ಟಾಟಾ ಗ್ರೂಪ್‌ನ ಪ್ರಮುಖ ಕಂಪನಿ ಟಾಟಾ ಸ್ಟೀಲ್ ಇನ್ನು ಮುಂದೆ ವಂದೇ ಭಾರತ್ ರೈಲಿನ ನಿರ್ಮಾಣದಲ್ಲಿ ಭಾಗಿಯಾಗಲಿದೆ. ಈ ಕುರಿತಂತೆ ಭಾರತೀಯ ರೈಲ್ವೆ ಹಾಗೂ ಟಾಟಾ ಸ್ಟೀಲ್ ನಡುವೆ ಪ್ರಮುಖ ಒಪ್ಪಂದ ಕೂಡ ಆಗಿದೆ.
ನವದೆಹಲಿ (ಮಾ.9): ನಷ್ಟದಲ್ಲಿದ್ದ ಏರ್‌ಇಂಡಿಯಾ ಕಂಪನಿಯನ್ನು ಕೇಂದ್ರ ಸರ್ಕಾರದಿಂದ ಖರೀದಿ ಮಾಡಿ ಅದನ್ನು ಲಾಭದ ದಿಕ್ಕಿನತ್ತ ಕೊಂಡೊಯ್ಯುವ ಪ್ರಯತ್ನದಲ್ಲಿರುವ ದೇಶದ ಹೆಮ್ಮೆಯ ಕಂಪನಿ ಟಾಟಾ ಇನ್ನು ವಂದೇ ಭಾರತ್ ರೈಲಿನ ನಿರ್ಮಾಣ ಕಾರ್ಯದಲ್ಲೂ ಭಾಗಿಯಾಗಲಿದೆ. ನರೇಂದ್ರ ಮೋದಿ ಸರ್ಕಾರದ ಹೆಮ್ಮೆಯ ಸೆಮಿಹೈಸ್ಪೀಡ್ ರೈಲು ವಂದೇ ಭಾರತ್ ನಿರ್ಮಾಣದಲ್ಲಿಯೂ ಟಾಟಾ ಗ್ರೂಪ್ ಕೈಜೋಡಿಸಲಿದೆ. ಹೌದು, ವಂದೇ ಭಾರತ್ ರೈಲಿನ ಹೆಚ್ಚುತ್ತಿರುವ ಜನಪ್ರಿಯತೆಯ ದೃಷ್ಟಿಯಿಂದ, ಟಾಟಾ ಗ್ರೂಪ್‌ನ ಪ್ರಮುಖ ಅಂಗವಾಗಿರುವ ಟಾಟಾ ಸ್ಟೀಲ್ ಈ ರೈಲಿನ ನಿರ್ಮಾಣ ಕಾರ್ಯದಲ್ಲಿ ಜೊತೆಯಾಗುವ ಆಸಕ್ತಿ ವ್ಯಕ್ತಪಡಿಸಿದೆ. ಮುಂದಿನ ಒಂದು ವರ್ಷದಲ್ಲಿ ಟಾಟಾ ಸ್ಟೀಲ್ 22 ವಂದೇ ಭಾರತ್ ರೈಲನ್ನು ನಿರ್ಮಾಣ ಮಾಡುವುದಾಗಿ ನಿರ್ಧಾರ ಮಾಡಿದೆ. ಈ ಕುರಿತಾಗಿ ಟಾಟಾ ಸ್ಟೀಲ್ ಹಾಗೂ ಭಾರತೀಯ ರೈಲ್ವೇಸ್ ನಡುವೆ ಇತ್ತೀಚೆಗೆ ಒಪ್ಪಂದ ಕೂಡ ಏರ್ಪಟ್ಟಿದೆ. ಮುಂದಿನ ಎರಡು ವರ್ಷಗಳಲ್ಲಿ 200 ಹೊಸ ವಂದೇ ಭಾರತ್ ರೈಲುಗಳನ್ನು ಉತ್ಪಾದಿಸುವ ಗುರಿಯನ್ನು ರೈಲ್ವೇ ಸಚಿವಾಲಯ ಹೊಂದಿದೆ. ವಂದೇ ಭಾರತ್ 2024 ರ ಮೊದಲ ತ್ರೈಮಾಸಿಕದ ವೇಳೆಗೆ ರೈಲಿನ ಮೊದಲ ಸ್ಲೀಪರ್ ಆವೃತ್ತಿಯನ್ನು ಪರಿಚಯಿಸುವ ಗುರಿಯನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ರೈಲಿನ ನಿರ್ಮಾಣ ಕಾರ್ಯವನ್ನು ವೇಗಗೊಳಿಸಲು, ಭಾರತೀಯ ರೈಲ್ವೆ ಮತ್ತು ಟಾಟಾ ಸ್ಟೀಲ್ ನಡುವೆ ಹಲವಾರು ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಮೊದಲ ದರ್ಜೆಯ ಎಸಿಯಿಂದ ಮೂರು ಹಂತದ ಕೋಚ್‌ಗಳವರೆಗಿನ ಸೀಟುಗಳನ್ನು ಈಗ ಟಾಟಾ ಸ್ಟೀಲ್ ಕಂಪನಿಯು ತಯಾರಿಸಲಿದೆ. ರೈಲ್ವೇ ಪರವಾಗಿ, ಎಲ್‌ಎಚ್‌ಬಿ ಪ್ಲಾಟ್‌ಫಾರ್ಮ್‌ನಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳನ್ನು ತಯಾರಿಸುವ ಗುತ್ತಿಗೆಯನ್ನು ಸಹ ಟಾಟಾ ಸ್ಟೀಲ್‌ಗೆ ನೀಡಲಾಗಿದೆ. ಇದರ ಅಡಿಯಲ್ಲಿ, ಫಲಕಗಳು, ಕಿಟಕಿಗಳು ಮತ್ತು ರೈಲ್ವೆಗಳ ರಚನೆಗಳನ್ನು ಸಿದ್ಧಪಡಿಸಲಾಗುತ್ತಿದೆ.
145 ಕೋಟಿ ರೂಪಾಯಿಗಳ ಟೆಂಡರ್: ಭಾರತೀಯ ರೈಲ್ವೇಯು ವಂದೇ ಭಾರತ್ ರೇಕ್‌ಗಳ ಭಾಗಗಳನ್ನು ತಯಾರಿಸಲು ಟಾಟಾ ಸ್ಟೀಲ್‌ಗೆ ಸುಮಾರು 145 ಕೋಟಿ ರೂಪಾಯಿಗಳ ಟೆಂಡರ್ ಅನ್ನು ನೀಡಿದೆ. 12 ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಬೇಕಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ 22 ರೈಲುಗಳಿಗೆ ಸೀಟ್‌ಗಳನ್ನು ನಿರ್ಮಾಣ ಮಾಡುವ ಆರ್ಡರ್‌ಅನ್ನು ಈ ಕಂಪನಿಯು ಪಡೆದುಕೊಂಡಿದೆ. ಟಾಟಾ ಸ್ಟೀಲ್‌ನ ಕಾಂಪೋಸಿಟ್ಸ್ ವಿಭಾಗವು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸೀಟ್‌ಗಳ 145 ಕೋಟಿ ರೂಪಾಯಿಯ ದೊಡ್ಡ ಟೆಂಡರ್ ಸ್ವೀಕರಿಸಿದ ಬಳಿಕ ಆ ನಿಟ್ಟಿನಲ್ಲಿ ತನ್ನ ಕೆಲವನ್ನೂ ಆರಂಭಿಸಿದೆ. ಪ್ರತಿ ರೈಲು ಸೆಟ್‌ನಲ್ಲಿ 16 ಕೋಚ್‌ಗಳೊಂದಿಗೆ 22 ರೈಲು ಸೆಟ್‌ಗಳಿಗೆ ಸಂಪೂರ್ಣ ಸೀಟುಗಳ ವ್ಯವಸ್ಥೆಯನ್ನು ಟಾಟಾ ಸ್ಟೀಲ್ ಮಾಡಲಿದೆ.
