Telangana ಪಡಿತರ ಕೇಂದ್ರದಲ್ಲಿ ಮೋದಿ ಫೋಟೋ ನಾಪತ್ತೆ: ನಿರ್ಮಲಾ ಸೀತಾರಾಮನ್‌ ಗರಂ

By BK AshwinFirst Published Sep 3, 2022, 3:19 PM IST
Highlights

ಬಿಕನೂರಿನಲ್ಲಿರುವ ಪಡಿತರ ಕೇಂದ್ರದಲ್ಲಿ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಸೀತಾರಾಮನ್, ಪ್ರಧಾನ ಮಂತ್ರಿಯವರ ಫೋಟೋವನ್ನು ಏಕೆ ಇಡಲಿಲ್ಲ ಎಂದು ಕೇಳಿದರು ಮತ್ತು ಕೇಂದ್ರದ ಕೊಡುಗೆ ಪ್ರತಿ ಕೆಜಿ ಪಡಿತರ ಅಕ್ಕಿಗೆ 29 ರೂ ಆಗಿದ್ದರೆ, ರಾಜ್ಯವು ಕೇವಲ 4 ರೂಗಳನ್ನು ನೀಡುತ್ತದೆ ಮತ್ತು  ಫಲಾನುಭವಿ 1 ರೂ ಪಾವತಿಸುತ್ತಾರೆ ಎಂದೂ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. 

ನ್ಯಾಯಬೆಲೆ ಪಡಿತರ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು (Photo) ಹಾಕದ ತೆಲಂಗಾಣದ ಕಾಮರೆಡ್ಡಿ ಜಿಲ್ಲಾಧಿಕಾರಿ ಜಿತೇಶ್ ಪಾಟೀಲ್ ಅವರನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮೂಲಕ (Fair Price Shops) (ಎಫ್‌ಪಿಎಸ್) ಸರಬರಾಜು ಮಾಡುವ ಅಕ್ಕಿಯಲ್ಲಿ (Rice) ಕೇಂದ್ರ ಮತ್ತು ರಾಜ್ಯಗಳ ಪಾಲು ಎಷ್ಟು ಎಂದು ವಿವರಿಸಲು ಅವರು ಅಧಿಕಾರಿಯನ್ನು ಕೇಳಿದರು. ಬಿಜೆಪಿಯ ‘ಲೋಕಸಭಾ ಪ್ರವಾಸ ಯೋಜನೆ’ಯ ಭಾಗವಾಗಿ ಜಹೀರಾಬಾದ್ ಸಂಸದೀಯ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ನಿರ್ಮಲಾ ಸೀತಾರಾಮನ್, ರಾಜ್ಯದಲ್ಲಿ ಫಲಾನುಭವಿಗಳಿಗೆ 1 ರೂಪಾಯಿಗೆ ಮಾರಾಟವಾಗುತ್ತಿರುವ ಸಬ್ಸಿಡಿ ಅಕ್ಕಿಯಲ್ಲಿ ಕೇಂದ್ರವು ಸಿಂಹ ಪಾಲು ಹೊಂದಿದೆ ಎಂದೂ ಹೇಳಿದ್ದಾರೆ.

ಬಿಕನೂರಿನಲ್ಲಿರುವ ಪಡಿತರ ಕೇಂದ್ರದಲ್ಲಿ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ನಿರ್ಮಲಾ ಸೀತಾರಾಮನ್, ಪ್ರಧಾನ ಮಂತ್ರಿಯವರ ಫೋಟೋವನ್ನು ಏಕೆ ಹಾಕಿಲ್ಲ ಎಂದು ಕೇಳಿದರು. ಅಲ್ಲದೆ, ಕೇಂದ್ರದ ಕೊಡುಗೆ ಪ್ರತಿ ಕೆಜಿ ಪಡಿತರ ಅಕ್ಕಿಗೆ 29 ರೂ. ಆಗಿದ್ದರೆ, ರಾಜ್ಯವು ಕೇವಲ 4 ರೂ.ಗಳನ್ನು ಪಾವತಿಸುತ್ತದೆ ಮತ್ತು ಫಲಾನುಭವಿ 1 ರೂ. ಪಾವತಿಸುತ್ತಾರೆ ಎಂದು ಹೇಳಿದ್ದಾರೆ. ಈ ಮಧ್ಯೆ, ಮಾರ್ಚ್-ಏಪ್ರಿಲ್ 2020 ರಿಂದ, ರಾಜ್ಯ ಸರ್ಕಾರ ಮತ್ತು ಫಲಾನುಭವಿಗಳು ಏನನ್ನೂ ನೀಡದೆಯೇ ಕೇಂದ್ರವು 30 - 35 ರೂ. ಬೆಲೆಯ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ ಎಂದೂ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಈ ಹಂತದಲ್ಲಿ, ರಾಜ್ಯ ಮತ್ತು ಕೇಂದ್ರದ ಪಾಲು ನಿಮಗೆ ತಿಳಿದಿದೆಯೇ ಎಂದು ಅವರು ಜಿಲ್ಲಾಧಿಕಾರಿಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಜಿತೇಶ್ ಪಾಟೀಲ್ ತಮಗೆ ಗೊತ್ತಿಲ್ಲ ಎಂದು ಹೇಳಿದರು. ಈ ಹಿನ್ನೆಲೆ, "ಅರ್ಧ ಗಂಟೆಯೊಳಗೆ (ಕೇಂದ್ರ ಮತ್ತು ರಾಜ್ಯ ಸರ್ಕಾರದ ಪಾಲು) ಪತ್ತೆ ಮಾಡಿ ಮತ್ತು ನನಗೆ ಉತ್ತರವನ್ನು ನೀಡಿ" ಎಂದು ಕೇಂದ್ರ ಸಚಿವೆ ಪ್ರತಿಕ್ರಿಯೆ ನೀಡಿದ್ದಾರೆ.

