Changes In GST:ಜನವರಿ 1ರಿಂದ ಪರೋಕ್ಷ ತೆರಿಗೆ ಪದ್ಧತಿ ಬಿಗಿ; ಜಿಎಸ್ ಟಿಯಲ್ಲಿ 12 ಬದಲಾವಣೆಗಳು

By Suvarna News  |  First Published Dec 23, 2021, 4:41 PM IST

*CGST ಕಾಯ್ದೆಯಲ್ಲಿ 12 ತಿದ್ದುಪಡಿಗಳ ಜಾರಿಗೆ ತೀರ್ಮಾನಿಸಿದ ಕೇಂದ್ರ ಸರ್ಕಾರ 
*ಈ ವರ್ಷದ ಪ್ರಾರಂಭದಲ್ಲಿ ಸಂಸತ್ತಿನಲ್ಲಿ ಅನುಮೋದನೆಗೊಂಡ ಹಣಕಾಸು ಕಾಯ್ದೆ 2021ರ ಭಾಗವಾಗಿ ಈ ಬದಲಾವಣೆ
*ತೆರಿಗೆ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕ್ರೆಡಿಟ್ ಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲಾಗಿದೆ


ನವದೆಹಲಿ (ಡಿ.23): ಕೇಂದ್ರೀಯ ಸರಕು ಹಾಗೂ ಸೇವಾ ತೆರಿಗೆ (CGST)ಕಾಯ್ದೆಗೆ ಜನವರಿ 1ರಿಂದ 12 ತಿದ್ದುಪಡಿಗಳನ್ನು(amendments) ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪರೋಕ್ಷ ತೆರಿಗೆ (  indirect tax) ಪದ್ಧತಿಯನ್ನು ಇನ್ನಷ್ಟು ಬಿಗಿಗೊಳಿಸಲು ಮುಂದಾಗಿದೆ. 

ಈ ವರ್ಷದ ಪ್ರಾರಂಭದಲ್ಲಿ ಸಂಸತ್ತಿನಲ್ಲಿ(Parliament) ಅನುಮೋದನೆಗೊಂಡ ( passed) ಹಣಕಾಸು ಕಾಯ್ದೆ  (Finance Act) 2021ರ ಭಾಗವಾಗಿ  CGSTಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಆದ್ರೆ ಇದರ ಅನುಷ್ಠಾನದ ದಿನಾಂಕವನ್ನು ಮಾತ್ರ ಈಗ ಘೋಷಿಸಲಾಗಿದೆ. ಪೂರೈಕೆ ಮೇಲಿನ ತೆರಿಗೆ,ತೆರಿಗೆ ಸಂದಾಯದ ಅರ್ಹತೆಗಳು ಹಾಗೂ ನಿರ್ದಿಷ್ಟ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಕೆ ನಿಯಮಗಳು ಸೇರಿದಂತೆ ಬದಲಾವಣೆಗಳಲ್ಲಿ ಸಾಕಷ್ಟು ವಿಷಯಗಳನ್ನು ಸೇರಿಸಲಾಗಿದೆ. ಇದರಲ್ಲಿನ ಒಂದು ತಿದ್ದುಪಡಿ ಪ್ರಕಾರ ವ್ಯಕ್ತಿಯೊಬ್ಬ ವೈಯಕ್ತಿಕವಲ್ಲದೆ ಸದಸ್ಯರಿಗೆ ನಗದು, ಕಂತುಗಳಲ್ಲಿ ಅಥವಾ ಇತರ ಮೌಲ್ಯಯುತ ವಸ್ತುಗಳನ್ನು ವರ್ಗಾವಣೆ ಮಾಡಿದ್ರೆ ಅದನ್ನು ತೆರಿಗೆಯುಕ್ತ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಅದೇರೀತಿ ಸಂಸ್ಥೆಗಳ ಜೊತೆ ಇಂಥ ವಹಿವಾಟು ನಡೆಸಿದ್ರೆ ಕೂಡ ಅದನ್ನು ಇದೇ ರೀತಿಯಲ್ಲಿ ಪರಿಗಣಿಸಲಾಗುತ್ತದೆ. ಹೀಗಾಗಿ ತಜ್ಞರ ಪ್ರಕಾರ ಇನ್ನು ಮುಂದೆ ಎಲ್ಲ ಕ್ಲಬ್ ಗಳು ಹಾಗೂ ಸಂಘಟನೆಗಳು ತಮ್ಮ ಸದಸ್ಯರ ಜೊತೆ ನಡೆಸೋ ವಹಿವಾಟುಗಳು ಕೂಡ ಜಿಎಸ್ ಟಿ ವ್ಯಾಪ್ತಿಗೊಳಪಡುತ್ತವೆ, 

