಗೆ ಅತ್ಯುತ್ತಮ ಆಯ್ಕೆ ಎಂದೇ ಹೇಳಬಹುದು. ಆರ್ ಡಿಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಸುರಕ್ಷಿತವಾಗಿರೋ ಜೊತೆ ಉತ್ತಮ ಬಡ್ಡಿ ಕೂಡ ಸಿಗುತ್ತದೆ. ನೀವು ಪ್ರತಿ ತಿಂಗಳು ಸಣ್ಣ ಮೊತ್ತ ಉಳಿತಾಯ ಮಾಡಿ ಉತ್ತಮ ರಿಟರ್ನ್ಸ್ ಗಳಿಸಲು ಬಯಸಿದ್ರೆ ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ ತೆರೆಯೋದು ಖಂಡಿತಾ ಒಳ್ಳೆಯ ನಿರ್ಧಾರ. 
 

click me!