ಜಗತ್ತಲ್ಲಿ ಆಗಿದ್ದಾಗಲಿ ನಮಗಂತೂ ನೋ ಟೆನ್ಷನ್: ಭಾರತಕ್ಕೆ ನಿರ್ಮಲಾ ಸೀತಾರಾಮನ್ ಅಭಯ!‌

"ನೀವು ಅದರ ಬಗ್ಗೆ ಯೋಚಿಸಿ ಮತ್ತು ಅರ್ಧ ಗಂಟೆಯೊಳಗೆ, ಮಾಧ್ಯಮದ ಎದುರು ನನ್ನ ಭಾಷಣದ ಮೊದಲು (ಉತ್ತರದೊಂದಿಗೆ ಬನ್ನಿ). ಹೀಗಾಗಿ ಜಿಲ್ಲಾಧಿಕಾರಿ ನನ್ನ ಪ್ರಶ್ನೆಗೆ ತಕ್ಷಣ ಉತ್ತರಿಸಲು ಸಾಧ್ಯವಾಗದಿದ್ದರೂ ಹೋರಾಟ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಹೇಳುತ್ತೇನೆ'' ಎಂದು ನಿರ್ಮಲಾ ಸೀತಾರಾಮನ್‌ ಛೀಮಾರಿ ಹಾಕಿದರು. ಅಲ್ಲದೆ, ತೆಲಂಗಾಣದ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಧಾನಿಯವರ ಚಿತ್ರಗಳನ್ನು ಹಾಕುವಂತೆ ಈ ಹಿಂದೆ ಮನವಿ ಮಾಡಿದಾಗಲೂ ಅದಕ್ಕೆ ಅವಕಾಶ ನೀಡಿರಲಿಲ್ಲ ಎಂದೂ ಕೇಂದ್ರ ಸಚಿವೆ ಹೇಳಿಕೊಂಡಿದ್ದಾರೆ. ಫೋಟೋ ಹಾಕಲು ಮುಂದಾದ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ ನೀಡಿಲ್ಲ ಎಂದೂ ನಿರ್ಮಲಾ ಸೀತಾರಾಮನ್‌ ಕಿಡಿಕಾರಿದರು.

"ನಾನು ಇಂದು ನಿಮಗೆ ಹೇಳುತ್ತಿದ್ದೇನೆ. ನಮ್ಮ ಜನ ಬಂದು ಇಲ್ಲಿ ಪ್ರಧಾನಿಯವರ ಬ್ಯಾನರ್ ಹಾಕುತ್ತಾರೆ. ಅದನ್ನು ತೆಗೆದುಹಾಕದಂತೆ ಜಿಲ್ಲಾ ಆಡಳಿತಾಧಿಕಾರಿಯಾಗಿ ನೀವು ಖಚಿತಪಡಿಸಿಕೊಳ್ಳುತ್ತೀರಿ. ಅದನ್ನು ಹರಿದು ಹಾಕಬಾರದು ಎಂದು ಸಹ ನಿರ್ಮಲಾ ಸೀತಾರಾಮನ್‌ ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದರು. ಇನ್ನೊಂದೆಡೆ, ಕಾಮರೆಡ್ಡಿ ಜಿಲ್ಲೆ ಮತ್ತು ಬಾನ್ಸವಾಡ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗೆ ಕೇಂದ್ರ ಸಚಿವರು ನೀಡಿದ ನಿರ್ದೇಶನದ ಬಗ್ಗೆ ರಾಜ್ಯ ಸರ್ಕಾರ ಕಿಡಿ ಕಾರಿದೆ. ತೆಲಂಗಾಣ ವಿತ್ತ ಸಚಿವ ಟಿ. ಹರೀಶ್ ರಾವ್ ಮತ್ತು ಬನ್ಸವಾಡವನ್ನು ಪ್ರತಿನಿಧಿಸುವ ವಿಧಾನಸಭಾ ಸ್ಪೀಕರ್ ಪೋಚಾರಂ ಶ್ರೀನಿವಾಸರೆಡ್ಡಿ ಅವರು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು ಮತ್ತು ಪ್ರಧಾನಿಯವರ ಫೋಟೋಗಳು ಹಾಗೂ ಫ್ಲೆಕ್ಸ್‌ಗಳನ್ನು ಒಯ್ಯುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸುವ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದರು.

ಮೊಸರು, ಲಸ್ಸಿ, ಗೋಧಿ ಮೇಲಿನ ಜಿಎಸ್ ಟಿ ಬಡವರಿಗೆ ಹೊರೆಯಾಗದು: ನಿರ್ಮಲಾ ಸೀತಾರಾಮನ್

click me!