Union Budget 2023 ಮಧ್ಯಮ ವರ್ಗಕ್ಕೆ ಬಂಪರ್, ಆದಾಯ ತೆರಿಗೆ ಮಿತಿ 7 ಲಕ್ಷ ರೂಗೆ ಏರಿಕೆ!

By Suvarna NewsFirst Published Feb 1, 2023, 12:56 PM IST
Highlights

ಮಧ್ಯಮ ವರ್ಗಕ್ಕೆ ಈ ಬಾರಿಯ ಬಜೆಟ್ ಬಂಪರ್ ಕೊಡುಗೆ ನೀಡಿದೆ. ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಂದ  7 ಲಕ್ಷ ರೂಪಾಯಿವರೆಗೆ ಏರಿಕೆ ಮಾಡಲಾಗಿದೆ. ಇದರ ಜೊತೆಗೆ ವೈಯುಕ್ತಿಕ ತೆರಿಗೆದಾರರಿಗೂ ಬಂಪರ್ ಕೂಡುಗೆ ನೀಡಲಾಗಿದೆ.

ನವದೆಹಲಿ(ಫೆ.01) ಭಾರಿ ಕುತೂಹಲ ಮೂಡಿಸಿದ್ದ ಈ ಬಾರಿಯ ಬಜೆಟ್ ಮಧ್ಯಮ ವರ್ಗಕ್ಕೆ ಬಂಪರ್ ಕೊಡುಗೆ ಘೋಷಿಸುವ ಮೂಲಕ ಜನಸಾಮಾನ್ಯರ ಹೊರೆಯನ್ನು ತಗ್ಗಿಸಿದೆ. ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಸೆಕ್ಷನ್ 87ಎ ಅಡಿಯಲ್ಲಿ 5 ರಿಂದ 7 ಲಕ್ಷ ರೂಪಾಯಿ ತೆರಿಗೆ ಮಿತಿ ಏರಿಕೆ ಮಾಡಲಾಗಿದೆ ಇದು ನೇರವಾಗಿ ಮಧ್ಯಮ ವರ್ಗಕ್ಕೆ ಪ್ರಯೋಜನವಾಗಲಿದೆ. ಸಂಬಳ ಪಡೆಯುವ ವರ್ಗ ಇದೀಗ 7 ಲಕ್ಷ ರೂಪಾಯಿವರೆಗೆ ಯಾವುದೇ ಆದಾಯ ತೆರಿಗೆ ಪಾವತಿಸುವಂತಿಲ್ಲ. ಇದರ ಜೊತೆಗೆ ವೈಯುಕ್ತಿಕ ತೆರಿಗೆದಾರರಿಗೂ ಬಂಪರ್ ಕೊಡುಗೆ ನೀಡಲಾಗಿದೆ. ವೈಯುಕ್ತಿಕ ತೆರಿಗೆಯನ್ನು 2 ಲಕ್ಷ ರೂಪಾಯಿಯಿಂದ ಇದೀಗ 3 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. 

ಸಂಸತ್ತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಆದಾಯ ತೆರಿಗೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಮಧ್ಯಮ ವರ್ಗದ ಜನರು ತೆರಿಗೆ ಪಾವತಿ ಮಿತಿಯನ್ನು ಏರಿಕೆ ಮಾಡುವ ಮೂಲಕ ಶ್ರಮಜೀವಿ ವರ್ಗಕ್ಕೆ ಕೇಂದ್ರ ಸರ್ಕಾರ ಜಾಕ್‌ಪಾಟ್ ನೀಡಿದೆ. ಇದೀಗ ವೇತನ ಪಡೆಯುವ ವರ್ಗ 7 ಲಕ್ಷ ರೂಪಾಯಿ ವರೆಗೆ ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. ಇದುವರೆಗೆ 5 ಲಕ್ಷ ರೂಪಾಯಿ ವರೆಗೆ ಮಾತ್ರ ಆದಾಯ ತೆರಿಗೆ ವಿನಾಯಿತಿ ಮಾಡಲಾಗಿತ್ತು. ಇದೀಗ ಈ ಮಿತಿಯನ್ನು 7 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಹೊಸ ಟ್ಯಾಕ್ಸ್ ರಿಜಿಮ್ ಡಿಫಾಲ್ಟ್ ಆಗಿರಲಿದೆ. 

