ಭಾರತದಲ್ಲಿ ಇನ್ಮುಂದೆ ಇರಲ್ಲ ನಗದು ಹಣ, ಮಹತ್ವದ ಸುಳಿವು ಕೊಟ್ಟ ಆರ್‌ಬಿಐ ಗವರ್ನರ್!

By Chethan Kumar  |  First Published Oct 27, 2024, 7:07 PM IST

ಭಾರತದಲ್ಲಿ ಇನ್ಮುಂದೆ ನಗದು ಹಣ ಇರುವುದಿಲ್ಲ.  ವ್ಯವಹಾರ ಯಾವುದೇ ಆಗಿರಲಿ, ಕ್ಯಾಶ್ ಕೊಡುವ, ತೆಗೆದುಕೊಳ್ಳುವ ಪ್ರಮೇಯ ಇಲ್ಲ.ಈ ಮಾತನ್ನು ಹೇಳಿದ್ದು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್. 


ನವದೆಹಲಿ(ಅ.27) ಭಾರತದ ಜಾಗತಿಕ ಮಟ್ಟದಲ್ಲಿ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಭಾರತದಲ್ಲಿ ತೆಗೆದುಕೊಂಡ ಕೆಲ ಮಹತ್ವದ ನಿರ್ಧಾರಗಲು ಜಾಗತಿಕ ಮಟ್ಟದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. ಈ ಪೈಕಿ ನರೇಂದ್ರ ಮೋದಿ ಸರ್ಕಾರದ ತಂದ ಡಿಜಿಟಲ್ ಇಂಡಿಯಾ ಅತ್ಯಂತ ಮುಖ್ಯ. ಇದೀಗ ಭಾರತ ಮತ್ತೊಂದು ಹಂತದ ಬದಲಾವಣೆಗೆ ತೆರೆದುಕೊಳ್ಳುತ್ತಿದೆ. ಇದು ಜಗತ್ತನ್ನೇ ಬೆರಗಾಗಿಸುವ ಹಾಗೂ ಅನುಸರಿಸುವ ಬದಲಾವಣೆ. ಹೌದು, ಭಾರತದಲ್ಲಿ ಇನ್ನು ನಗದು ಹಣ ಇರುವುದಿಲ್ಲ. ಆರ್‌ಬಿಐ ನೋಟು ಪ್ರಿಂಟ್ ಮಾಡುವ ಪ್ರಮೇಯವೂ ಇಲ್ಲ. ಯಾರ ಬಳಿಯೂ ನಗದು ಹಣ ಇರಲ್ಲ, ವ್ಯವಹಾರವೂ ಇರುವುದಿಲ್ಲ. ಏನಿದ್ದರೂ ಡಿಜಿಟಲ್ ಕರೆನ್ಸಿ ಮಾತ್ರ. ಈ ಮಾತನ್ನು ಭಾರತದ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಕೋಲ್ಕತಾದಲ್ಲಿ ನಡೆದ ವಾರ್ಷಿಕ ಜಿ30 ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸೆಮಿನಾರ್‌ನಲ್ಲಿ ಮಾತನಾಡಿದ ಶಕ್ತಿಕಾಂತ ದಾಸ್ ಈ ಸ್ಫೋಟಕ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಇನ್ಮುಂದೆ ನಗದು ಹಣ ಇರುವುದಿಲ್ಲ, ನಗದು ವಹಿವಾಟುಗಳು ಇರುವುದಿಲ್ಲ. ಎಲ್ಲವೂ ಡಿಜಿಟಲ್ ಕರೆನ್ಸಿ ಎಂದಿದ್ದಾರೆ. ನಾವು ಭವಿಷ್ಯದ ಡಿಜಿಟಲ್ ಕರೆನ್ಸಿಯಿಂದ ಪಲಾಯನ ಮಾಡಲು ಸಾಧ್ಯವಿಲ್ಲ.

Tap to resize

Latest Videos

ಮಿಸ್ಟೇಕ್ ಆಗಿ ನಿಮಗೆ UPI ಪಾವತಿ ಮೂಲಕ ಹಣ ಬಂದಿದೆಯಾ? ಎಚ್ಚರ ಇದು ಅತೀ ದೊಡ್ಡ ವಂಚನೆ!

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ(CBDC)ಯಿಂದ ಅಂತಾರಾಷ್ಟ್ರೀಯ ಪಾವತಿಗಳು ಅತ್ಯಂತ ಸುಲಭವಾಗಿ ನಡೆಯಲಿದೆ. ಜೊತೆಗೆ ಈ ಪಾವತಿ ಹೆಚ್ಚು ಪರಿಣಮಕಾರಿಯಾಗಿದೆ. ವೆಚ್ಚ ಕಡಿಮೆ, ಹಣ ವರ್ಗಾವಣೆ, ವ್ಯವಹಾರದಲ್ಲಿ ವೆಚ್ಚಗಳು ಇರುವುದಿಲ್ಲ. ನೇರವಾಗಿ ಹಾಗೂ ತ್ವರಿತವಾಗಿ ಪಾವತಿ ಮಾಡಲು ಸಾಧ್ಯವಾಗುತ್ತದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ. ಇತರ ದೇಶ ಕೂಡ ಡಿಜಿಟಲ್ ಕರೆನ್ಸಿ ಅಳವಡಿಸಿಕೊಂಡರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಸಮಸ್ಯೆಗಲು ಉದ್ಭವ ವಾಗುವುದಿಲ್ಲ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಈ ತಂತ್ರಜ್ಞಾವನ್ನು ಭಾರತ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನವಾಗಿರುವ ಕಾರಣ ಇದು ಭವಿಷ್ಯವಾಗಲಿದೆ ಎಂದು ಶಕ್ತಿಕಾಂತ್ ಹೇಳಿದ್ದಾರೆ. 

