ಬಿಟ್ ಕಾಯಿನ್ ನಿಷೇಧಕ್ಕೆ ಸಮಿತಿ ರಚಿಸಿಲ್ಲ ಎಂದ ಆರ್‌ಬಿಐ

Published : Jun 13, 2018, 05:05 PM IST
ಬಿಟ್ ಕಾಯಿನ್ ನಿಷೇಧಕ್ಕೆ ಸಮಿತಿ ರಚಿಸಿಲ್ಲ ಎಂದ ಆರ್‌ಬಿಐ

ಸಾರಾಂಶ

ಬಿಟ್ ಕಾಯಿನ್ ಮೇಲೆ ನಿಗಾವಹಿಸಲು ಆಂತರಿಕ ಸಮಿತಿ ಇಲ್ಲ ಆರ್‌‌ಐಟಿ ಅರ್ಜಿಗೆ ಆರ್‌ಬಿಐ ಸ್ಪಷ್ಟ ಉತ್ತರ ಹಣಕಾಸು ಸಚಿವಾಲಯದ ಸಮಿತಿಯಲ್ಲಿ ಆರ್‌ಬಿಐ ಪ್ರತಿನಿಧಿಗಳು ಕ್ರಿಫ್ಟಾ ಕರೆನ್ಸಿ ನಿಷೇಧದ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ  

ನವದೆಹಲಿ(ಜೂ.13): ಬಿಟ್ ಕಾಯಿನ್ ಮೇಲೆ ನಿಗಾ ವಹಿಸಲು ಯಾವುದೇ ರೀತಿಯ ಆಂತರಿಕ ಸಮಿತಿಯನ್ನು ರಚನೆ ಮಾಡಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಕಳೆದ ಏಪ್ರಿಲ್ ನಲ್ಲೇ ಆರ್‌ಬಿಐ ಬಿಟ್ ಕಾಯಿನ್ ಮೇಲೆ ನಿಷೇಧ ಹೇರಿದ್ದು, ಬಿಟ್‌‌ ಕಾಯಿನ್‌ ವಿನಿಮಯದಿಂದ ಹಿಂದೆ ಸರಿಯುವುದು ಕಡ್ಡಾಯ ಎಂದು ಬ್ಯಾಂಕ್‌ಗಳು, ಇ-ವಾಲೆಟ್‌ಗಳಿಗೆ ಸೂಚನೆ ನೀಡಿತ್ತು. 

ಆದರೆ ಸ್ಟಾರ್ಟ್ ಅಪ್ ಸಲಹೆಗಾರ ವರುಣ್‌ ಸೇಥಿ ಎಂಬುವವರು ಸಲ್ಲಿಸಿದ್ದ ಆರ್‌‌ಐಟಿ ಅರ್ಜಿಗೆ ಉತ್ತರಿಸಿರುವ ಆರ್‌ಬಿಐ, ಬಿಟ್‌‌ ಕಾಯಿನ್‌ ವ್ಯವಹಾರದ ಕುರಿತು ನಿಗಾವಹಿಸಲು ಯಾವುದೇ ರೀತಿಯ ಆಂತರಿಕ ಸಮಿತಿ ರಚನೆ ಮಾಡಿಲ್ಲ ಎಂದು ಹೇಳಿದೆ.

ಆದರೆ ಭಾರತದಲ್ಲಿ ಬಿಟ್‌‌ ಕಾಯಿನ್‌ ವ್ಬಯವಹಾರದ ಬಗೆಗಿನ ಅಧ್ಯಯನದ ಬಗ್ಗೆ ಹಣಕಾಸು ಸಚಿವಾಲಯದಡಿ ರಚಿಸಲಾಗಿರುವ ಎರಡು ಪ್ರತ್ಯೇಕ ಸಮಿತಿಗಳಲ್ಲಿ ಆರ್‌ಬಿಐ ಪ್ರತಿನಿಧಿಗಳು ಪಾಲ್ಗೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹವಾಗಿದೆ. 

ಕ್ರಿಫ್ಟಾ ಕರೆನ್ಸಿ ಬಳಕೆ ಹಾಗೂ ವ್ಯವಹಾರಗಳ ನಿಷೇಧದ ಕುರಿತಂತೆ ಸುಪ್ರೀಂ ಕೋರ್ಟ್‌ನಲ್ಲೂ ವಿಚಾರಣೆ ನಡೆಯುತ್ತಿದ್ದು, ಜುಲೈ 20ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. 2018ರ ಬಜೆಟ್‌ ವೇಳೆ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಬಿಟ್‌ ಕಾಯಿನ್‌ ವ್ಯವಹಾರ ಕಾನೂನು ಬದ್ಧವಲ್ಲ. ಅಂತಹ ವ್ಯವಹಾರಕ್ಕೆ ಭಾರತದಲ್ಲಿ ಯಾವುದೇ ಮಾನ್ಯತೆ ಇಲ್ಲ ಎಂದು ಘೋಷಿಸಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ
ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