
ನವದೆಹಲಿ(ಫೆ.01): ಕೇಂದ್ರ ಬಜೆಟ್‌ಗೆ ಕ್ಷಣಗಣನೆ ಶುರುವಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಪ್ರತಿಯೊಂದಿಗೆ ಸಂಸತ್ತು ತಲುಪಿದ್ದಾರೆ. ಈಗಾಗಲೇ ಬಜೆಟ್ ಪ್ರತಿಗಳ ಹಂಚಿಕೆ ಆರಂಭವಾಗಿದೆ.
ಫೆ.1 ರಂದು ಮಂಡನೆಯಾಗುತ್ತಿರುವ ಕೇಂದ್ರ ಬಜೆಟ್ ನಲ್ಲಿ ಆರ್ಥಿಕ ಬೆಳವಣಿಗೆ, 2025 ಕ್ಕೆ 5 ಟ್ರಿಲಿಯನ್ ಆರ್ಥಿಕತೆಯಾಗುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉದ್ದೇಶಗಳಿಗೆ ಉತ್ತೇಜನಕಾರಿಯಾಗುವಂತಹ ಘೋಷಣೆಗಳಿರಲಿವೆ ಎಂದು ಅಂದಾಜಿಸಲಾಗಿದೆ.
ಕಾರ್ಪೊರೇಟ್ ಟ್ಯಾಕ್ಸ್ ಕಡಿತ, ಹೆಚ್ಚುವರಿ ಎಫ್‌ಡಿಐ ನ ಒಳಹರಿವಿಗೆ ಅವಕಾಶ, ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಸೇರಿದಂತೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಇವುಗಳನ್ನು ಮತ್ತಷ್ಟು ವೇಗವಾಗಿ ಜಾರಿಗೆ ತರುವುದು ಸರ್ಕಾರದ ನಿರ್ಧಾರವಾಗಿದೆ.
'ಬಹೀ ಖಾತಾ' ಎಂಬ ಅಕ್ಷಯ ಪಾತ್ರೆ: ಸಂಸತ್ತಿಗೆ ಬಂತು ನಿರ್ಮಲಾ ದಂಡಯಾತ್ರೆ!
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್ ತೆರಿಗೆ ಕಡಿತದ ನಂತರ ಈ ವರ್ಷದ ಬಜೆಟ್‌ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಕಡಿತ, ಬೇಸಿಕ್ ಎಕ್ಸೆಮ್ಷನ್ ಲಿಮಿಟ್ ಹಾಗೂ ಹೆಚ್ಚಿನ ಆದಾಯ ಹೊಂದಿರುವವರಿಗೆ ವಿಭಿನ್ನ ತೆರಿಗೆ ವ್ಯವಸ್ಥೆ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.