ಕುರುಬನ ರಾಣಿಯ ಖಾತೆಗೆ ಸೈಬರ್ ಕಳ್ಳರ ಕನ್ನ, 1 ಲಕ್ಷ ಕಳೆದುಕೊಂಡ ನಟಿ ನಗ್ಮಾ!
ಈ ನಿಟ್ಟಿನಲ್ಲಿ, ಟಾಟಾ ಸ್ಟೀಲ್‌ನ ಉಪಾಧ್ಯಕ್ಷ (ತಂತ್ರಜ್ಞಾನ ಮತ್ತು ಹೊಸ ವಸ್ತುಗಳ ವ್ಯವಹಾರ) ದೇಬಾಶಿಶ್ ಭಟ್ಟಾಚಾರ್ಯ, “ಈ ರೈಲಿನ ಸೀಟುಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ. ಇದು 180 ಡಿಗ್ರಿಗಳವರೆಗೆ ತಿರುಗಬಲ್ಲದು ಮತ್ತು ವಿಮಾನದಂತಹ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಇವುಗಳು ಭಾರತದಲ್ಲಿ ಇದೇ ರೀತಿಯ ಮೊದಲ ಪ್ರಯಾಣಿಕ ಸೌಕರ್ಯಗಳಾಗಿವೆ. ಮುಂದಿನ 12 ತಿಂಗಳಲ್ಲಿ ಇದನ್ನು ಕಾರ್ಯಗತಗೊಳಿಸಲಾಗುವುದು' ಎಂದಿದ್ದಾರೆ.
ಬ್ಯುಸಿನೆಸ್ ಗಂಧಗಾಳಿ ತಿಳಿಯದ ಮಹಿಳೆಗೆ ರತನ್ ಟಾಟಾ ಬೆಂಬಲ, ಈಗ ಆಕೆ 180 ಕೋಟಿ ಮೌಲ್ಯದ ಕಂಪನಿ ಒಡತಿ!
ರೈಲ್ವೆ ವ್ಯವಹಾರ ಏರಿಸುತ್ತಿರುವ ಟಾಟಾ ಸ್ಟೀಲ್: ಮಾಹಿತಿಯ ಪ್ರಕಾರ, ಟಾಟಾ ಸ್ಟೀಲ್ ರೈಲ್ವೇಯಲ್ಲಿ ತನ್ನ ವ್ಯವಹಾರವನ್ನು ಹೆಚ್ಚಿಸುವಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ರೈಲ್ವೆಯೊಂದಿಗೆ ಸಮನ್ವಯಕ್ಕಾಗಿ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ. ಟಾಟಾ ಸ್ಟೀಲ್ ಮುಂಬೈ-ಅಹಮದಾಬಾದ್ ಕಾರಿಡಾರ್‌ನಲ್ಲಿಯೂ ಟಾಟಾ ಸ್ಟೀಲ್ ಕೆಲಸ ಮಾಡಿದೆ. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಡೆಪ್ಯೂಟಿ ಜಿಎಂ ಆರಾಧನಾ ಲಾಹಿರಿ ಅವರನ್ನು ರೈಲ್ವೇಯೊಂದಿಗಿನ ವ್ಯವಹಾರ ಸಮನ್ವಯಕ್ಕಾಗಿ ಟಾಟಾ ಸ್ಟೀಲ್‌ಗೆ ಹೊಸ ಮೆಟೀರಿಯಲ್ಸ್ ಬ್ಯುಸಿನೆಸ್ ಎಂದು ನಿಯೋಜಿಸಿದೆ. ಅವರು ರೈಲ್ವೆ ವ್ಯವಹಾರ ಯೋಜನೆಯ ಅನುಷ್ಠಾನವನ್ನು ನೋಡಿಕೊಳ್ಳುತ್ತಾರೆ.