Tap to resize

Latest Videos

undefined

Business 2021: ಕೊರೋನಾ ಕಲಿಸಿದ ಪಾಠ; ಆರೋಗ್ಯ ವಿಮೆ, ಟರ್ಮ್ ಇನ್ಯುರೆನ್ಸ್ ಗೆ ಭಾರೀ ಬೇಡಿಕೆ

ಜನವರಿಯಿಂದ ಜಾರಿಗೆ ಬರೋ ಜಿ ಎಸ್ ಟಿಯಲ್ಲಿ ಇನ್ನೊಂದು ಮುಖ್ಯವಾದ ಬದಲಾವಣೆ ಅಂದ್ರೆ ಕಚ್ಚಾ ವಸ್ತುಗಳು ಹಾಗೂ ಇತರ ಸೇವೆಗಳಿಗೆ ಸಂಬಂಧಿಸಿ ಉದ್ಯಮಿಗಳು ಪಾವತಿಸೋ ತೆರಿಗೆಗೆ ನೀಡೋ ಗ್ರ್ಯಾಂಟ್ ಆಫ್ ಕ್ರೆಡಿಟ್ಸ್ ಗೆ  (grant of credits) ಸಂಬಂಧಿಸಿದ್ದು. ಈ ನಿಯಮವನ್ನು ಸರ್ಕಾರ ಇನ್ನಷ್ಟು ಬಿಗಿಗೊಳಿಸಲಿದೆ.  ಯಾವುದೇ ಒಂದು ವಸ್ತುವಿನ ಮಾರಾಟಗಾರ ತನ್ನ ಮಾಸಿಕ ಮಾರಾಟ ರಿಟರ್ನ್‌ನಲ್ಲಿ (monthly sales return)ಇನ್ ವಾಯ್ಸ್ (INvoice)ಮಾಹಿತಿ ಬಹಿರಂಗಪಡಿಸದಿದ್ರೆ  ಖರೀದಿದಾರ ಆ ವಸ್ತುವಿಗೆ ಪಾವತಿಸಿದ ತೆರಿಗೆ ಮೇಲೆ ಯಾವುದೇ ಕ್ರೆಡಿಟ್(Credit) ಪಡೆಯಲು ಸಾಧ್ಯವಾಗೋದಿಲ್ಲ.

ತೆರಿಗೆ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ತೆರಿಗೆ ಕ್ರೆಡಿಟ್ ಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಿದ್ದಾರೆ. ಕೆಲವು ಸಂಸ್ಥೆಗಳು ನಕಲಿ ಇನ್ ವಾಯ್ಸ್ ಸೃಷ್ಟಿಸೋ ಮೂಲಕ  ಪರೋಕ್ಷ ತೆರಿಗೆಯನ್ನು ವಂಚಿಸುತ್ತಿರೋದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಸರ್ಕಾರ ಮಾಸಿಕ ಮಾರಾಟ ರಿಟರ್ನ್ಸ್ನಲ್ಲಿ ಮಾರಾಟ ಮಾಡಿದ ಪ್ರತಿ ವಸ್ತುವಿನ ಇನ್ ವಾಯ್ಸ್ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸುವಂತೆ ನಿಯಮವನ್ನು ಬಿಗಿಗೊಳಿಸಿದೆ.

Forbes 30 under 30 list: 26 ವಯಸ್ಸಿನ ಭಾರತೀಯನ ಅಪ್ರತಿಮ ಸಾಧನೆ; ಫೋಬ್ಸ್ ಪಟ್ಟಿಯಲ್ಲಿ ಉದ್ಯಮಿ ಅಶ್ವಿನ್ ಶ್ರೀನಿವಾಸ್

ವರದಿ ವಿಧಾನ ಹಾಗೂ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳೋ ಮೂಲಕ ತೆರಿಗೆ ಅನುಸರಣೆಯನ್ನು ಉತ್ತಮಗೊಳಿಸೋದು ಈ ಕ್ರಮದ ಹಿಂದಿನ ಉದ್ದೇಶವಾಗಿದೆ. ಅಲ್ಲದೆ, ಇದು ಕಾನೂನುಬದ್ಧವಾಗಿ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸೋ  ಪೂರೈಕೆದಾರರಿಂದ ಸರಕು ಹಾಗೂ ಸೇವೆಗಳನ್ನು ಖರೀದಿಸಲು ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತದೆ. ನಿಯಮಗಳನ್ನು ಉಲ್ಲಂಘನೆ ಮಾಡಿ ಸರಕುಗಳನ್ನು ಸಂಗ್ರಹಿಸಿದ ಅಥವಾ ಸಾಗಾಟ ಮಾಡಿದ ಆರೋಪದಲ್ಲಿ  ದಾಳಿ ನಡೆಸಿದ ಆಧಿಕಾರಿಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಉದ್ಯಮಗಳು ಶೇ.25ರಷ್ಟು ದಂಡ ವಿಧಿಸೋ ನಿಯಮ ಕೂಡ ಜನವರಿ 1ರಿಂದ ಜಾರಿಗೆ ಬರಲಿದೆ.  ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಿ ಎಸ್ಟಿ ಪದ್ಧತಿಯಲ್ಲಿ ಸುಧಾರಣೆ ತರೋ ವಿಚಾರದಲ್ಲಿ ಕಾರ್ಯನಿರತವಾಗಿವೆ. ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಸಚಿವರ ಪ್ಯಾನಲ್ ಜಿ ಎಸ್ ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರೋ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. 
 

click me!