
ನವದೆಹಲಿ(ನ.16): ದೇಶದ ಆರ್ಥಿಕತೆ ಮಂದಗತಿಯಲ್ಲಿರುವುದನ್ನು ಬಹಿರಂಗವಾಗಿ ಒಪ್ಪಿಕೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ಷಿಪ್ರಗತಿಯ ಆರ್ಥಿಕ ಬೆಳವಣಿಗೆ ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್‌ನಲ್ಲಿ 20 ಬಿಲಿಯನ್ ಡಾಲರ್ ಮೌಲ್ಯದ ಕಾರ್ಪೋರೇಟ್ ತೆರಿಗೆ ಕಡಿತದ ಬಳಿಕ, ಹೊಸ ಹೂಡಿಕೆಗಳಿಗೆ ಕಂಪನಿಗಳು ಯೋಚಿಸುತ್ತಿವೆ. ಆದರೆ ವಾಸ್ತವಿಕವಾಗಿ ಈ ಹೂಡಿಕೆಗಳು ಕಾರ್ಯರೂಪಕ್ಕೆ ಬರಲು ಇನ್ನೂ ಸ್ವಲ್ಪ ಸಮಯ ಬೇಕು ಎಂದು ನಿರ್ಮಲಾ ಹೇಳಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟು: ನಿರ್ಮಲಾ ಬಿಚ್ಚಿಟ್ಟರು ಪರಿಹಾರದ ಗುಟ್ಟು!
2013ರಿಂದಲೂ ಕುಸಿತದಲ್ಲಿರುವ ಆರ್ಥಿಕತೆಯನ್ನು ಸುಧಾರಿಸಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಹಣಕಾಸು ಸಚಿವೆ ಭರವಸೆ ನೀಡಿದರು.
ನಿಧಾನಗತಿಯ ಆರ್ಥಿಕ ಪ್ರಗತಿಯ ಪರಿಣಾಮ ಕಾರ್ಪೋರೇಟ್ ತೆರಿಗೆ ಕಡಿತದಂತಹ ದಿಟ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ, ತನ್ನ ಹಣಕಾಸಿನ ಕೊರತೆಯ ಸಮಸ್ಯೆಗಳನ್ನು ಆದಷ್ಟು ಬೇಗ ಸುಧಾರಿಸಿಕೊಳ್ಳಲಿದೆ ಎಂಬುದು ಕೇವಲ ಊಹೆ ಎಂದು ವಿತ್ತ ಸಚಿವೆ ಮಾರ್ಮಿಕವಾಗಿ ಹೇಳಿದರು.
GST ಕುರಿತ ನಿರ್ಮಾಲಾ ಸೀತಾರಾಮನ್ ಹೇಳಿಕೆ: ಚೆನ್ನೈನಲ್ಲಿರುವ ಮೋದಿ ಕೇಳ್ಬೇಕೆ?
ಇದೇ ವೇಳೆ ಸರ್ಕಾರದ ಆಸ್ತಿ ಮಾರಾಟದಿಂದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ಅಲ್ಲದೇ ದೇಶದ ಸಹಕಾರಿ ಬ್ಯಾಂಕ್‌ಗಳನ್ನು ರಿಸರ್ವ್ ಬ್ಯಾಂಕ್ ವ್ಯಾಪ್ತಿಯಲ್ಲಿ ತರುವ ಕುರಿತು ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ನವೆಂಬರ್ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.