 ಮದ್ಯಮ ವರ್ಗದ ಬಯಕೆ ಈಡೇರಿಸಿದ ನಿರ್ಮಲಾ, 7 ಲಕ್ಷ ರೂ.ಆದಾಯಕ್ಕೆ ತೆರಿಗೆ ಇಲ್ಲ

2014ರಿಂದ ಆಡಳಿತದಲ್ಲಿರುವ ಮೋದಿ ಸರ್ಕಾರ ಇದೀಗ ಎರಡನೇ ಬಾರಿಗೆ ತೆರಿಗೆ ವಿನಾಯಿತಿ ಘೋಷಿಸಿದೆ. ಇನ್ನು ವೈಯುಕ್ತಿಕ ತೆರಿಗೆದಾರರಿಗೂ ಬಂಪರ್ ಕೊಡುಗೆ ನೀಡಿದೆ. 2.5 ಲಕ್ಷ ರೂಪಾಯಿ ವರೆಗಿದ್ದ ವೈಯುಕ್ತಿಕ ತೆರಿಗೆ ವಿನಾಯಿತಿಯನ್ನು 3 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇದೀಗ 3 ಲಕ್ಷ ರೂಪಾಯಿ ವರೆಗೆ ವೈಯುಕ್ತಿಕ ತೆರಿಗೆದಾರರು ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. 3 ರಿಂದ 6 ಲಕ್ಷ ರೂಪಾಯಿ ಆದಾಯ ಹೊಂದಿದ ವೈಯುಕ್ತಿಕ ತೆರಿಗೆದಾರರು ಶೇಕಡ 5 ರಷ್ಟು ತೆರಿಗೆ ಪಾವತಿ ಮಾಡಬೇಕು.

ವೈಯಕ್ತಿಕ ತೆರಿಗೆದಾರರಿಗೆ ಜಾಕ್‌ಪಾಟ್
2.5 ಲಕ್ಷದವರಿಗೆ ಇದ್ದ ತೆರಿಗೆ ಮಿತಿ 3 ಲಕ್ಷ ರೂ. ಗೆ ಏರಿಕೆ
0-3 ಲಕ್ಷವರೆಗೆ ಯಾವುದೇ ತೆರಿಗೆ ಇಲ್ಲ
3-6 ಲಕ್ಷದವರೆಗೆ  ಶೇ.5ರಷ್ಟು ತೆರಿಗೆ
6-9 ಲಕ್ಷದವರೆಗೆ ಶೇ.10ರಷ್ಟು ತೆರಿಗೆ
9-12 ಲಕ್ಷದವರೆಗೆ ಶೇ.15ರಷ್ಟು ತೆರಿಗೆ
12 - 15 ಲಕ್ಷದವರಿಗೆ ಶೇ.20 ರಷ್ಟು ತೆರಿಗೆ
15 ಲಕ್ಷಕ್ಕಿಂತ ಮೇಲ್ಪಟ್ಟವರಿಗೆ ಶೇ.30ರಷ್ಟು ತೆರಿಗೆ

Budget 2023: ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ!

ಇದೀಗ 9 ಲಕ್ಷ ರೂಪಾಯಿ ಆದಾಯಗಳಿಸುವ ವೈಯುಕ್ತಿಕ ತೆರಿಗೆದಾರ ಹೊಸ ತೆರಿಗೆ ನೀತಿ ಪ್ರಕಾರ ವಾರ್ಷಿಕವಾಗಿ 45,000 ರೂಪಾಯಿ ತೆರೆಗಿ ಪಾವತಿಸಬೇಕು. ಸದ್ಯ 60,000 ರೂಪಾಯಿ ತೆರೆಗೆ ಪಾವತಿ ಮಾಡಬೇಕು. ಆದರೆ ಬಜೆಟ್‌ನಲ್ಲಿ ಮಧ್ಯಮ ವರ್ಗದ ತೆರಿಗೆ ಪಾವತಿ ಮೇಲೆ ಕರುಣೆ ತೋರಲಾಗಿದೆ. ಹೀಗಾಗಿ ಈ ಬಾರಿ 15,000 ರೂಪಾಯಿ ಉಳಿತಾಯವಾಗಲಿದೆ.  

click me!