ಅಮೆಜಾನ್ ಹಿಂದಿ ವೆಬ್‌ಸೈಟ್ ಲಾಂಚ್: ಕನ್ನಡದಲ್ಲೂ ಮಾಡುತ್ತಾ?

By Web DeskFirst Published Sep 5, 2018, 3:53 PM IST
Highlights

ಫ್ಲಿಪ್ ಕಾರ್ಟ್ ಗೆ ಸೆಡ್ಡು ಹೊಡೆಯಲು ಅಮೆಜಾನ್ ಹೊಸ ಪ್ಲ್ಯಾನ್! ಹಿಂದಿ ಭಾಷೆಯಲ್ಲಿ ಅಮೆಜಾನ್ ವೆಬ್‌ಸೈಟ್, ಆ್ಯಪ್‌ ಲಾಂಚ್! ಭಾರತದಲ್ಲಿ ವೇಗ ಪಡೆದ ಇ-ಕಾಮರ್ಸ್ ಯುದ್ಧ! ನಗರ ಮತ್ತು ಗ್ರಾಮೀಣ ಗ್ರಾಹಕರನ್ನು ಸೆಳೆಯಲು ಅಮೆಜಾನ್ ತಂತ್ರ

ನವದೆಹಲಿ(ಸೆ.5): ಫ್ಲಿಪ್ ಕಾರ್ಟ್ ಗೆ ಪೈಪೋಟಿ ನೀಡಲು ಇನ್ನಿಲ್ಲದ ಕಸರತ್ತು ನಡೆಸಿರುವ ಅಮೆಜಾನ್ ಇಂಡಿಯಾ, ಗ್ರಾಹಕರ ಮನಸೆಳೆಯುವ ನಿಟ್ಟಿನಲ್ಲಿ ಹಿಂದಿ ವೆಬ್‌ಸೈಟ್ ಹಾಗೂ ಆ್ಯಪ್‌ ಗೆ ಚಾಲನೆ ನೀಡಿದೆ. 

ಭಾರತದಲ್ಲಿ ಅತಿ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ-ಕಾಮರ್ಸ್ ಯುದ್ಧದಲ್ಲಿ ಪ್ರಾಬಲ್ಯ ಮೆರೆಯಲು, ಅಮೆಜಾನ್ ಸ್ಥಳೀಯ ಭಾಷೆಗಳಿಗೆ ಮಹತ್ವ ನೀಡಲು ಮುಂದಾಗಿದೆ. ಅದರ ಮೊದಲ ಭಾಗವಾಗಿ ಸದ್ಯ ಹಿಂದಿ ಭಾಷೆಯಲ್ಲಿ ವೆಬ್‌ಸೈಟ್ ಮತ್ತು ಆ್ಯಪ್‌ ಲಾಂಚ್ ಮಾಡಿದೆ.

ಫ್ಲಿಪ್ ಕಾರ್ಟ್ ಸ್ನ್ಯಾಪ್ ಡೀಲ್, ಪೇಟಿಎಂ ಮಾಲ್ ಸೇರಿದಂತೆ ಭಾರತದಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವ ಯಾವುದೇ ಇ-ಕಾಮರ್ಸ್ ಸಂಸ್ಥೆಗಳು ಸ್ಥಳೀಯ ಭಾಷೆಗಳಲ್ಲಿ ವೆಬ್‌ಸೈಟ್ ಗಳನ್ನು ಹೊಂದಿಲ್ಲ. 

ಅಮೆಜಾನ್ ಇಂಡಿಯಾ ಹಿಂದಿಯಲ್ಲಿ ವೆಬ್‌ಸೈಟ್ ಗೆ ಚಾಲನೆ ನೀಡಿರುವುದರಿಂದ ಭಾರತದ ಸಣ್ಣ ನಗರ ಪ್ರದೇಶಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಲವು ಹೊಸ ಗ್ರಾಹಕರನ್ನು ತನ್ನತ್ತ ಸೆಳೆಯುವುದಕ್ಕೆ ಸಾಧ್ಯವಾಗಲಿದೆ ಎಂಬ ನಿರೀಕ್ಷೆ ಇದೆ. 

click me!