
ನವದೆಹಲಿ(ಫೆ.01): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2020ನ್ನು ಮಂಡಿಸುತ್ತಿದ್ದಾರೆ. ಬಜೆಟ್ ಆರಂಭದಲ್ಲೇ ಕೃಷಿ ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡಿರುವ ನಿರ್ಮಲಾ ಸೀತಾರಾಮನ್, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ 16 ಸೂತ್ರಗಳನ್ನು ಮುಂದಿಟ್ಟಿದ್ದಾರೆ.
ಕೃಷಿ ಕ್ಷೇತ್ರಕ್ಕೆ ಒಟ್ಟು2 .83 ಲಕ್ಷ ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದ್ದು, ಗ್ರಾಮೀಣಾಭಿವರದ್ಧಿಗೆ 1.23 ಲಕ್ಷ ಕೋಟಿ ರೂ. ಅನುದಾನ ನೀಡಲಾಗಿದೆ.
ಕಾಶ್ಮೀರಿ ಭಾಷೆಯಲ್ಲಿ ಬಜೆಟ್ ಆರಂಭಿಸಿದ ನಿರ್ಮಲಾ: ದಂಗಾದ ಲೋಕಸಭೆ!
16 ಸೂತ್ರಗಳು ಇಂತಿವೆ....
1. ರೈತ ಮಹಿಳೆಯರಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ ಜಾರಿ
2. ರೈತರಿಗಾಗಿ ಕೃಷಿ ರೈಲ್, ಕೃಷಿ ಉಡಾನ್ ಯೋಜನೆ ಜಾರಿ
3. 100 ಬರ ಪೀಡಿತ ಜಿಲ್ಲೆಗಳಿಗೆ ವಿಶೇಷ ಒತ್ತು ನೀಡಲಾಗುವುದು
4. 20 ಲಕ್ಷ ರೈತರಿಗೆ ಸೋಲಾರ್ ಪಂಪ್ ವಿತರಣೆ
5. ಬರಡು ಭೂಮಿಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಗುರಿ
6. ನೀರಿನ ಕೊರತೆ ನೀಗಿಸಲು 100 ಜಿಲ್ಲೆಗಳಿಗೆ ವಿಶೇಷ ಯೋಜನೆ
7. 6.11 ಕೋಟಿ ರೈತರಿಗೆ ವಿಮಾ ಯೋಜನೆ ಜಾರಿಯಾಗಿದೆ
8. ನಬಾರ್ಡ್ ಗೆ 15 ಲಕ್ಷ ಕೋಟಿ ರೂಪಾಯಿ ಘೋಷಣೆ
9. ಶೂನ್ಯ ಬಂಡವಾಳ ಕೃಷಿ ಪದ್ಧತಿಗೆ ಜೈವಿಕ್ ಖೇತಿ ಯೋಜನೆ'
10.ಸಾಗರ ಮಿತ್ರ ಯೋಜನೆಡಿ 500 ಸಹಕಾರ ಸಂಘಗಳ ಸ್ಥಾಪನೆ
11. ಹೈನುಗಾರಿಕೆಗೂ ನರೇಗಾ ಯೋಜನೆ ವಿಸ್ತರಣೆ
12. 6.11 ಕೋಟಿ ರೈತರಿಗೆ ವಿಮಾ ಯೋಜನೆ
13. ಬ್ಯಾಂಕೇತರ ಸಂಸ್ಥೆಗಳಮೂಲಕ ರೈತರಿಗೆ 15 ಲಕ್ಷ ಕೋಟಿ ರೂ. ಸಾಲ
14. ರಸಗೊಬ್ಬರ ಬಳಕೆ ಹಾಗೂ ನಿರ್ವಹಣೆಗೆ ಹೊಸ ಸೂತ್ರ ಜಾರಿ
15. ಶೂನ್ಯ ಕೃಷಿ ಯೋಜನೆಗೆ 2020 ಬಜೆಟ್ ನಲ್ಲಿ ಪ್ರಾಧಾನ್ಯತೆ
16. ದೀನ್ ದಯಾಳ್ ಅಂತ್ಯೋದಯ ಯೋಜನೆ ವಿಸ್ತರಣೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.