ಭಾರತದಲ್ಲಿ ಹಣದ ವ್ಯವಹಾರ ಇದೀಗ ಯುಪಿಐ ಮೂಲಕವೇ ಹೆಚ್ಚಾಗಿ ನಡೆಯುತ್ತಿದೆ. ವರ್ಗಾವಣೆ,ಖರೀದಿ ಸೇರಿದಂತೆ ಎಲ್ಲಾ ವಹಿವಾಟಗಳು ಸುಲಭವಾಗಿ ಯುಪಿಐ ಮೂಲಕ ನಡೆಯುತ್ತಿದೆ. ಈ ಡಿಜಿಟಲ್ ಟ್ರಾನ್ಸಾಕ್ಷನ್ ಸಂಪೂರ್ಣವಾಗಿ ಭಾರತ ಆವರಿಸಿಕೊಳ್ಳಲಿದೆ. ಈ ಡಿಜಿಟಲ್ ವಹಿವಾಟಿಗೆ ಮತ್ತಷ್ಟು ಸುರಕ್ಷತೆ ಒದಗಿಸಲು ಎಲ್ಲಾ ತಯಾರಿಗಳು ನಡೆಯುತ್ತಿದೆ. ಭಾರತದಲ್ಲಿ ಸದ್ಯ 1 ಬಿಲಿಯನ್ ವಹಿವಾಟು ಯುಪಿಐ ಮೂಲಕ ನಡೆಯುತ್ತಿದೆ. ಇದು ಮುಂದಿನ ವರ್ಷಕ್ಕೆ ದುಪ್ಪಟ್ಟಾಗಲಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

ಭಾರತದ ಎಲ್ಲಾ ಕ್ಷೇತ್ರಗಳಲ್ಲಿ ಯುಪಿಐ ಪೇಮೆಂಟ್ ಅಥವಾ ಡಿಜಿಟಲ್ ಕರೆನ್ಸಿ ಪ್ರವೇಶ ಮಾಡಿದೆ. ಹಳ್ಳಿ ಹಳ್ಳಿಗಳಲ್ಲೂ ಇದೀಗ ಡಿಜಿಟಲ್ ಕರೆನ್ಸಿ ಮೂಲಕವೇ ವ್ಯವಹಾರ ನಡೆಯುತ್ತಿದೆ. ಸದ್ಯ ಇದು ಸಂಪೂರ್ಣವಾಗಿ ಆವರಿಸಿಕೊಂಡಿಲ್ಲ. ಆದರೆ ಹಂತ ಹಂತವಾಗಿ ಭಾರತದ ಎಲ್ಲೆಡೆ ನಗದು ವ್ಯವಹಾರ ಸಂಪೂರ್ಣವಾಗಿ ನಿಂತು ಹೋಗಲಿದೆ. ಇತ್ತ ನೋಟುಗಳು, ನಾಣ್ಯಗಳ ಚಲಾವಣೆ ಬಂದ್ ಆಗಲಿದೆ. ಎಲ್ಲವೂ ಡಿಜಿಟಲ್ ಕರೆನ್ಸಿ ಮೂಲಕವೇ ನಡೆಯಲಿದೆ ಅನ್ನೋದು ಶಕ್ತಿಕಾಂತ ದಾಸ್ ಅಭಿಪ್ರಾಯ.

UPI ಮೂಲಕ ವಹಿವಾಟು ಮಾಡುವವರಿಗೆ RBIನಿಂದ ದೀಪಾವಳಿ ಉಡುಗೊರೆ!

ಭಾರತದ ನಕಲಿ ನೋಟುಗಳು ಚಲಾವಣೆಯಾಗುತ್ತಿದೆ. ಆರ್‌ಬಿಐ ಈ ಕುರಿತು ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಸಂಪೂರ್ಣವಾಗಿ ನಕಲಿ ನೋಟು ಹಾವಳಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಇವೆಲ್ಲವನ್ನು ಪರಿಣಗಣಿಸಿ ಭವಿಷ್ಯದಲ್ಲಿ ಸುರಕ್ಷತೆ ಹಾಗೂ ಸುಭದ್ರ ವಹಿವಾಟಿಗೆ ಡಿಜಿಟಲ್ ಕರೆನ್ಸಿ ಅತ್ಯಗತ್ಯ. ಸದ್ಯ ಭಾರತ ಡಿಜಿಟಲ್ ಕರೆನ್ಸಿ ವಹಿವಾಟಿನಲ್ಲಿ ಮುಂದಿದೆ. ಬಹುತೇಕ ವ್ಯವಹಾರಗಳು ಡಿಜಿಟಲ್ ಕರೆನ್ಸಿ ಮೂಲಕವೇ ನಡೆಯುತ್ತಿದೆ. ಇದು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ವ್ಯಾಪಿಸಲಿದೆ ಎಂದು ಶಕ್ತಿಕಾಂತ ದಾಸ್ ಹೇಳಿದ್ದರೆ. 
 

click me!