ಮೋದಿ ತೈಲದರ 2.50 ರೂ. ಇಳಿಸಿದ್ದೂ ವೇಸ್ಟ್ ಆಯ್ತು!

By Web DeskFirst Published Oct 17, 2018, 3:37 PM IST
Highlights

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ! ರಾಜಧಾನಿ ನವದೆಹಲಿಯಲ್ಲಿ ಆಗಸಕ್ಕೇರಿದ ತೈಲದರ! ಕಳೆದ 11 ದಿನಗಳಲ್ಲಿ ಡೀಸೆಲ್ ಬೆಲೆ 2.51 ರೂ.ನಷ್ಟು ಏರಿಕೆ! ಸರ್ಕಾರ ಪ್ರಕಟಿಸಿದ್ದ 2.50  ರೂ. ಇಳಿಕೆ ಮಂಗಮಾಯ
 

ನವದೆಹಲಿ(ಅ.17): ಪೆಟ್ರೋಲಿಯಂ ಕಂಪನಿಗಳು, ಮತ್ತೆ ತೈಲೆ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲ್ ಬೆಲೆಯಲ್ಲಿ 11 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 23 ಪೈಸೆ ಏರಿಕೆ ಮಾಡಲಾಗಿದೆ.

ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.383 ರೂ. ಹಾಗೂ ಡೀಸೆಲ್ 75.69 ರೂ.ಗೆ ತಲುಪಿದೆ. ಇದರೊಂದಿಗೆ ಕೇಂದ್ರ ಸರ್ಕಾರ ಅ.5ರಂದು ಘೋಷಿಸಿದ್ದ 2.50 ರೂ. ಇಳಿಕೆ ಇದೀಗ ಮಾಯವಾಗಿದೆ. ಅ.5ರ ಬಳಿಕ ಸತತ 11ನೇ ದಿನ ತೈಲ ಕಂಪನಿಗಳು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿವೆ. 

ಕಳೆದ 11 ದಿನಗಳಲ್ಲಿ ಡೀಸೆಲ್ ಬೆಲೆ 2.51 ರೂ.ನಷ್ಟು ಏರಿಕೆಯಾಗಿದೆ. ಇದರೊಂದಿಗೆ ಸರ್ಕಾರ ಪ್ರಕಟಿಸಿದ್ದ 2.50  ರೂ. ಇಳಿಕೆಯ ಲಾಭ ಗ್ರಾಹಕರಿಂದ ಕೈಜಾರಿದಂತಾಗಿದೆ. 

ಅ.5 ರಂದು ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಲೀ.ಗೆ 1.50 ರೂ.ನಷ್ಟು ಇಳಿಸಿತ್ತು. ಜೊತೆಗೆ ತೈಲ ಕಂಪನಿಗಳಿಗೆ 1 ರೂ. ಹೊರೆ ಹೊತ್ತುಕೊಳ್ಳುವಂತೆ ಸೂಚಿಸಿತ್ತು. ಹೀಗಾಗಿ ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಲೀ. 2.50ರೂ. ನಷ್ಟು ಕಡಿಮೆಯಾಗಿತ್ತು. ಆದರೆ, ನಂತರದ 11 ದಿನಗಳಲ್ಲಿ ಡೀಸೆಲ್ ಬೆಲೆ ಮತ್ತೆ ಲೀ.ಗೆ 2.51ರೂ. ನಷ್ಟು ಏರಿಕೆಯಾಗಿದೆ.
 

click me!